Advertisement

ಹಗರಿಬೊಮ್ಮನಹಳ್ಳಿ ಜಿಲ್ಲಾ  ಕೇಂದ್ರವಾಗಲಿ

01:28 PM Sep 23, 2019 | Naveen |

ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿ ತಾಲೂಕು ಭೌಗೋಳಿಕವಾಗಿ 4 ತಾಲೂಕುಗಳ ಮದ್ಯ ಇರುವುದರಿಂದ ಜಿಲ್ಲಾ ಕೇಂದ್ರವನ್ನಾಗಿಸಲು ಸೂಕ್ತವಾಗಿದೆ ಎಂದು ಶಾಸಕ ಭೀಮಾನಾಯ್ಕ ಹೇಳಿದರು.

Advertisement

ಹಗರಿಬೊಮ್ಮನಹಳ್ಳಿ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿಸುವಂತೆ ಒತ್ತಾಯಿಸಿ ನಡೆಸಿದ ಹಗರಿಬೊಮ್ಮನಹಳ್ಳಿ ಬಂದ್‌ ಹಿನ್ನೆಲೆಯ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಭಾನುವಾರ ಅವರು ಮಾತನಾಡಿದರು.

ಕಾನೂನಾತ್ಮಕವಾಗಿ ಹಗರಿಬೊಮ್ಮನಹಳ್ಳಿ ಜಿಲ್ಲಾ ಕೇಂದ್ರವಾಗಲು ಸೂಕ್ತವಾಗಿದೆ. ಉಪ ಚುನಾವಣೆ ನೀತಿಸಂಹಿತೆ ನಂತರ ಮುಖ್ಯಮಂತ್ರಿ ಬಳಿ ನಿಯೋಗ ಹೋಗಿ ಗಮನ ಸೆಳೆಯಲಾಗುವುದು. ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಮೂಲಕ ಹರಪನಹಳ್ಳಿ ಹೂವಿನಹಡಗಲಿ ಕೂಡ್ಲಿಗಿ ಕೊಟ್ಟೂರಿನ ತಾಲೂಕಿನ ಜನತೆಗೆ ಆಡಳಿತಾತ್ಮಕವಾಗಿ ತ್ವರಿತ ಸೇವೆ ಒದಗಿಸಬಹುದಾಗಿದೆ. ಅಖಂಡ ಬಳ್ಳಾರಿ ಜಿಲ್ಲೆಯನ್ನು ಒಡೆದು ಹೊಸ ಜಿಲ್ಲೆ ರಚಿಸುವ ಮುನ್ನ ಜಿಲ್ಲೆಯ ಎಲ್ಲ ಕ್ಷೇತ್ರದ ಶಾಸಕರ ಅಭಿಪ್ರಾಯ ಪಡೆಯುವುದು ಅಗತ್ಯವಾಗಿದೆ.

ಪ್ರಮುಖವಾಗಿ ಪಶ್ಚಿಮ ತಾಲೂಕುಗಳಲ್ಲಿ ಭೌಗೋಳಿಕವಾಗಿ ಎಲ್ಲ ತಾಲೂಕುಗಳನ್ನು ಕಡಿಮೆ ಅಂತರದಲ್ಲಿ ಸಂಪರ್ಕ ಕಲ್ಪಿಸಬಹುದಾದ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬೇಕಿದೆ. ಈ ಕುರಿತಂತೆ ಕಾನೂನು ಹೋರಾಟ ಮಾಡಲಾಗುವುದು. ಹೊಸ ಜಿಲ್ಲೆಗೆ ಹೈಕ.371 ಜೆ. ವಿಶೇಷ ಮೀಸಲು ಸೌಲಭ್ಯ ಲಭ್ಯತೆ ಕುರಿತಂತೆ ಸರಕಾರ ಸ್ಪಷ್ಟಪಡಿಸಬೇಕು ಎಂದರು.
ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಎಂ. ವೀರಸಂಗಯ್ಯ ಮಾತನಾಡಿ, ಹಗರಿಬೊಮ್ಮನಹಳ್ಳಿ ಭೌಗೋಳಿಕವಾಗಿ ಮಧ್ಯದಲ್ಲಿರುವುದರ ಜೊತೆಗೆ ಅತ್ಯಂತ ಹಿಂದುಳಿದ ತಾಲೂಕು ಆಗಿರುವುದರಿಂದ ಜಿಲ್ಲಾ ಕೇಂದ್ರವಾಗಿ ಹಗರಿಬೊಮ್ಮನಹಳ್ಳಿಯನ್ನೇ ಸರಕಾರ ಘೋಷಿಸಬೇಕು. ಪಶ್ಚಿಮ ತಾಲೂಕುಗಳಿಗೆ ನ್ಯಾಯ ಒದಗಬೇಕೆಂದರೆ ಹಗರಿಬೊಮ್ಮನಹಳ್ಳಿ ಜಿಲ್ಲಾ ಕೇಂದ್ರವಾಗಲೇಬೇಕು. ಹಗರಿಬೊಮ್ಮನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡದಿದ್ದರೆ ಉಗ್ರಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಹಗರಿಬೊಮ್ಮನಹಳ್ಳಿ ಬಂದ್‌ ಸಂಪೂರ್ಣ ಯಶಸ್ವಿಯಾಗಿತ್ತು. ಬೆಳಗ್ಗಿನಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿ ಎಲ್ಲರೂ ಸ್ವಯಂಪ್ರೇರಿತರಾಗಿ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದರು.

Advertisement

ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ, ತಾಪಂ ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ, ಕಾಂಗ್ರೆಸ್‌ ಬ್ಲಾಕ್‌ ಮಾಜಿ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್‌, ಸತ್ಸಂಗಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀ ಪತಿ, ಕೆಪಿಸಿಸಿ ಎಸ್ಟಿ ಘಟಕದ ಉಪಾಧ್ಯಕ್ಷ ಪವಾಡಿ ಹನುಮಂತಪ್ಪ ಮಾತನಾಡಿದರು.

ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಆನಂದೇವನಹಳ್ಳಿ ಸಿದ್ದನಗೌಡ, ಜಿಲ್ಲಾಧ್ಯಕ್ಷ ಭರಮಣ್ಣ, ಪುರಸಭೆ ಸದಸ್ಯರಾದ ಹಂಚಿನಮನಿ ಹನುಮಂತಪ್ಪ, ಹುಡೇದ ಗುರುಬಸವರಾಜ, ಅಲ್ಲಾಭಕ್ಷಿ, ಮುಖಂಡರಾದ ಹತ್ತಿ ಅಡಿವೆಪ್ಪ, ಗುಡ್ಲಾನೂರು ವಸಂತ, ನೀಲಕಂಠಪ್ಪ, ರಾಜು, ಗೋವಿಂದಪ್ಪ, ಜಂದಿಸಾಹೇಬ್‌, ರಹೇಮಾನ್‌, ಜೆ.ಯೋಗಾನಂದ, ಶಂಷಾದ್‌ ಬೇಗಂ, ಸರ್ದಾರ್‌ ಹುಲಿಗೆಮ್ಮ, ನೆಲ್ಕುದ್ರಿ ಚಂದ್ರಪ್ಪ, ಗಜೇಂದ್ರ, ಕೋಗಳಿ ಉಮೇಶ್‌, ಬ್ಯಾಲಾಳು ವಿಶ್ವನಾಥ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next