Advertisement
– ಬೇಸಿಗೆಯಲ್ಲಿ ಹೇರ್‌ಜೆಲ್ ಬಳಸಿ, ಬಿಸಿಲಿನಲ್ಲಿ ಅಡ್ಡಾಡುವುದನ್ನು ನಿಲ್ಲಿಸಿ.– ಬೆವರುವ ಕಾರಣದಿಂದ ಕೂದಲು ಉದುರುತ್ತದೆ. ಹಾಗಾಗಿ ವಾರಕ್ಕೆ ಮೂರು ಬಾರಿ ತಲೆಗೆ ಸ್ನಾನ ಮಾಡಿ.
-ಸ್ನಾನಕ್ಕೂ ಅರ್ಧ ಗಂಟೆ ಮುನ್ನ ತೆಂಗಿನೆಣ್ಣೆ, ಹರಳೆಣ್ಣೆ, ನೆಲ್ಲಿಕಾಯಿ ಎಣ್ಣೆ ಅಥವಾ ಭೃಂಗರಾಜ ತೈಲ ಹಚ್ಚಿ ಕೂದಲಿನ ಬುಡಕ್ಕೆ ಮಸಾಜ್ ಮಾಡಿ.
-ನೆಲ್ಲಿಕಾಯಿ, ಸೀಗೆಕಾಯಿ ಹಾಗೂ ಒಣಗಿದ ಬೇವಿನ ಎಲೆಯನ್ನು ಚೆನ್ನಾಗಿ ಪೇÓr… ಮಾಡಿ ತಲೆಗೆ ಹಚ್ಚಿ, ಬಳಿಕ ಅರ್ಧ ಗಂಟೆ ಬಿಟ್ಟು ತಲೆಗೆ ಸ್ನಾನ ಮಾಡಿ.
-ಬಾದಾಮಿ ಎಣ್ಣೆ, ಆಲಿವ್ ಎಣ್ಣೆ ಹಾಗೂ ಹರಳೆಣ್ಣೆಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ತಲೆಗೆ ಹಚ್ಚಿ.
-ಮೆಹೆಂದಿ, ಮೊಸರು, ಮೊಟ್ಟೆ ಮುಂತಾದ ನೈಸರ್ಗಿಕ ಹೇರ್ ಕಂಡಿಷನರ್ ಬಳಸಿ.
-ಬೇವು, ಮೆಹೆಂದಿಯನ್ನು ಸಾಸಿವೆ ಎಣ್ಣೆಯಲ್ಲಿ ಕುದಿಸಿ, ಆರಿಸಿ ಬಳಿಕ ಸೋಸಿ ಬಾಟಲಿಯಲ್ಲಿ ಶೇಖರಿಸಿಡಿ. ಅದಕ್ಕೆ ಒಂದು ಚೂರು ಕರ್ಪೂರವನ್ನೂ ಹಾಕಬಹುದು. ಈ ತೈಲವನ್ನು ಪ್ರತಿನಿತ್ಯ ಬಳಸಿದರೆ, ಬೆವರಿನಿಂದ ತಲೆಹೊಟ್ಟು ಕಡಿಮೆ ಆಗುತ್ತದೆ.
-ತೆಂಗಿನೆಣ್ಣೆಗೆ ಸ್ವಲ್ಪ ಮೆಂತ್ಯೆ ಪುಡಿಯನ್ನು ಹಾಕಿ ಕುದಿಸಿ. ಬಳಿಕ ಅದನ್ನು ಸೋಸಿ ಒಂದು ಬಾಟಲಿಯಲ್ಲಿ ಹಾಕಿಡಿ. ಇದನ್ನು ವಾರಕ್ಕೆ 3 ಬಾರಿಯಂತೆ ಹಚ್ಚಿ ಮಸಾಜ್ ಮಾಡಿ.
-ರಾಸಾಯನಿಕ ಕೇಶೋತ್ಪನ್ನಗಳ ಬದಲು ನೈಸರ್ಗಿಕ ಶ್ಯಾಂಪೂ ಬಳಸಿ. ಸೀಗೆಕಾಯಿ, ನೆಲ್ಲಿಕಾಯಿ ಪುಡಿಯನ್ನು ತಲೆ ಕೂದಲು ತೊಳೆಯಲು ಉಪಯೋಗಿಸಿದರೆ ಉತ್ತಮ.