ನವದೆಹಲಿ: ನವದೆಹಲಿ: ಭಾರತದ ದಕ್ಷಿಣ ತುದಿಯಾದ ಕನ್ಯಾಕುಮಾರಿಯಿಂದ ಹಿಡಿದು ಉತ್ತರದ ಕಾಶ್ಮೀರದ ವರೆಗೆ ಸುಮಾರು 3,500 ಕಿ.ಮೀ ಮಾರ್ಗದ ಭಾರತ ಜೋಡೋ ಯಾತ್ರೆಯನ್ನು ಕೈಗೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾತ್ರೆ ಪೂರ್ಣಗೊಳ್ಳುವ ವೇಳೆ ಗಡ್ಡಧಾರಿಯಾಗಿ ಕಾಣಿಸಿಕೊಂಡಿದ್ದ ಅವರ ಕೇಶ ವಿನ್ಯಾಸ ಸಂಪೂರ್ಣ ಬದಲಾಗಿದೆ.
ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡುವ ಸಲುವಾಗಿ ಒಂದು ವರದ ಮಟ್ಟಿಗೆ ಇಂಗ್ಲೆಂಡ್ ಗೆ ತೆರಳಿರುವ ರಾಹುಲ್ ಗಾಂಧಿ ತಮ್ಮ ಉದ್ದನೆಯ ಗಡ್ಡಕ್ಕೆ ಕತ್ತರಿ ಹಾಕಿ ಸೂಟ್ ನಲ್ಲಿ ಮಿಂಚಿದ್ದಾರೆ, ಅಲ್ಲದೆ ಅವರ ಹೊಸ ಅವತಾರದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಒಂದು ವಾರದ ಮಟ್ಟಿಗೆ ಇಂಗ್ಲೆಂಡ್ ಗೆ ತೆರಳಿದ ರಾಹುಲ್ ಗಡ್ಡ ಮೀಸೆಗೆ ಕತ್ತರಿ ಹಾಕಿದ್ದಾರೆ ಅಲ್ಲದೆ ಜೋಡೋ ಯಾತ್ರೆ ಸಂದರ್ಭದಲ್ಲಿ ಬಿಳಿ ಟಿ ಶರ್ಟ್ ನಲ್ಲೆ ಕಾಣಿಸಿಕೊಂಡಿದ್ದ ರಾಹುಲ್ ಇದೀಗ ಸೂಟು ಬೂಟು ಧರಿಸಿದ್ದಾರೆ. ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಬಿಟ್ಟಿದ್ದ ಗಡ್ಡಕ್ಕೆ ಜನರಿಂದ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿತ್ತು.
ಇದನ್ನೂ ಓದಿ: ಪ್ರಧಾನಿಯಿಂದ ಮಾ 12 ಕ್ಕೆ ಬೆಂಗಳೂರು-ಮೈಸೂರು ಹೈವೇ ಲೋಕಾರ್ಪಣೆ