Advertisement

ವಿದೇಶ ಪ್ರಯಾಣ ನಿಷೇಧ ತೆರವಿಗೆ ಹಫೀಜ್‌ ಸಯೀದ್‌ ಒತ್ತಾಯ

11:13 AM Feb 16, 2017 | udayavani editorial |

ಲಾಹೋರ್‌ : ಜಮಾತ್‌ ಉದ್‌ ದಾವಾ ಸಂಘಟನೆಯ ಮುಖ್ಯಸ್ಥ ಹಾಫೀಜ್‌ ಸಯೀದ್‌ ತನ್ನ ಮೇಲಿನ ವಿದೇಶ ಪ್ರಯಾಣ ನಿಷೇಧವನ್ನು ತೆಗೆದು ಹಾಕುವಂತೆ ಪಾಕ್‌ ಸರಕಾರವನ್ನು ಒತ್ತಾಯಿಸಿದ್ದಾನೆ.

Advertisement

ತನ್ನ ಜಮಾತ್‌ ಉದ್‌ ದಾವಾ ಸಂಘಟನೆಯ ಯಾವುದೇ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾದದ್ದಿಲ್ಲ ಮತ್ತು ತನ್ನಿಂದ ದೇಶದ ಭದ್ರತೆಗೆ ಯಾವುದೇ ಅಪಾಯವೂ ಇಲ್ಲ ಎಂದು ಆತ ವಾದಿಸಿದ್ದಾನೆ.

166 ಅಮಾಯಕ ಜೀವಗಳನ್ನು ಬಲಿಪಡೆದಿರುವ 2008ರ ಮುಂಬಯಿ ಭಯೋತ್ಪಾದಕ ದಾಳಿಗಳ ಮಾಸ್ಟರ್‌ ಮೈಂಡ್‌ ಆಗಿರುವ ಹಾಫೀಜ್‌ ಸಯೀದ್‌, ಪಾಕ್‌ ಒಳಾಡಳಿತ ಸಚಿವ ಚೌಧರಿ ನಿಸಾರ್‌ ಅಲಿ ಖಾನ್‌ ಅವರಿಗೆ ಈ ಬಗ್ಗೆ ಬರೆದಿರುವ ಪತ್ರದಲ್ಲಿ, 2017ರ ಜನವರಿ 30ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ವಿದೇಶ ನಿರ್ಗಮನ ನಿಷೇಧ ಪಟ್ಟಿಗೆ ಸೇರಿಸಲಾಗಿರುವ ತನ್ನ ಸಹಿತ 38 ಮಂದಿಯ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಬೇಕು’ ಎಂದು ಒತ್ತಾಯಿಸಿದ್ದಾನೆ. 

ಪಾಕ್‌ ಸರಕಾರ ಕಳೆದ ತಿಂಗಳಲ್ಲಿ ಸಯೀದ್‌ಮತ್ತು ಆತನ ಜೆಯುಡಿ ಮತ್ತು ಫ‌ಲಾಹ್‌ ಎ ಇನ್‌ಸಾಯಿಯತ್‌ ಸಂಘಟನೆಯ ಇತರ 37 ನಾಯಕರನ್ನು ವಿದೇಶ ನಿರ್ಗಮನ ನಿಷೇಧ ಪಟ್ಟಿಗೆ ಸೇರಿಸುವ ಮೂಲಕ ಅವರು ದೇಶ ಬಿಟ್ಟು ಹೋಗದಂತೆ ನಿರ್ಬಂಧಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next