Advertisement

ವಿವಿಧೆಡೆ ರಾಹುಲ್‌ಗಾಂಧಿ ಜನ್ಮದಿನಾಚರಣೆ: ಹಣ್ಣು -ಹಂಪಲು ವಿತರಣೆ

04:00 PM Jun 20, 2020 | Naveen |

ಹಗರಿಬೊಮ್ಮನಹಳ್ಳಿ: ರಾಹುಲ್‌ ಗಾಂಧಿ ಅವರ ದೂರದೃಷ್ಟಿ ಚಿಂತನೆಗಳನ್ನು ಕೇಂದ್ರ ಸರಕಾರ ಕಡೆಗಣಿಸಿದ ಪರಿಣಾಮ ದೇಶದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿದೆ ಎಂದು ಶಾಸಕ ಎಸ್‌. ಭೀಮಾನಾಯ್ಕ ಹರಿಹಾಯ್ದರು.

Advertisement

ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಜನ್ಮದಿನದ ಪ್ರಯುಕ್ತ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್‌ ವಿತರಿಸಿ ಶುಕ್ರವಾರ ಅವರು ಮಾತನಾಡಿದರು. ಅಶಾಕಾರ್ಯಕರ್ತೆಯರಿಗೆ ಸಹಾಯಧನ ಕಲ್ಪಿಸುವ ನಿಟ್ಟಿನಲ್ಲಿ ರಾಬಕೊದಿಂದ ತಲಾ 10 ಲಕ್ಷರೂ ಬಿಡುಗಡೆ ಮಾಡಲಾಗಿದೆ. ಕೋವಿಡ್ ವೈರಸ್‌ನ್ನು ಕರ್ನಾಟಕದಲ್ಲಿ ನಿಯಂತ್ರಣ ಮಾಡುವಲ್ಲಿ ಸಿಎಂ ಯಡಿಯೂರಪ್ಪ ನಿರಂತರವಾಗಿ ಶ್ರಮಿಸಿದ್ದಾರೆ. ಆದರೆ, ಕೇಂದ್ರ ಸರಕಾರ ಕೇವಲ ಭಾಷಣದ ಮೂಲಕ ಜನರ ಹೊಟ್ಟೆ ತುಂಬಿಸಲು ಯತ್ನಿಸುತ್ತಿದೆ ಎಂದರು.

ಇದೇ ವೇಳೆ ಆಶಾಕಾರ್ಯಕರ್ತೆಯರಿಗೆ ಜೀವನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಆಯುಷ್‌ ಇಲಾಖೆಯಿಂದ ಆರೋಗ್ಯ ವರ್ಧಕಗಳನ್ನು ವಿತರಿಸಲಾಯಿತು. ತಾಲೂಕು ವೈದ್ಯಾಧಿಕಾರಿ ಡಾ| ಸುಲೋಚನಾ, ಆಯುಷ್‌ ಜಿಲ್ಲಾ ವೈದ್ಯಾಧಿಕಾರಿ ಡಾ| ವರಪ್ರಸಾದ್‌, ವೈದ್ಯಾಧಿಕಾರಿಗಳಾದ ಡಾ| ಶಂಕ್ರನಾಯ್ಕ, ಡಾ| ಗುರುಬಸವರಾಜ, ಡಾ| ಭೀಮನಗೌಡ ಸಾವಜ್ಜಿ, ಡಾ| ಉಮೇಶ, ಡಾ| ಉಮಾಪಾಟೀಲ್‌, ಡಾ| ಹಾಲಮ್ಮ, ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ಅಕ್ಕಿ ತೋಟೇಶ, ಹೆಗ್ಡಾಳ್‌ ರಾಮಣ್ಣ, ಹಂಚಿನಮನಿ ಹನುಮಂತಪ್ಪ, ಹಾಲ್ದಾಳ್‌ ವಿಜಯಕುಮಾರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next