Advertisement

ಸಾಮಾಜಿಕ ಅಂತರ ಕಾಪಾಡಿಕೊಳ್ಳಿ

01:36 PM Jun 19, 2020 | Naveen |

ಹಗರಿಬೊಮ್ಮನಹಳ್ಳಿ: ಭಯಾನಕ ಕೋವಿಡ್ ವೈರಸ್‌ ಹೋಗಲಾಡಿಸಲು ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು ಎಂದು ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ ಹೇಳಿದರು.

Advertisement

ತಾಲೂಕಿನ ತಂಬ್ರಹಳ್ಳಿ ಗ್ರಾಮ ಪಂಚಾಯ್ತಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಪೊಲೀಸ್‌ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಾಸ್ಕ್ ದಿನಾಚರಣೆ ಕಾರ್ಯಕ್ರಮದ ಜನಜಾಗೃತಿ ಸಭೆಯಲ್ಲಿ ಮಾತನಾಡಿದರು. ಕೋವಿಡ್ ವೈರಸ್‌ ಜಾಡ್ಯವನ್ನು ಹೋಗಲಾಡಿಸಲು ಸಮುದಾಯದ ಸಹಭಾಗಿತ್ವ ಅಗತ್ಯವಾಗಿದೆ ಎಂದು ತಿಳಿಸಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಎಲ್ಲರೂ ಮಾಸ್ಕ್ ಧರಿಸುವ ಮೂಲಕ ಕೋವಿಡ್ ವೈರಸ್‌ ಜಾಗೃತಿ ಮೂಡಿಸಿದರು. ಜಾಥಾದಲ್ಲಿ ಸಂಚರಿಸುವಾಗ ಮಾಸ್ಕ್ ಇಲ್ಲದವರಿಗೆ ಮಾಸ್ಕ್ ವಿತರಿಸಿ ಹಾಕಿಕೊಳ್ಳುವಂತೆ ಗ್ರಾಪಂ ಸಿಬ್ಬಂದಿ ತಿಳಿಸಿದರು. ಗ್ರಾಪಂ ಅಧ್ಯಕ್ಷ ಮಡಿವಾಳ ಕೊಟ್ರೇಶ್‌, ಉಪಾಧ್ಯಕ್ಷೆ ಬಾಳೆಹಣ್ಣಿ ರತ್ನಮ್ಮ ಚೆನ್ನಪ್ಪ, ಡಾ| ಮೋಹನ್‌, ಡಾ| ರಾಜಶೇಖರ, ಗ್ರಾಪಂ ಸದಸ್ಯರಾದ ಗೌರಜ್ಜನವರ ಗಿರೀಶ್‌, ಪಿ. ಶ್ರೀನಿವಾಸ, ಕೊರವರ ಯಮನೂರಪ್ಪ, ಪಿಡಿಒ ಕೃಷ್ಣಮೂರ್ತಿ, ಕಡ್ಡಿ ಚೆನ್ನಬಸಪ್ಪ, ಗಂಗಾಧರಗೌಡ, ಬಣಕಾರ ಕೊಟ್ರೇಶ, ಸುಣಗಾರ ರಾಮು, ಗ್ರಾಪಂ ಕಾರ್ಯದರ್ಶಿ ಕೆ. ಶರಣಪ್ಪ, ಕಾಶಿನಾಯ್ಕರ ಕೊಟ್ರೇಶ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next