ಅಲ್ಪಸಂಖ್ಯಾಕ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
Advertisement
ಬಜಪೆ ಅನ್ಸಾರ್ ಆಂಗ್ಲ ಮಾಧ್ಯಮ ಶಾಲೆಯ ಸಭಾಭವನದಲ್ಲಿ ಭಾರತೀಯ ಹಜ್ ಸಮಿತಿ ಮೂಲಕ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಡುವ ಪವಿತ್ರ ಹಜ್ ಯಾತ್ರೆಯ ಪ್ರಥಮ ತಂಡಕ್ಕೆ ಶನಿವಾರ ಚಾಲನೆ ನೀಡಿದರು. ಅಡ್ಯಾರ್‌ನಲ್ಲಿ ಹಜ್ ಭವನ ಹಜ್ ಭವನಕ್ಕೆ ಬಜಪೆ ಸಮೀಪ ಮಂಜೂರಾದ ಸ್ಥಳ ಕೈಬಿಟ್ಟು ಅಡ್ಯಾರ್‌ನಲ್ಲಿ ಖಾಸಗಿ ಜಾಗ ಪರಿಶೀಲನೆ ಮಾಡಲಾಗಿದೆ. ಅಲ್ಲಿ ಹಜ್ ಭವನ ನಿರ್ಮಿಸುವ ಯೋಜನೆ ಇದೆ ಎಂದರು.ಉಡುಪಿ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಖಾಜಿ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್, ಮಂಗಳೂರು ಹಜ್ ಕ್ಯಾಂಪ್‌ನ ನಿರ್ವಹಣ ಸಮಿತಿ ಅಧ್ಯಕ್ಷ ವೈ. ಮಹಮದ್ ಕುಂಞಿ, ಪ್ರ. ಕಾರ್ಯದರ್ಶಿ ಎಸ್.ಎಂ.ರಶೀದ್, ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಯು.ಕೆ. ಮೋನು, ಕೆ.ಪಿ. ಇಬ್ರಾಹಿಂ, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್.ಎಂ. ಮಸೂದ್ ಇದ್ದರು. ಹಜ್ ಸಮಿತಿ ಇಒ ಸಫ್ìರಾಜ್ ಖಾನ್ ಸರ್ದಾರ್ ಸ್ವಾಗತಿಸಿದರು.
ರಾಜ್ಯದ 6,624 ಸಹಿತ ಭಾರತದಿಂದ ಈ ಬಾರಿ 1.73 ಲಕ್ಷ ಮಂದಿ ಹಜ್ ಯಾತ್ರೆ ಮಾಡಲಿದ್ದಾರೆ. ಒಟ್ಟು 18,427 ಅರ್ಜಿಗಳು ಬಂದಿದ್ದವು. ದ.ಕ., ಉಡುಪಿ, ಕೊಡಗು, ಹಾಸನ, ಚಿಕ್ಕಮಗಳೂರಿನ 432 ಮಂದಿ 42 ದಿನಗಳ ಯಾತ್ರೆ ಕೈಗೊಳ್ಳಲಿದ್ದಾರೆ.
ಸೆ. 1-3ರಂದು ವಾಪಸಾಗುವರು ಎಂದು ಕೆ.ಎಂ. ಅಬೂಬಕರ್ ಮೋಂಟುಗೋಳಿ ತಿಳಿಸಿದ್ದಾರೆ.