– ಅಭಿಮಾನಿಗಳಿಗೆ ಇವರೇ ಅನುಕರಿಸುವ ಆರಾಧ್ಯ ದೈವ
Advertisement
ಅತ್ಯಾಕರ್ಷಕ ಕೇಶವಿನ್ಯಾಸಕ್ಕೆ ಜಗತ್ತಲ್ಲಿ ಯಾರಾದರೂ ಮಾರು ಹೋಗದವರುಂಟೆ?…ಬಾಲಿವುಡ್ ತಾರೆಯರಿಂದ ಹಿಡಿದು ಕ್ರಿಕೆಟಿಗರ ತನಕ ಎಲ್ಲರಿಗೂ ಹೊಸ ವಿನ್ಯಾಸಗಳನ್ನು ಮಾಡಿಸುವುದು, ಒಂದು ಫೋಟೊ ಕ್ಲಿಕ್ಕಿಸಿ ಸಂಭ್ರಮಿಸುವುದೆಂದರೆ ಇಷ್ಟ. ಕ್ರಿಕೆಟಿಗರು ಸ್ಫೋಟಕ ಬ್ಯಾಟಿಂಗ್‌ನಿಂದ ಜನರಿಗೆ ಹತ್ತಿರವಾಗುವುದು ಬೇರೆ, ತಮ್ಮ ಸ್ಟೈಲ್‌ನಿಂದಲೇ ಜನರಿಗೆ ಹತ್ತಿರವಾಗುವುದು ಇನ್ನೊಂದು ರೀತಿ. ಹೌದು, ವಿಶ್ವದ ಖ್ಯಾತ ಆಟಗಾರರು ಕೇಶವಿನ್ಯಾಸದಿಂದಲೂ ಅಭಿಮಾನಿಗಳಿಗೆ ಇಷ್ಟವಾಗಿದ್ದಾರೆ.
Related Articles
ಎಂ.ಎಸ್. ಧೋನಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಮಯದಲ್ಲಿ ಉದ್ದಕೂದಲು ಬಿಟ್ಟಿದ್ದರು. ಲಕ್ಷಾಂತರ ಯುವಕರು ಧೋನಿ ಕೇಶವಿನ್ಯಾಸಕ್ಕೆ ಮಾರುಹೋಗಿದ್ದಂಟು. ಮುಂದೆ ಐಪಿಎಲ್ ಆರಂಭವಾಗುತ್ತಿದ್ದಂತೆ ಧೋನಿ ಉದ್ದಕೂದಲಿಗೆ ಕತ್ತರಿ ಬಿತ್ತು. ಮತ್ತೂಂದು ವಿಶೇಷ ರೀತಿಯಲ್ಲಿ ಕೇಶವಿನ್ಯಾಸ ಮಾಡಿಸಿಕೊಂಡು ಧೋನಿ ಗಮನ ಸೆಳೆದರು.
Advertisement
ಸ್ಟೈಲ್‌ಗೇ ಗುರು ನಮ್ಮ ಕೊಹ್ಲಿಜಿಮ್ನಲ್ಲಿ ಗಂಟೆಗಟ್ಟಲೆ ವರ್ಕೌಟ್ ಮಾಡಿ ದೇಹವನ್ನು ಫಿಟ್ ಆಗಿ ನೋಡಿಕೊಳ್ಳುವ ಕೊಹ್ಲಿ ಕೂಡ ಕೇಶವಿನ್ಯಾಸ ಪ್ರಿಯ. ವಿನ್ಯಾಸವನ್ನು ಮಾಡಿಸಿಕೊಳ್ಳುವುದರಲ್ಲೂ ಕೊಹ್ಲಿ ಯಾವಾಗಲೂ ಒಂದು ಹೆಜ್ಜೆ ಮುಂದು. ತಮ್ಮ ಅಚ್ಚುಮೆಚ್ಚಿನ ಕೇಶ ವಿನ್ಯಾಸಕಾರನ ಬಳಿ ಪಂದ್ಯಕ್ಕೂ ಮುನ್ನ ಹೋಗುವ ಕೊಹ್ಲಿ ತಮಗೆ ಬೇಕಾದ ರೀತಿಯಲ್ಲಿ ವಿನ್ಯಾಸ ಮಾಡಿಸಿಕೊಳ್ಳುತ್ತಾರೆ. ಜಡ್ಡು ಸಿಎಸ್‌ಕೆ ಲುಕ್
ಆಲ್‌ರೌಂಡರ್ ರವೀಂದ್ರ ಜಡೇಜ ಪಂದ್ಯದಿಂದ ಪಂದ್ಯಕ್ಕೆ ತಮ್ಮ ಹೇರ್‌ಸ್ಟೈಲ್‌ಗಳನ್ನು ಬದಲಾಯಿಸುತ್ತಲೇ ಇರುತ್ತಾರೆ. ಐಪಿಎಲ್‌ನಲ್ಲಿ ಒಂದು ರೀತಿ ಇದ್ದರೆ ಏಕದಿನ ಅಥವಾ ಟಿ20 ಅಂತಾರಾಷ್ಟ್ರೀಯ ಕೂಟಕ್ಕೆ ಬಂದಾಗ ಬದಲಾದ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಸಿಎಸ್‌ಕೆ ಆಟಗಾರ 2020 ಐಪಿಎಲ್‌ನಲ್ಲಿ ಹೇಗೆ ಕಾಣಿಸಿಕೊಳ್ಳುವರು ಎನ್ನುವ ಬಗ್ಗೆ ಕುತೂಹಲವಿದೆ.
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಫೀಲ್ಡ್‌ನಲ್ಲಿ ಮಾಡುವಷ್ಟೇ ಸದ್ದನ್ನು ಅದರಿಂದ ಆಚಿಗೂ ಮಾಡುತ್ತಾರೆ. ಅದು ವಿವಿಧ ವಿನ್ಯಾಸದ ಹೇರ್‌ಸ್ಟೈಲ್‌ನಿಂದ. ಮಿಲಿಟರಿ ಕಟ್ಟಿಂಗ್‌ನಿಂದ ಹಿಡಿದು ಎಲ್ಲ ರೀತಿಯ ಕಟ್ಟಿಂಗ್‌ಗಳೂ ಹಾರ್ದಿಕ್‌ಗೆ ಚೆನ್ನಾಗಿ ಕಾಣಿಸುತ್ತದೆ. ಅಂತಹ ಅಪರೂಪದ ಆಟಗಾರ ಪಾಂಡ್ಯ ಎನ್ನುವುದು ಕೇಶವಿನ್ಯಾಸಕಾರ ಆಲಿಮ್ ಅಭಿಪ್ರಾಯ.
ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಕೂಡ ಕೇಶ ವಿನ್ಯಾಸ ಮಾಡಿಸಿಕೊಳ್ಳುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಜತೆಗೆ ಮೈಮೆಲೆಲ್ಲ ಟ್ಯಾಟು ಹಾಕಿಸಿಕೊಳ್ಳುವುದೂ ಕೂಡ ಅವರಿಗೆ ಇಷ್ಟ.
ಶಿಖರ್ ಧವನ್ ಭಾರತ ತಂಡದ ನ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್. ಧವನ್‌ಗೆ ತಲೆಕೂದಲನ್ನು ಸಣ್ಣಗೆ ಕಟ್ ಮಾಡಿಸಿಕೊಳ್ಳುತ್ತಾರೆ. ಹಿಂದೆ ಸ್ವಲ್ಪ ಉದ್ದವಾಗಿ ಇರುವಂತೆ ತಲೆಕೂದಲು ಬಿಡುವುದೆಂದರೆ ಬಲು ಇಷ್ಟ. ಅದರಿಂದಲೇ ಜನಪ್ರಿಯರಾಗಿದ್ದರು. ಕೇಶವಿನ್ಯಾಸ ಪ್ರಿಯ ವಿದೇಶಿ ಕ್ರಿಕೆಟಿಗರು
ಕೋಳಿ ಜುಟ್ಟು ರಸೆಲ್!
ವಿಂಡೀಸ್ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ಕೆರಿಬಿಯನ್ ಪರ ಟಿ20, ಏಕದಿನ ಕ್ರಿಕೆಟ್ ಕೂಟಗಳಲ್ಲಿ ಮಿಂಚಿದ್ದಾರೆ. ಐಪಿಎಲ್ ಟಿ20ನಲ್ಲೂ ಕೆಕೆಆರ್ ಪರ ಬಿರುಸಿನ ಬ್ಯಾಟಿಂಗ್, ಬೌಲಿಂಗ್‌ನಿಂದ ಗಮನ ಸೆಳೆದಿದ್ದಾರೆ. ಕೋಳಿಯ ಜುಟ್ಟಿನಂತೆ ರಸೆಲ್ ಕೇಶವಿನ್ಯಾಸ ಕಾಣುತ್ತದೆ.
ಗೇಲ್ ವಿಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್. ಅತ್ಯಂತ ತಮಾಷೆಯ ವ್ಯಕ್ತಿತ್ವ. ಒಂದು ಸರಣಿಯಲ್ಲಿ ಉದ್ದ ಕೂದಲು ಬಿಟ್ಟಿದ್ದರೆ ಮತ್ತೂಂದು ಸರಣಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿರುವ ರೀತಿಯಲ್ಲಿ ಗೇಲ್ ಕಾಣಿಸುತ್ತಾರೆ. ಚಿಕ್ಕಮಕ್ಕಳಿಂದ ಹಿಡಿದು ಮುದುಕರವರೆಗಿನ ಗೇಲ್ ಮನ ಗೆದ್ದಿದ್ದಾರೆ.
ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಆರಂಭದಿಂದಲೂ ಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ಸದ್ದು ಮಾಡಿದ್ದಾರೆ. ವಿಕೆಟ್ ಕೀಳುವುದರ ಜತೆಗೆ ಗುಂಗುರು ಕೂದಲಿನಿಂದ. ನೋಡುಗರಿಗೆ ಇದು ಹತ್ತಿಯ ಉಂಡೆಯಂತೆ ಕಾಣುತ್ತದೆ.