ಹಗರಿಬೊಮ್ಮನಹಳ್ಳಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದ ಸಮಗ್ರ ಅಭಿವೃದ್ಧಿ ಪರಿಕಲ್ಪನೆ ಹೊಂದಿದೆ ಎಂದು ಸಂಸದ ದೇವೇಂದ್ರಪ್ಪ ತಿಳಿಸಿದರು.
ಪಟ್ಟಣದ ಬಸವೇಶ್ವರ ವೃತ್ತದ ಬಳಿ ಮಹಾತ್ಮಗಾಂಧೀಜಿ 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಬಿಜೆಪಿ ತಾಲೂಕು ಘಟಕದಿಂದ ನಡೆದ ಸದ್ಭಾವನಾ ಪಾದಯಾತ್ರೆಯಲ್ಲಿ ಶುಕ್ರವಾರ ಅವರು ಮಾತನಾಡಿದರು.
ಕೇಂದ್ರ ಸರಕಾರದ ಜನಪರ ಕಾರ್ಯಕ್ರಮಗಳಿಗೆ ಉತ್ತಮ ಸ್ಪಂದನೆ ಇದೆ. ಹೊಸಪೇಟೆಯಿಂದ ಕೊಟ್ಟೂರಿಗೆ ಅ. 17ರಿಂದ ಪ್ರಯಾಣಿಕರ ರೈಲು ಸಂಚಾರ ಆರಂಭವಾಗಲಿದೆ. ರೈಲು ಸಂಚಾರ ಕುರಿತಂತೆ ಈಗಾಗಲೇ ರೈಲ್ವೆ ವಿಭಾಗೀಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಪರೀಕ್ಷಾರ್ಥ ಪ್ರಯೋಗದ ಮೂಲಕ ಮಾರ್ಗದ ಗುಣಮಟ್ಟ ದೃಢೀಕರಿಸಿದೆ. ಗಾಂಧೀಜಿ ತತ್ವಾದರ್ಶಗಳು ಬದುಕಿನ ಪ್ರೇರಕಶಕ್ತಿಗಳಾಗಬೇಕಿದೆ ಎಂದರು.
ಮಾಜಿ ಶಾಸಕ ನೇಮರಾಜ ನಾಯ್ಕ ಮಾತನಾಡಿದರು. ಪಟ್ಟಣದ ಗಾಳೆಮ್ಮ ದೇವಿ ದೇಗುಲದ ಮೂಲಕ ಮರಿಯಮ್ಮನಹಳ್ಳಿವರೆಗೆ ಪಾದಯಾತ್ರೆ ಮುಂದುವರಿಸಿದರು. ಮಾರ್ಗದುದ್ದಕ್ಕೂ ಗಾಂಧೀಜಿ ಮತ್ತು ಮೋದಿ ಪರ ಘೋಷಣೆ ಕೂಗಿದರು. ಬಿಜೆಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಅನಿಲ್ ನಾಯ್ಡು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಮ್ಮರೆಡ್ಡಿ, ರಾಮಲಿಂಗಪ್ಪ, ರೈತಮೋರ್ಚಾ ರಾಜ್ಯ
ಉಪಾಧ್ಯಕ್ಷ ಗುರುಲಿಂಗನಗೌಡ, ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಮಂಡಲ ಅಧ್ಯಕ್ಷ ನರೇಗಲ್ ಕೊಟ್ರೇಶ್, ಮಾಜಿ ಅಧ್ಯಕ್ಷ ರೋಹಿತ್, ಕಾರ್ಯದರ್ಶಿ ಜೆ.ಬಿ. ಶರಣಪ್ಪ, ಮಾಜಿ ಕಾರ್ಯದರ್ಶಿ ಗಿರಿರಾಜ ರೆಡ್ಡಿ, ಎಸ್ಸಿಮೋರ್ಚಾ ಅಧ್ಯಕ್ಷ ಪೂಜಾರ್ ಸಿದ್ದಪ್ಪ, ನಗರಘಟಕ ಅಧ್ಯಕ್ಷ ಸಂದೀಪ್, ತಾಪಂ ಸದಸ್ಯ ಮಾಳಗಿ ಗಿರೀಶ್, ಪುರಸಭೆ ಸದಸ್ಯ ಲಕ್ಷ್ಮಣ ಕಲಾಲ್, ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ, ಉಮಾ ಬಸವರಾಜ, ಮುಖಂಡರಾದ ಕಿನ್ನಾಳ್ ಸುಭಾಷ್, ಹೊಳಗುಂದಿ ಶೇಖರಪ್ಪ, ಸರ್ದಾರ್ ಯಮನೂರು, ಚಿತ್ತವಾಡಗಿ ಪ್ರಕಾಶ್, ಬಿ. ಶ್ರೀನಿವಾಸ, ಹಕ್ಕಂಡಿ ಕೃಷ್ಣ, ರಾಮರೆಡ್ಡಿ, ಸಂಗಯ್ಯ
ಸ್ವಾಮಿ, ಸೊಬಟಿ ಹರೀಶ್, ರಾಹುಲ್ ಇತರರಿದ್ದರು.