Advertisement

ಹಫೀಜ್‌ಗೆ ಇಮ್ರಾನ್‌ ಸರಕಾರದ ಶ್ರೀರಕ್ಷೆ

06:40 AM Dec 18, 2018 | Team Udayavani |

ಲಾಹೋರ್‌: ಉಗ್ರರನ್ನು ನಾವು ಪೋಷಿಸುತ್ತಿಲ್ಲ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಪಾಕಿಸ್ಥಾನದ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿಕೆಯ ಬಣ್ಣ ಬಯಲಾಗಿದೆ. 

Advertisement

ಇಮ್ರಾನ್‌ ಸಂಪುಟದ ಸಚಿವರೊಬ್ಬರು, ಪಾಕಿಸ್ಥಾನ್‌ ತೆಹ್ರೀಕ್‌ ಎ ಇನ್ಸಾಫ್ ಪಕ್ಷ ಅಧಿಕಾರದಲ್ಲಿ ಇರುವವರೆಗೂ ಮುಂಬಯಿ ದಾಳಿ ಸಂಚುಕೋರ, ಜೆಯುಡಿ ಉಗ್ರ ಹಫೀಜ್‌ ಸಯೀದ್‌ಗೆ ರಕ್ಷಣೆ ಯಿದೆ ಎಂದಿದ್ದಾರೆ. ಸಚಿವ ಶೆಹರ್ಯಾರ್‌ ಅಫ್ರಿದಿ ಮಿಲಿ ಮುಸ್ಲಿಂ ಲೀಗ್‌ನ ನಾಯಕರೊಂದಿಗೆ ಹೇಳಿರುವ ವಿಡಿಯೋ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next