Advertisement

ಗುರುಸಿದ್ಧಪ್ಪನವರ ಸೇವೆ ಅವಿಸ್ಮರಣೀಯ

01:43 PM Jan 26, 2020 | Naveen |

ಹಗರಿಬೊಮ್ಮನಹಳ್ಳಿ: ಸಂಘಸಂಸ್ಥೆಗಳ ಅಭಿವೃದ್ಧಿಯಿಂದ ಶೈಕ್ಷಣಿಕ ಪ್ರಗತಿ ಕಾಣಬಹುದು ಎಂದು ಜಗದ್ಗುರು ಡಾ| ಸಂಗನಬಸವ ಮಹಸ್ವಾಮೀಜಿ ತಿಳಿಸಿದರು. ತಾಲೂಕಿನ ತಂಬ್ರಹಳ್ಳಿ ಕಿನ್ನಾಳ್‌ ಪೊರಮ್ಮಾಂಬೆ ಗುರುಸಿದ್ದಪ್ಪ ಪ್ರೌಢಶಾಲೆ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಅವರು ಶನಿವಾರ ಮಾತನಾಡಿದರು.

Advertisement

ಕಿನ್ನಾಳ್‌ ಗುರುಸಿದ್ದಪ್ಪನವರ ಸೇವೆ ಅವಿಸ್ಮರಣೀಯ. ಹಂಪಿ ಮಠದಿಂದ ಗುರುಸಿದ್ದಪ್ಪನವರ ಹೆಸರಿನಲ್ಲಿ 1ಲಕ್ಷ ರೂ. ಠೇವಣಿ ಇಟ್ಟು ಬರುವ ಬಡ್ಡಿ ಮೊತ್ತವನ್ನು ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಪಡೆದ ಮಕ್ಕಳಿಗೆ ಪ್ರತಿವರ್ಷ ಪ್ರತಿಭಾ ಪುರಸ್ಕಾರ ನೀಡಲಾಗುವುದು. ವಿವಿ ಸಂಘದವರು ಗ್ರಾಮದಲ್ಲಿ ಡಿಗ್ರಿ ಕಾಲೇಜು ಪ್ರಾರಂಭಿಸದಿದ್ದರೆ ನಮ್ಮ ಮಠದಿಂದ ಇಲ್ಲಿ ಡಿಗ್ರಿ ಕಾಲೇಜು ಪ್ರಾರಂಭಿಸುತ್ತೇವೆ. ಈ ಭಾಗದಲ್ಲಿ ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ದೊರಕಲಿ ಎಂದರು.

ಜಗದ್ಗುರು ಡಾ| ತೋಂಟದಾರ್ಯ ಸಿದ್ದರಾಮ ಸ್ವಾಮೀಜಿ ಮಾತನಾಡಿ, ವಿವಿ ಸಂಸ್ಥೆಗೆ ನೆರವು ನೀಡಿದ ಕುಟುಂಬದ ತ್ಯಾಗವನ್ನು ಸ್ಮರಿಸಬೇಕು. ಶೈಕ್ಷಣಿಕ ಅಭಿವೃದ್ಧಿಗೆ ಚಿಂತನೆ ನಡೆಯಬೇಕು. ಹಾನಗಲ್‌ ಕುಮಾರಸ್ವಾಮೀಜಿ ಅನ್ನದಾನಕ್ಕಿಂತ ವಿದ್ಯಾದಾನ ಶ್ರೇಷ್ಠ ಎಂದಿದ್ದಾರೆ. ಪ್ರತಿ ಸ್ಥಳದಲ್ಲಿ ಗೌರವ ಸಿಗಬೇಕೆಂದರೆ ವಿದ್ಯೆ ಅತಿಮುಖ್ಯವಾದುದು ಎಂದರು.

ಬಳ್ಳಾರಿ ಸಂಸದ ವೈ. ದೇವೆಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸದರ ಅನುದಾನವನ್ನು ಸಂಸ್ಥೆಯ ಪೂರಕ ಬೆಳವಣಿಗೆಗೆ ನೀಡಲಾಗುವುದು. ದಿ. ಕಿನ್ನಾಳ್‌ ಗುರುಸಿದ್ದಪ್ಪನವರ ಸೇವಾ ಮನೋಭಾವ ಮಾದರಿಯಾಗಿದೆ. ಶಿಕ್ಷಣಕ್ಕೆ ನೀಡುವ ದಾನ ಇಡೀ ಜಗತ್ತನ್ನು ಬೆಳಗುವುದು ಎಂದರು.

ಅಖೀಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಎನ್‌. ತಿಪ್ಪಣ್ಣ ಕಿನ್ನಾಳ್‌ ಗುರುಸಿದ್ದಪ್ಪನವರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿ, ದಾನಧರ್ಮದ ಗುಣ ಎಲ್ಲರಿಗೂ ಬರಬೇಕು. ಕಿನ್ನಾಳ್‌ ಗುರುಸಿದ್ದಪ್ಪನವರು ವಿವಿ ಸಂಘಕ್ಕೆ ಅಂದು ಭೂಮಿ ದಾನ ಮಾಡದಿದ್ದರೆ ತಂಬ್ರಹಳ್ಳಿಯಲ್ಲಿ ಸಂಸ್ಥೆಯ ಶಾಲೆ ಪ್ರಾರಂಭವಾಗುತ್ತಿರಲಿಲ್ಲ. ಅವರು ಸಂಘದೊಂದಿಗೆ ನಿರಂತರ ಒಡನಾಟ ಹೊಂದಿ ತಮ್ಮ ದಾರಾಳ ಗುಣದಿಂದ ದಾನ ಮಾಡಿದ್ದು ನಿಜಕ್ಕೂ ಶ್ಲಾಘನೀಯ. ಅವರ ಜೊತೆ ಅಕ್ಕಿ ಕೊಟ್ರಪ್ಪ, ನಾಗನಗೌಡ್ರು ಸಂಘದ ಪದಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ಗ್ರಾಮಕ್ಕೆ ಶಾಲೆಯನ್ನು ತಂದರು ಎಂದು ತಿಳಿಸಿದರು.

Advertisement

ವಿವಿ ಸಂಘದ ಅಧ್ಯಕ್ಷ ಉಡೇದ ಬಸವರಾಜ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಅಧ್ಯಕ್ಷ ಬಿ.ವಿ. ಬಸವರಾಜ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ದಾನಿಗಳ ವಂಶದ ವಕೀಲ ಕಿನ್ನಾಳ ಶಿವಾನಂದ ಪ್ರಾಸ್ತಾವಿಕವಾಗಿ ನುಡಿದರು. ಮುಖ್ಯಗುರು ಕೆ.ವಿ.ಲೋಕೇಶ್‌ ಶಾಲಾ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕ ಎಂ.ಎಸ್‌.ಕಲಗುಡಿ ದಾನಿಗಳ ಪರಿಚಯ ಮಾಡಿದರು. ದಾನಿ ಅಕ್ಕಿ ಕೊಟ್ರಪ್ಪ, ಜಿಪಂ ಮಾಜಿ ಸದಸ್ಯ ಬಾವಿ ಬೆಟ್ಟಪ್ಪ, ಸಂಘದ ಮಾಜಿ ಅಧ್ಯಕ್ಷ ವಕೀಲ ಬಿಡ್ಡಪ್ಪ ಮಾತನಾಡಿದರು.

ವಿವಿ ಸಂಘದ ಪದಾ ಧಿಕಾರಿಗಳಾದ ಚೋರನೂರು ಕೊಟ್ರಪ್ಪ, ವೀರಭದ್ರಶರ್ಮ, ವೀರೇಶಗೌಡ, ಕೋಳೂರು ಮಲ್ಲಿಕಾರ್ಜುನಗೌಡ, ಜಿಪಂ ಮಾಜಿ ಸದಸ್ಯರಾದ ಎಚ್‌.ಬಿ. ನಾಗನಗೌಡ್ರು, ಅಕ್ಕಿ ತೋಟೇಶ್‌, ತಾಪಂ ಸದಸ್ಯ ಪಿ. ಕೊಟ್ರೇಶ, ಗ್ರಾಪಂ ಅಧ್ಯಕ್ಷ ಮಡಿವಾಳರ ಕೊಟ್ರೇಶ, ಸಂಘದ ಕರಿಬಸವರಾಜ ಬದಾಮಿ, ಕಿನ್ನಾಳ್‌ ಬಸವರಾಜ, ಎಸ್‌. ಗುರುಬಸವರಾಜ, ಟಿ.ಜಿ. ದೊಡ್ಡಬಸಪ್ಪ, ಮಲ್ಲಿಕಾರ್ಜುನ ರೆಡ್ಡಿ, ಗಂಗಾಧರ, ಕೊಳ್ಳಿ ಶೇಷರೆಡ್ಡಿ, ಗೌರಜ್ಜನವರ ಬಸವರಾಜಪ್ಪ, ಬಿಇಒ ಶೇಖರಪ್ಪ ಹೊರಪೇಟೆ, ಪಿಎಸ್‌ಐ ಸರಳ, ಬಣಕಾರ ತೋಟಪ್ಪ, ಗುಡ್ಡದ ಗಿರಿಧರ್‌, ನಿವೃತ್ತ ಶಿಕ್ಷಕರಾದ ಬಿ.ಕೆ.ನಾಲ್ವಾಡ, ಸುಭಾಷಶ್ಚಂದ್ರ, ಅಶೋಕ ಚವ್ಹಾಣ, ಶಾಲೆಯ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅಕ್ಕಿ ಶಿವಕುಮಾರ ಸ್ವಾಗತಿಸಿದರು. ಉಪನ್ಯಾಸಕ ಜಗದೀಶ, ಶಿಕ್ಷಕಿ ಶೈಲಜಾ ನಿರೂಪಿಸಿದರು. ಸುವರ್ಣ ಮಹೋತ್ಸವದ ವಿಜೃಂಭಣೆ ಮೆರವಣಿಗೆ ಕಾರ್ಯಕ್ರಮಕ್ಕೆ ಶಾಸಕ ಭೀಮಾನಾಯ್ಕ ಚಾಲನೆ ನೀಡಿದರು. ಇದೇ ವೇಳೆ ಕಿಂಡರ್‌ ಗಾರ್ಟನ್‌ ಶಾಲಾ ಕಟ್ಟಡ ಶಂಕುಸ್ಥಾಪನೆಯನ್ನು ಸಂಸದ ವೈ.ದೇವೆಂದ್ರಪ್ಪ ನೆರವೇರಿಸಿದರು. ಸುವರ್ಣ ಮಹೋತ್ಸವದ ಉದಯವಾಣಿ ವಿಶೇಷ ಪುರವಣಿಯನ್ನು ನಂದಿಪುರ ಮಹೇಶ್ವರ ಸ್ವಾಮೀಜಿ ಬಿಡುಗಡೆಗೊಳಿಸಿದರು. ಊಟದ ವ್ಯವಸ್ಥೆಯನ್ನು ಎಬಿಟಿಎಂ ಪದವಿಪೂರ್ವ ಕಾಲೇಜಿನ ಉಪನ್ಯಾಸಕರುನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next