Advertisement
2001ಮುಂಬಯಿ ದಾಳಿಯ 7 ವರ್ಷ ಮೊದಲು ಭಾರತದ ಸಂಸತ್ತಿನ ಮೇಲೆ ಹಫೀಜ್ ದಾಳಿ ಮಾಡಿದ್ದ. ಅವನ ಬಂಧನಕ್ಕೆ ಭಾರತ ಪಾಕ್ ಅನ್ನು ಆಗ್ರಹಿಸುತ್ತಲೇ ಬಂದಿತ್ತು. ಅಂತೂ 2001ರ ಡಿಸೆಂಬರ್ 21ರಂದು ಪಾಕ್ ಸರಕಾರ ಬಂಧಿಸಿತ್ತು. ಆದರೆ 31 ಮಾರ್ಚ್ 2002ರಲ್ಲಿ ಅಲ್ಲಿನ ಹೈಕೋರ್ಟ್ ಆದೇಶದ ಮೇರೆಗೆ ಬಿಡುಗಡೆಗೊಳಿಸಲಾಗಿತ್ತು. ಮತ್ತೆ ಅದೇ ವರ್ಷ ಮೇ 15ರಂದು ಬಂಧಿಸಿ, ಅಕ್ಟೋಬರ್ 31ರಂದು ಜೈಲಿನ ಹೊರಗಿದ್ದ.
200 ಜನರ ಸಾವಿಗೆ 11 ಜುಲೈ 2006ರ ಮುಂಬಯಿಯ ರೈಲುಗಳಲ್ಲಿ ಸರಣಿ ನ್ಪೋಟ ಕಾರಣ ವಾಗಿತ್ತು. ಇದರಲ್ಲಿ ಹಫೀಜ್ ಪಾತ್ರ ನಿರ್ಣಾಯಕವಾಗಿತ್ತು. ಈ ಭೀಕರ ಕೃತ್ಯದಲ್ಲಿ ನೇರ ಭಾಗಿಯಾದ ಹಫೀಜ್ ಸಯೀದ್‌ನ ಬಂಧನಕ್ಕಾಗಿ ಭಾರತ ಅಂದಿನ ಪಾಕ್ ಪ್ರಧಾನಿ ಪರ್ವೇಜ್ ಮುಶ್ರಫ್ ಬಳಿ ವಿನಂತಿಸಲಾಗಿತ್ತು. ಆದರೆ ಆರಂಭದಲ್ಲಿ ಅದು ಪ್ರಯೋಜನವಾಗಿರಲಿಲ್ಲ. ಅಂತೂ 9 ಅಗಸ್ಟ್ 2006ರಲ್ಲಿ ಜೈಲು ಪಾಲಾಗಿದ್ದ. ಆದರೆ ಮತ್ತೆ ಹೈಕೋರ್ಟ್ ಆದೇಶದನ್ವಯ ವಾರದ ಬಳಿಕ ಹೊರ ಬಂದಿದ್ದ. ವಿಚಿತ್ರ ಎಂದರೆ ಅದೇ ದಿನ ಪುನಃ ಬಂಧನಕ್ಕೆ ಒಳಗಾಗಿದ್ದ ಹಫೀಜ್ ಅಕ್ಟೋಬರ್ 17ರಂದು ಹೊರಬಂದಿದ್ದ. 2008
170 ಜನರ ಮೃತ್ಯುವಿಗೆ ಕಾರಣವಾಗಿದ್ದ 26/11 ರ ಮುಂಬಯಿ ದಾಳಿಯಲ್ಲಿ ಹಫೀಜ್‌ನ ನೇರ ಪಾತ್ರ ಇತ್ತು. ಡಿಸೆಂಬರ್ 10ರಂದು ವಿಶ್ವಸಂಸ್ಥೆ ಆತನಿಗೆ ನಿರ್ಬಂಧ ವಿಧಿಸಿತ್ತು. ಮರುದಿನ ಪಾಕ್ ಸರಕಾರ ಉಗ್ರನನ್ನು ಬಂಧಿಸಿತ್ತು. ಆದರೆ ಭಾರತ ಎಷ್ಟೇ ಸಾಕ್ಷ್ಯಒದಗಿಸಿದ್ದರೂ 2009ರ ಜೂನ್ 2ರಂದು ಬಿಡುಗಡೆಗೊಂಡಿದ್ದ.
Related Articles
ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಹಫೀಜ್‌ನನ್ನು ಹಸ್ತಾಂತರಿಸುವಂತೆ, ಭಾರತದ ಹಲವು ಬಾರಿ ಕೋರಿಕೊಂಡಿತ್ತು. ಆದರೆ ಪಾಕ್ ಕಡೆಯಿಂದ ಯಾವುದೇ ಸ್ಪಂದನೆ ವ್ಯಕ್ತವಾಗಿ ರಲಿಲ್ಲ. ರೆಡ್ ಕಾರ್ನರ್ ನೋಟಿಸ್ ಕಳುಹಿಸಿದ ಬಳಿಕ ಬಂಧನ ವಾಗಿತ್ತು. ಆದರೆ ಲಾಹೋರ್ ಹೈಕೋರ್ಟ್ ಉಗ್ರನ ವಿರುದ್ಧ ಸಾಕ್ಷ್ಯ ಕೊರತೆ ಇದೆ ಎಂದು ಹೇಳಿ ಬಿಡುಗಡೆಗೆ ಆಜ್ಞಾಪಿಸಿತ್ತು.
Advertisement
2017ಸ್ವತಃ ಪಾಕಿಸ್ಥಾನವೇ ಹಫೀಜ್ ವಿರುದ್ಧ ಕಾನೂನು ಸಮರದ ನಾಟಕ ವಾಡಿತ್ತು. ಇವನಿಂದ ದೇಶದೊಳಗೆ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗುತ್ತದೆ ಎಂದು ಕೋರ್ಟ್ ಮೊರೆ ಹೋಗಿತ್ತು. ಇದರನ್ವಯ 24 ನವೆಂಬರ್‌ನಲ್ಲಿ ಬಂಧನ ಕ್ಕೊಳಗಾಗಿದ್ದ ಹಫೀಜ್ ಬಳಿಕ ಬಿಡುಗಡೆಗೊಂಡಿದ್ದ. ಇದೀಗ ಮತ್ತೆ ಪಾಕ್ ಉಗ್ರನನ್ನು ಜೈಲಿಗಟ್ಟಿದೆ. ಈ ಬಂಧನಕ್ಕೆ ಏನು ಕಾರಣ?
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕ ಭೇಟಿ ಸಂದರ್ಭ ಟ್ರಂಪ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಹಫೀಜ್ ವಿಷಯ ಚರ್ಚೆಗೆ ಬಂದಿದ್ದು, ಈ ಸಲುವಾಗಿ ಈ ಬಂಧನ ನಡೆದಿದೆ ಎಂಬ ವಿಶ್ಲೇಷಣೆ ನಡೆಯುತ್ತಿದೆ. ಉದಯವಾಣಿ ಸ್ಪೆಷಲ್ ಡೆಸ್ಕ್