Advertisement
ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ಯೆಯಾದ ವ್ಯಕ್ತಿ ಹಾಗೂ ಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಜೊತೆಗೆ ಮೊಬೈಲ್‍ನಲ್ಲಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಿಡುಗೆ ಮಾಡಿದರು.
Related Articles
Advertisement
ನಗರದಲ್ಲಿ ಮತದಾರರಲ್ಲಿ ಭಯದ ವಾತಾವರಣವಿದ್ದು, ಮತದಾನ ಮೇಲೆ ಭಾರಿ ಗಂಭೀರ ಪರಿಣಾಮ ಬೀರಲಿದೆ. ಕಾರಣ ನಗರದ ಎಲ್ಲ ಮತದಾನ ಕೇಂದ್ರಗಳಿಗೆ ಸಶಸ್ತ್ರ ಮಿಲಿಟರಿ, ಮೀಸಲು ಪಡೆಗಳನ್ನು ಭದ್ರತೆಗೆ ನಿಯೋಜಿಸಬೇಕು.
ಹಿಂದೂಪರ ಧ್ವನಿ ಎತ್ತುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ ಅವರ ಸ್ಪರ್ಧೆಯಿಂದ ವಿಜಯಪುರ ನಗರ ರಾಜ್ಯದ ಗಮನ ಸೆಳೆದಿದೆ. ವಿಜಯಪುರ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಬಂದು ಪ್ರಚಾರ ಮಾಡಿ ಹೋಗಿದ್ದಾರೆ. ಚುನಾವಣೆ ಸಂದರ್ಭದಲ್ಲೂ ನಗರದಲ್ಲಿ ಗುಂಡಾಗಳ ಹಾವಳಿ ಹೆಚ್ಚಿದ್ದು, ಹಾಡು ಹಗಲೇ ಕೊಲೆ ಮಾಡುವ ಮಟ್ಟಕ್ಕೆ ಪರಿಸ್ಥಿತಿ ಬೆಳೆದು ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದರಿ ಪ್ರಕರಣದಲ್ಲಿ ಹತ್ಯೆಯಾದ ವ್ಯಕ್ತಿ ವಿಧಾನಸಭೆ ಚುನಾವಣೆಯಲ್ಲಿ ಎಂಐಎಂ ಪಕ್ಷದಿಂದ ಸ್ಪರ್ಧಿಸಲು ಬಯಸಿ, ಆ ಪಕ್ಷದ ಅಧ್ಯಕ್ಷ-ಸಂಸದ ಅಸಾದುದ್ದೀನ್ ಓವೈಸಿ ಜೊತೆ ಮಾತನಾಡಿರುವ ಆಡಿಯೋ ನಮಗೆ ಲಭ್ಯವಾಗಿವೆ. ಕೂಡಲೇ ಈ ಆಡಿಯೋಗಳ ಸತ್ಯಾಸತ್ಯತೆ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೇ ಆತ ಸದ್ಯ ಕಣದಲ್ಲಿರುವ ಕೆಲವರ ಹೆಸರುಗಳನ್ನು ಹೇಳಿದ್ದು, ಹತ್ಯೆಯ ಬಳಿಕ ಮೃತ ಹೈದರ ಸಹೋದರ ಕೂಡ ಇದರಲ್ಲಿನ ಹೆಸರುಗಳನ್ನು ಹೇಳಿದ್ದಾನೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಪಾಲಿಕೆ ಸದಸ್ಯರು, ಹಿಂದೂಪರ ಸಂಘಟನೆಗಳ ಪ್ರಮುಖರು ನಗರದಲ್ಲಿ ಎಸ್ಪಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ ಎಂದರು.
ಸದರಿ ಪ್ರಕರಣದ ಹತ್ಯೆಗೆ ಪಾಲಿಕೆ ಚುನಾವಣೆ ಸಂಬಂಧದ ಶಂಕೆ ಇದೆ ಎಂದಿರುವ ಎಸ್ಪಿ ಅವರು, ಹತ್ಯೆಗೆ ವಿಧಾನಸಭೆ ಚುನಾವಣೆಗೆ ಸಂಬಂಧವಿಲ್ಲ ಎಂದಿದ್ದರು. ಇದೀಗ ನಾವೇ ದಾಖಲೆ ಒದಗಿಸುತ್ತಿದ್ದು, ಕೂಡಲೇ ತಮ್ಮ ಹೇಳಿಕೆ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಹಿಂದೂಪರ ಧ್ವನಿ ಎತ್ತುತ್ತಿರುವ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರಿಗೆ ಹೆಚ್ಚಿನ ಭದ್ರತೆ ಕೋಡಬೇಕು. ಈಗಾಗಲೇ ದೇಶದ್ರೋಹಿಗಳಿಂದ ನಿಮ್ಮ ಜೀವಕ್ಕೆ ಅಪಾಯವಿದೆ ಎಂದು ಗುಪ್ತಚರ ಇಲಾಖೆ ನನಗೆ ನೇರವಾಗಿ ಮಾಹಿತಿ ನೀಡಿದ್ದಾರೆ.
ಕಾರಣ ಆತ್ಮರಕ್ಷಣೆಗೆ ನಾನು ಸೇರಿದಂತೆ ಪಾಲಿಕೆ ಸದಸ್ಯರು, ಹಿಂದೂಪರ ನಾಯಕರಿಗೆ ಅವರು ಹೊಂದಿರುವ ಪರವಾನಿಗೆ ಸಹಿತದ ಶಸ್ತ್ರಾಸ್ತ್ರ ಹೊಂದಲು ಅವಕಾಶ ನೀಡಬೇಕು. ಹಿಂದೂಪರ ಕಾರ್ಯಕರ್ತರು, ಪಾಲಿಕೆ ಸದಸ್ಯರಿಗೆ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ನೀಡಬೇಕು ಎಂದು ರಾಘು ಅಣ್ಣಿಗೇರಿ ಆಗ್ರಹಿಸಿದರು.
ವೂಡಾ ಅಧ್ಯಕ್ಷ ಪರಶುರಾಮ ರಜಪೂತ, ಪಾಲಿಕೆ ಸದಸ್ಯರಾದ ರಾಜು ಮಗಿಮಠ, ಪ್ರೇಮಾನಂದ ಬಿರಾದಾರ, ಎಂ.ಎಸ್.ಕರಡಿ, ಕಿರಣ ಪಾಟೀಲ ಸೇರಿದಂತೆ ಇತರರು ಉಪ್ಥಿತರಿದ್ದರು.