Advertisement

ಹಫೀಜ್‌ ಸಯೀದ್‌ ಮತ್ತೆ ಬಂಧನ

06:05 AM Dec 01, 2017 | Harsha Rao |

ಹೊಸದಿಲ್ಲಿ: ಮುಂಬಯಿ ದಾಳಿ ಉಗ್ರ ಹಫೀಜ್‌ ಸಯೀದ್‌ನನ್ನು ಪಾಕಿಸ್ಥಾನ ಮತ್ತೆ ಬಂಧಿಸಿದೆ. ಅಮೆರಿಕ ಸಹಿತ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಒತ್ತಡ ಉಂಟಾದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೆಲ ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಆದರೆ ಅಲ್ಲಿನ ಸರಕಾರವಾಗಲಿ, ಇಲ್ಲಿನ ಸರಕಾರವಾಗಲಿ ಈ ವಿಷಯವನ್ನು ದೃಢಪಡಿಸಿಲ್ಲ.

Advertisement

ಕಳೆದ ವಾರ ಪಾಕಿಸ್ಥಾನ ಅಲ್ಲಿನ ಹೈಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಆತನನ್ನು ಬಿಡುಗಡೆ ಮಾಡಿತ್ತು. ಆದರೆ ಈ ಕ್ರಮಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೆ ಭಾರತದ ವಾದವನ್ನು ಸಮರ್ಥಿಸಿದ ಅಮೆರಿಕ, ಸಯೀದ್‌ನನ್ನು ಮತ್ತೆ ಬಂಧಿಸದಿದ್ದರೆ ಪರಿಣಾಮ ನೆಟ್ಟಗಿರದು ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ಥಾನ ಆತನನ್ನು ಮತ್ತೆ ಗೃಹ ಬಂಧನದಲ್ಲಿ ಇರಿಸಿದೆ ಎಂದು ಹೇಳಲಾಗುತ್ತಿದೆ.

ಈ ಬೆಳವಣಿಗೆಗಳ ಮಧ್ಯೆ ಪಾಕಿಸ್ಥಾನದ ಸುದ್ದಿ ಮಾಧ್ಯಮಗಳು ಸಯೀದ್‌ ಬಂಧನ ಕುರಿತಂತೆ ಭಾರತ ದಲ್ಲಿ ವರದಿಯಾಗುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿವೆ. ಈ ಬಗ್ಗೆ ತಮಗಾವುದೇ ಮಾಹಿತಿ ಇಲ್ಲ ಎಂದು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next