Advertisement

2021ರ ಹಜ್‌ ಯಾತ್ರೆಗೆ ಕೋವಿಡ್‌ ನೆಗೆಟಿವ್‌ ವರದಿ ಸಲ್ಲಿಕೆ ಕಡ್ಡಾಯ: ನಖೀÌ

09:40 PM Nov 07, 2020 | sudhir |

ಮುಂಬಯಿ : 2021ರಲ್ಲಿ ಹಜ್‌ ಯಾತ್ರಾರ್ಥಿಗಳು ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲು 72 ಗಂಟೆಗಳ ಮೊದಲು ತಮ್ಮ ಕೋವಿಡ್‌-19 ನೆಗೆಟಿವ್‌ ವರದಿಯನ್ನು ಸಲ್ಲಿಸಬೇಕಾಗುತ್ತದೆ ಎಂದು ಕೇಂದ್ರ ಸಚಿವ ಮುಖ್ತಾರ್‌ ಅಬ್ಬಾಸ್ ನಖ್ವಿ ಶನಿವಾರ ಹೇಳಿದ್ದಾರೆ.

Advertisement

ಹಜ್‌ ಸಮಿತಿ ಮತ್ತು ಇತರ ಏಜೆನ್ಸಿಗಳೊಂದಿಗೆ ಸಭೆ ನಡೆಸಿದ ಅನಂತರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅಲ್ಪಸಂಖ್ಯಾಕ ವ್ಯವಹಾರಗಳ ಸಚಿವರು, 2021ರ ಹಜ್‌ ತೀರ್ಥಯಾತ್ರೆಗೆ ಅರ್ಜಿಗಳನ್ನು ಸಲ್ಲಿಸಲು ಡಿ. 10 ಕೊನೆಯ ದಿನಾಂಕವಾಗಿದೆ ಎಂದರು.

ಅರ್ಜಿದಾರರು ಆನ್‌ಲೈನ್‌, ಆಫ್‌ಲೈನ್‌ ಅಥವಾ ಹಜ್‌ ಮೊಬೈಲ್‌ ಆ್ಯಪ್‌ ಮೂಲಕವೂ ಅರ್ಜಿ ಸಲ್ಲಿಸಬಹುದು. ಕೊರೊನಾ ಮಹಾಮಾರಿಯ ದೃಷ್ಟಿಯಿಂದ ಎಲ್ಲ ಯಾತ್ರರ್ಥಿಗಳಿಗೆ ತಮ್ಮ ಆರ್‌ಟಿ-ಪಿಸಿಆರ್‌ ಪರೀಕ್ಷೆಯ ಕೋವಿಡ್‌-19 ನೆಗೆಟಿವ್‌ ವರದಿಯನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸುತ್ತಿದ್ದೇವೆ. ಸೌದಿ ಅರೇಬಿಯಾಕ್ಕೆ ವಿಮಾನ ಹತ್ತುವ ದಿನಾಂಕದ 72 ಗಂಟೆಗಳಿಗೆ ಮೊದಲು ಪರೀಕ್ಷೆಗೆ ಒಳಗಾಗಬೇಕು ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ:ಕಾರ್ಯಪಡೆ ಶಿಫಾರಸ್ಸು ಸಚಿವ ಸಂಪುಟದ ಮುಂದಿಡಲಾಗುವುದು: ಡಾ.ಅಶ್ವತ್ಥನಾರಾಯಣ

ಕೋವಿಡ್‌-19 ಪರಿಸ್ಥಿತಿ ಹಾಗು ಏರ್‌ ಇಂಡಿಯಾ ಮತ್ತು ಇತರ ಏಜೆನ್ಸಿಗಳಿಂದ ಪಡೆದ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಹಜ್‌ 2021ಕ್ಕೆ ವಿಮಾನ ಹತ್ತುವ ಸ್ಥಳಗಳ ಸಂಖ್ಯೆಯನ್ನು ಹತ್ತಕ್ಕೆ ಇಳಿಸಲಾಗಿದೆ ಎಂದು ನಖ್ವಿ ತಿಳಿಸಿದ್ದಾರೆ. ಈ ಹಿಂದೆ ದೇಶಾದ್ಯಂತ ಇಂತಹ 21 ಸ್ಥಳಗಳು ಇದ್ದವು.

Advertisement

ಅಹಮದಾಬಾದ್‌, ಬೆಂಗಳೂರು, ಕೊಚ್ಚಿನ್‌, ದೆಹಲಿ, ಗುವಾಹಟಿ, ಹೈದರಾಬಾದ್‌, ಕೋಲ್ಕತಾ, ಲಕ್ನೋ, ಮುಂಬಯಿ ಮತ್ತು ಶ್ರೀನಗರ 10 ಬೋರ್ಡಿಂಗ್‌ ಸ್ಥಳಗಳಾಗಿವೆ ಎಂದವರು ಹೇಳಿದ್ದಾರೆ. ವಿತ್‌ ಮೆಹ್ರಾಮ್‌ (ಪುರುಷ ಒಡನಾಡಿ) ವಿಭಾಗದಲ್ಲಿ ಮಹಿಳೆಯರು 2020ರ ಹಜ್‌ ಯಾತ್ರೆಗೆ ಸಲ್ಲಿಸಿರುವ ಅರ್ಜಿಗಳು 2021ರ ಹಜ್‌ ಯಾತ್ರೆಗೆ ಮಾನ್ಯಗೊಳಿಸಲಾಗಿದೆ. ಮೆಹ್ರಾಮ್‌ ಇಲ್ಲದೆ 2021ರ ಹಜ್‌ ಯಾತ್ರೆ ಕೈಗೊಳ್ಳಲು ಬಯಸುವ ಮಹಿಳೆಯರಿಂದಲೂ ಹೊಸ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ನಖ್ವಿ ತಿಳಿಸಿದ್ದಾರೆ.

ವಿತ್‌ ಮೆಹ್ರಾಮ… ವಿಭಾಗದಲ್ಲಿ ಅರ್ಜಿ ಸಲ್ಲಿಸುವ ಮುಸ್ಲಿಂ ಮಹಿಳೆಯರಿಗೆ ಲಾಟರಿ ವ್ಯವಸ್ಥೆಯಿಂದ ವಿನಾಯಿತಿ ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next