Advertisement
ಇದರ ಆಹಾರ ಆದರಿಸಿ ಹೆಸರನ್ನು ಇಡಲಾಗಿದೆ. ಶರಾವತಿ ಮತ್ತು ಅಘನಾಶಿನಿ ಸಮುದ್ರಕ್ಕೆ ಸೇರುವ ಜಾಗದಲ್ಲಿ ಅದರಲ್ಲೂ ಅಘನಾಶಿನಿ ನದಿ ಪಶ್ಚಿಮ ಘಟ್ಟದಿಂದ ಹರಿಯುವುದರಿಂದಚಿಕ್ಕ ಹುಳುಗಳಿರುವ ಆಗರವಾಗಿದೆ. ಕಾರವಾರದ ಸಮುದ್ರ ತೀರದಲ್ಲಿ ಸಿಂಪುಹಿಡುಕ ವಲಸೆ ಬರುವುದು ಹೆಚ್ಚು. ಇದರಲ್ಲಿ ಬಣ್ಣ ವ್ಯತ್ಯಾಸದಿಂದ ಜಗತ್ತಿನ ಬೇರೆ ಬೇರೆ ಜಾಗದಲ್ಲಿ ಸುಮಾರು 11 ಉಪ ಪ್ರಬೇಧಗಳು ಸಿಕ್ಕಿವೆ. ಈ ಹಕ್ಕಿಯ ಕುರಿತು ಹೆಚ್ಚು ನಿಖರ ಅಧ್ಯಯನ ನಡೆದಿಲ್ಲ. ಉತ್ತರ ಕನ್ನಡ, ಗೋವಾ, ಕಾಸರಗೋಡು, ಕೇರಳದ ಸಮುದ್ರತೀರದಲ್ಲಿ ಇದು ಕಾಣಸಿಗುತ್ತದೆ. ಇದು ಪೆರು ನಡುಗಡ್ಡೆಯ ರಾಷ್ಟ್ರೀಯ ಪಕ್ಷಿ. ಹೆಮಟೊಪಿಡಿಡಿಯಾ ಕುಟುಂಬಕ್ಕೆ ಸೇರಿದೆ. ಹೆಮಟೋಪಸ್ ಎಂದರೆ ರಕ್ತದಂತಹ ಕೆಂಪು ಬಣ್ಣ ಎಂಬ ಅರ್ಥ ಇದೆ. ರಕ್ತ ಕೆಂಪು ಬಣ್ಣದ ಕಾಲು, ಚುಂಚು ಇರುವ ಹಕ್ಕಿ ಎಂಬ ಅರ್ಥದಲ್ಲಿ ಈ ಹೆಸರು ಇಡಲಾಗಿದೆ.
Related Articles
Advertisement
ಯುರೋಪಿನಲ್ಲಿ ಈ ಹಕ್ಕಿ ಮರಿಮಾಡುತ್ತವೆ. ಚಳಿಗಾಲ ಕಳೆಯಲು ಆಫ್ರಿಕಾ , ಭಾರತ, ಪಾಕಿಸ್ಥಾನ, ದಕ್ಷಿಣ ಭಾರತಕ್ಕೆ ವಲಸೆ ಬರುತ್ತವೆ. ಇದರ ವಲಸೆ ಮಾರ್ಗ- ವಲಸೆಯ ದಿನದ ನಿಖರತೆ, ಕುರಿತು ವಿಷಯ ತಿಳಿಯಬೇಕಿದೆ. ವಲಸೆ ಬಂದ ನಂತರ ಒಂದೇ ಜಾಗದಲ್ಲಿ ಹೆಚ್ಚು ಸಮಯ ಕಳೆಯುವುದು ಇದರ ಸ್ವಭಾವ. ಇದು ಆಹಾರ ಸಂಗ್ರಹಿಸುವಾಗ ಹಾರುವುದಕ್ಕಿಂತ ಓಡುವುದು ಹೆಚ್ಚು . ಅನಿವಾರ್ಯ ಪ್ರಸಂಗದಲ್ಲಿ ಮಾತ್ರ ಹಾರುತ್ತದೆ.
ಸಮುದ್ರ ತೀರದಲ್ಲಿ ದೊರೆಯುವ ತ್ಯಾಜ್ಯ ವಸ್ತುಗಳಿಂದ ಗೂಡು ನಿರ್ಮಿಸಿ 2-4 ಮೊಟ್ಟೆ ಇಡುತ್ತದೆ. ಇದರ ಬಣ್ಣ ತಿಳಿ ಕಂದು. ಮೊಟ್ಟೆಯ ದಪ್ಪ ಭಾಗದಲ್ಲಿ ಹೆಚ್ಚು ದೊಡ್ಡ ಮಚ್ಚೆ ಇರುತ್ತದೆ. ಕಾವು ಕೊಡುವ ಕಾರ್ಯವನ್ನು ಹೆಣ್ಣು ನಿರ್ವಹಿಸಿದರೆ -ಗಂಡು ರಕ್ಷಣೆ ಮತ್ತು ಕೆಲವೊಮ್ಮೆ ಹೆಣ್ಣಿಗೆ ವಿಶ್ರಾಂತಿ ಕೊಡಲು -ಸ್ವಲ್ಪ ಸಮಯ ಮೊಟ್ಟೆಯ ಮೇಲೆ ಕುಳಿತು ಕಾಯುತ್ತದೆ. 20 ವರ್ಷಗಳ ಕಾಲ ಒಂದೇ ಜಾಗದಲ್ಲಿ ಗೂಡು ಮಾಡಿಕೊಂಡು ಬಾಳಿದ ನಿದರ್ಶನವೂ ಈ ಹಕ್ಕಿಗೆ ಇದೆ.
ಪಿ. ವಿ. ಭಟ್ ಮೂರೂರು