Advertisement

Kerala: ಕೇರಳ ಮತಾಂತರ ಪ್ರಕರಣದಲ್ಲಿ ಸುದ್ದಿಯಾಗಿದ್ದ ಹದಿಯಾ ನಾಪತ್ತೆ!

11:55 PM Dec 10, 2023 | Pranav MS |

ಕೊಚ್ಚಿ: ಪ್ರೀತಿಸಿದ ಹುಡುಗನಿಗಾಗಿ ಇಸ್ಲಾಂಗೆ ಮತಾಂತರಗೊಂಡು ಕೇರಳದಲ್ಲಿ ಭಾರೀ ಸುದ್ದಿಯಾಗಿದ್ದ “ಹದಿಯಾ ಪ್ರಕರಣ’ಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ತಮ್ಮ ಪುತ್ರಿ ನಾಪತ್ತೆಯಾಗಿದ್ದಾಳೆ ಎಂದು ಆರೋಪಿಸಿ ಹದಿಯಾಳ ಅಪ್ಪ ಅಶೋಕನ್‌ ಕೆ.ಎಂ. ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾದ ಭಾಗವಾಗಿರುವ ಕೆಲವು ವ್ಯಕ್ತಿಗಳು ಹಾಗೂ ಆಕೆಯ ಪತಿಯೇ ಹದಿಯಾಳನ್ನು ಅಕ್ರಮವಾಗಿ ಕೂಡಿಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಮಂಗಳವಾರ ಈ ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆಯಿದೆ.

Advertisement

ಕಳೆದ ಒಂದು ತಿಂಗಳಿಂದ ಹದಿಯಾ ಕಾಣಿಸುತ್ತಿಲ್ಲ, ಆಕೆಯ ಫೋನ್‌ ಕೂಡ ಸ್ವಿಚ್‌ ಆಫ್  ಆಗಿದೆ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ತಮ್ಮ ಪುತ್ರಿ ಮಲಪ್ಪುರಂನಲ್ಲಿ ಹೋಮಿಯೋಪಥಿ ಕ್ಲಿನಿಕ್‌ ತೆರೆದಿದ್ದಳು. ಅದು ಕೂಡ ಮುಚ್ಚಿದೆ. ತಾನು ತನ್ನ ಪತಿಯಿಂದ ದೂರವಾಗಿ, ಬೇರೊಬ್ಬನನ್ನು ವಿವಾಹವಾಗಿದ್ದಾಗಿ ಆಕೆ ನಮ್ಮೊಂದಿಗೆ ಹೇಳಿಕೊಂಡಿದ್ದಳು ಎಂದೂ ಅಶೋಕನ್‌ ಹೇಳಿದ್ದಾರೆ. ಇನ್ನೊಂದೆಡೆ ಇತ್ತೀಚೆಗೆ ಟಿವಿ ಚಾನೆಲ್‌ವೊಂದರಲ್ಲಿ ಮಾತನಾಡಿದ್ದ ಹದಿಯಾ, “ನಾನು ನನ್ನ ಹೆತ್ತವರೊಂದಿಗೆ ಸಂಪರ್ಕದಲ್ಲಿದ್ದೇನೆ. ಆದರೂ ಅವರು ನನಗೆ ತೊಂದರೆ ಕೊಡುತ್ತಿದ್ದಾರೆ. ಸಂಘ ಪರಿವಾರವು ನನ್ನ ಅಪ್ಪನನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ’ ಎಂದು ಹೇಳಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next