Advertisement

ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ವಾರಂಬಳ್ಳಿ ಗ್ರಾಮದಲ್ಲಿ ಹಡಿಲು ಭೂಮಿ ಕೃಷಿ ನಾಟಿಗೆ ಚಾಲನೆ

02:28 PM Jul 18, 2021 | Team Udayavani |

ಉಡುಪಿ: ಸಾಮಾಜಿಕ ಕ್ಷೇತ್ರದ ಗಣ್ಯರಿಂದ ವಾರಂಬಳ್ಳಿ ಗ್ರಾಮದಲ್ಲಿ ಹಡಿಲು ಭೂಮಿ ಕೃಷಿ ನಾಟಿಗೆ ರವಿವಾರ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಚಾಲನೆ ನೀಡಿದರು.

Advertisement

ಆರ್ಗನೈಸೇಷನ್ ಡಿಸ್ಕಲೇನ್  ಇದರ ಜಾಗತಿಕ ಅಧ್ಯಕ್ಷರಾದ ರಾಜಾ ವಿಜಯ್ ಕುಮಾರ್,  ಮೈಸೂರು ಮರ್ಕೆಂಟೈಲ್ ಕಂ. ಲಿಮಿಟೆಡ್ ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ  ಹೆಚ್. ಎಸ್. ಶೆಟ್ಟಿ,ಸಾಗರ ಗ್ರೂಪ್ ಸ್ಥಾಪಕರಾದ ಆನಂದ  ರಾಘವ್ ಎಂ. ಶೆಟ್ಟಿ, ಖ್ಯಾತ ಚಲನಚಿತ್ರ ನಟ ರಕ್ಷಿತ್ ಶೆಟ್ಟಿ  ಇವರೊಂದಿಗೆ ಶಾಸಕ  ಕೆ. ರಘುಪತಿ ಭಟ್ ಅವರು ಭೂ ಮಾತೆಗೆ ಹಾಲನ್ನು ಅರ್ಪಿಸಿ, ನೇಜಿ ನೀಡುವ ಮೂಲಕ ಯಂತ್ರ ನಾಟಿ ಕಾರ್ಯಕ್ಕೆ ಚಾಲನೆ ನೀಡಿ ಬಳಿಕ ಎಲ್ಲಾ ಗಣ್ಯರು ಗದ್ದೆಗಳಿದು ಸ್ಥಳೀಯರೊಂದಿಗೆ ಸೇರಿ ನೇಜಿ ನೆಟ್ಟು ಕೃಷಿ ಚಟುವಟಿಕೆಗೆ ಪ್ರೋತ್ಸಾಹಿಸಿದರು.

ಈ ಭಾಗದಲ್ಲಿ ಹಡಿಲು ಭೂಮಿ ಕೃಷಿ ಆಂದೋಲನಕ್ಕೆ ಸಹಕರಿಸಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಂಘ – ಸಂಸ್ಥೆಯವರಿಗೆ, ಭೂ ಮಾಲಕರಿಗೆ, ಸ್ಥಳೀಯರಿಗೆ ಶಾಸಕ  ಕೆ. ರಘುಪತಿ ಭಟ್ ಅವರು ಕೃತಜ್ಞತೆ ಸಲ್ಲಿಸಿದರು.

ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗುಲಾಬಿ, ಉಪಾಧ್ಯಕ್ಷರಾದ ಸದಾನಂದ ಪೂಜಾರಿ ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಕೋಶಾಧಿಕಾರಿಗಳಾದ ರಾಘವೇಂದ್ರ ಕಿಣಿ, ಸದಸ್ಯರಾದ ಬಿರ್ತಿ ರಾಜೇಶ್ ಶೆಟ್ಟಿ, ಭುಜಂಗ ಶೆಟ್ಟಿ, ಪ್ರತಾಪ್ ಹೆಗ್ಡೆ ಮಾರಾಳಿ, ಮಹೇಶ್ ಠಾಕೂರ್, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರದ ಮುಖ್ಯಸ್ಥರಾದ ಡಾll ಬಿ. ಧನಂಜಯ್, ಹಿರಿಯ ಕ್ಷೇತ್ರಾಧಿಕಾರಿಗಳಾದ ಶಂಕರ್, ವಾರಂಬಳ್ಳಿ ಗ್ರಾಮ ಪಂಚಾಯತ್ ಸದಸ್ಯರು, ರುಕ್ಮಿಣಿ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾರ್ಕೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು, ಸ್ಥಳೀಯ ಸಂಘ ಸಂಸ್ಥೆಯ ಸದಸ್ಯರು, ಕೃಷಿಕರು, ಭೂ ಮಾಲಕರು, ಪ್ರಮುಖರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next