Advertisement

ಭಯ ಬಿಟ್ಟು ಪರೀಕ್ಷೆ ಎದುರಿಸಿ: ಭೀಮಾ

04:59 PM Jun 22, 2020 | Naveen |

ಹಗರಿಬೊಮ್ಮನಹಳ್ಳಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಾಲೂಕು ಆಡಳಿತ ಸಮರ್ಪಕ ಪೂರ್ವ ಸಿದ್ಧತೆ ಮಾಡಿಕೊಂಡಿದೆ ಎಂದು ಶಾಸಕ ಎಸ್‌.ಭೀಮಾ ನಾಯ್ಕ ಹೇಳಿದರು.

Advertisement

ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ವಿತರಿಸಿ ಅವರು ಮಾತನಾಡಿದರು. ತಾಲೂಕಿನ ಒಟ್ಟು 4500 ವಿದ್ಯಾರ್ಥಿಗಳಿಗೆ ಕಾಟನ್‌ ಮಾಸ್ಕ್ ಗಳನ್ನು ವಿತರಿಸಲಾಗುವುದು. ಆರೋಗ್ಯ ಮತ್ತು ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಲಾಗುವುದು. ಶಿಕ್ಷಣ ಸಚಿವರ ಆದೇಶದ ಮೇರೆಗ ಪೂರ್ವಭಾವಿ ಸಭೆ ಕರೆದು ಸಮರ್ಪಕ ತಯಾರಿ ಮಾಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಾವುದೇ ಭಯ ಬೀಳುವ ಅಗತ್ಯವಿಲ್ಲ ಎಂದು ಹೇಳಿದರು.

ಕ್ಷೇತ್ರದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶುಭವಾಗಲಿ ಎಂದು ಹಾರೈಸಿದರು. ಗ್ರಾಮೀಣ ಪ್ರದೇಶದಲ್ಲಿ ಪರೀಕ್ಷೆ ಯಶಸ್ವಿಯಾಗಲು ಆಯಾ ಗ್ರಾಪಂ ಪಿಡಿಒಗಳು ಕಾಳಜಿಯಿಂದ ಸರಕಾರದ ಆದೇಶ ಪಾಲಿಸಬೇಕು. ಪರೀಕ್ಷೆ ದಿವಸ ಎಲ್ಲಾ ಪರೀಕ್ಷೆ ಕೇಂದ್ರಗಳಿಗೆ ಕಾರ್ಯಕರ್ತರ ಮೂಲಕ ಮಾಸ್ಕ್ ಗಳನ್ನು ವಿತರಿಸಲಾಗುವುದು. ಪಟ್ಟಣದ ಶಾಲೆಗಳಿಗೆ ಈಗಾಗಲೇ ಬಿಇಒ ಕೈಗೆ ಮಾಸ್ಕ್ಗಳನ್ನು ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.

ತಹಶೀಲ್ದಾರ್‌ ಆಶಪ್ಪ ಪೂಜಾರ್‌, ಬಿಇಒ ಶೇಖರಪ್ಪ ಹೊರಪೇಟೆ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ, ಮುಟುಗನಹಳ್ಳಿ ಕೊಟ್ರೇಶ, ಬುಡ್ಡಿ ಬಸವರಾಜ, ಪವಾಡಿ ಹನುಮಂತಪ್ಪ, ಚಿಂತ್ರಪಳ್ಳಿ ದೇವೇಂದ್ರಪ್ಪ, ಹಾಲ್ದಾಳ್‌ ವಿಜಯಕುಮಾರ, ಹಂಚಿನಮನಿ ಹನುಮಂತಪ್ಪ, ಕನ್ನಿಹಳ್ಳಿ ಚಂದ್ರಶೇಖರ, ಮುಖ್ಯ ಗುರುಗಳಾದ ವಟ್ಟಮ್ಮನಹಳ್ಳಿ ಮಲ್ಲಪ್ಪ, ಓಬಯ್ಯ, ಎಚ್‌.ಅಂಜಿನಪ್ಪ, ಯು.ಕೃಷ್ಣನಾಯ್ಕ, ಆರ್‌.ಕೊಟ್ರಪ್ಪ, ಎಂ.ಮಂಜುನಾಥ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next