ಇಸ್ಲಾಮಾಬಾದ್: ಪಾಕಿಸ್ಥಾನದ ಸಂಸತ್‌ಗೆ ಫೆ.8ರಂದು ಮತದಾನ ನಡೆ ಯ ಲಿದೆ. 2008ರಲ್ಲಿ ಮುಂಬಯಿನಲ್ಲಿ ನಡೆದಿದ್ದ ದಾಳಿಯ ರೂವಾರಿ, ಉಗ್ರ ಹಫೀಜ್ ಸಯೀದ್ ಪಾಕಿಸ್ಥಾನ ಮರ್ಕಾಜಿ ಮುಸ್ಲಿಂ ಲೀಗ್ ಎಂಬ ಪಕ್ಷ ಸ್ಥಾಪಿಸಿ ಚುನಾ ವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾನೆ.
ಈ ಮೂಲಕ ಹೆಸರಿಗೆ ಮಾತ್ರ ನಿಷೇಧಕ್ಕೆ ಒಳಗಾಗಿರುವ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾ ಸಂಘಟನೆ, ಸಯೀದ್‌ನ ಬಂಧು ಗಳು, ನಿಷೇಧಿತ ಸಂಘಟನೆ ಜಮಾತ್-ಉದ್-ದಾವಾದ ಸದ ಸ್ಯರೂ ಪಾಕಿಸ್ಥಾನದ ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸಿದ್ದಾರೆ.
ವಿವಿಧ ಆರೋಪಗಳಿಗೆ ಗುರಿಯಾಗಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲು ಶಿಕ್ಷೆ ಪಡೆಯುತ್ತಿರುವಂತೆಯೇ ಉಗ್ರ ಸಯೀದ್ ನೇತೃತ್ವದ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ ಅಂಶ ವರದಿಯಾಗಿದೆ. ವಿವಿಧ ಉಗ್ರ ಸಂಘಟನೆಗಳಿಗೆ ವಿತ್ತೀಯ ನೆರವು ನೀಡಿದ ಆರೋಪ ಗಳಿಗೆ ಸಂಬಂಧಿಸಿದಂತೆ ಹಫೀಜ್ ಸಯೀದ್ ಲಾಹೋರ್ ಜೈಲಿನಲ್ಲಿ 31 ವರ್ಷಗಳ ಕಠಿಣ ಸಜೆಯನ್ನು ಅನುಭವಿಸುತ್ತಿದ್ದಾನೆ.
ಸಂಬಂಧವೇ ಇಲ್ಲ
ಉಗ್ರ ಸಯೀದ್‌ನ ಪಕ್ಷದ ವಕ್ತಾರ ಮಾತನಾಡಿ, ನಿಷೇಧಿತ ಸಂಘಟನೆಗೂ, ರಾಜಕೀಯ ಪಕ್ಷಕ್ಕೂ ಸಂಬಂಧವೇ ಇಲ್ಲವೆಂದು ಹೇಳಿಕೊ ಂಡಿದ್ದಾನೆ. ಆದರೆ, ರಾಜಕೀಯ ವಿಶ್ಲೇಷ ಕರ ಪ್ರಕಾರ ನಿಷೇಧಿತ ಸಂಘಟನೆ ಯಾ ಗಿರುವ ಜಮಾತ್-ಉದ್-ದಾವಾದ ಇನ್ನೊಂದು ಮುಖವೇ ಈ ಪಕ್ಷವಾಗಿದೆ.