Advertisement

ಹಡಪದ ಅಪ್ಪಣ್ಣ ಬಸವಣ್ಣನ ಪ್ರತಿರೂಪ: ಪಾಟೀಲ

10:22 AM Jul 08, 2020 | Suhan S |

ವಿಜಯಪುರ: 12ನೇ ಶತಮಾನದ ಅನುಭವ ಮಂಟಪದಲ್ಲಿ ಬಸವಣ್ಣನವರ ಪ್ರತಿರೂಪವಾಗಿ ಶಿವಶರಣ ಹಡಪದ ಅಪ್ಪಣ್ಣ ಅವರ ಕಾರ್ಯ ವೈಖರಿಯಲ್ಲಿ ಕಾಣಬಹುದಾಗಿದೆ. ಕಾಯಕದ ಮೂಲಕವೇ ಬಸವಣ್ಣನವರ ಆಪ್ತ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದ ಅವರ ಕರ್ತವ್ಯ ಬದ್ಧತೆ ಅಚ್ಚಳಿಯದೆ ನಮ್ಮ ಮನದಲ್ಲಿ ನೆಲೆವೂರುವಂತೆ ಮಾಡಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ತಿಳಿಸಿದ್ದಾರೆ.

Advertisement

ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಹಡಪದ ಅಪ್ಪಣ್ಣ ಶರಣರ ಜಯಂತಿ ಸರಳ ಕಾರ್ಯಕ್ರಮದಲ್ಲಿ ಅಪ್ಪಣ್ಣ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, 12ನೇ ಶತಮಾನದ ಶರಣರು ನಮ್ಮೆಲ್ಲರಿಗೆ ದಾರಿದೀಪ. ಅವರು ಹಾಕಿಕೊಟ್ಟ ಆದರ್ಶ ಜೀವನ ಮಾರ್ಗದಲ್ಲೇ ನಾವೆಲ್ಲರೂ ಸಾಗಬೇಕಿದೆ. ಆದರೆ ಇಂದುಶರಣರನ್ನು ಒಂದು ಜಾತಿಗೆ ಅಥವಾ ಧರ್ಮಕ್ಕೆ ಸೀಮಿತವಾಗದೇ ತತ್ವ ಆದರ್ಶ ಪಾಲನೆಗೆ ಆದ್ಯತೆ ನೀಡಬೇಕಿದೆ ಎಂದರು.

ಜಿಪಂ ಸಿಇಒ ಗೋವಿಂದರೆಡ್ಡಿ, ಎಎಸ್ಪಿ ರಾಮ ಅರಿಸಿದ್ದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ, ವಿಜಯಪುರ ಸಹಾಯಕ ಆಯುಕ್ತ ಸೋಮಲಿಂಗ ಗೆಣ್ಣೂರ, ಬಸವರಾಜ ಶಿವಶರಣರ, ಶಿವಾನಂದ ತೊರವಿ, ಜಿ.ಎಸ್‌. ಕಟ್ಟಿ, ವಿಠಲ ನಾವಿ, ನರಸು ಜುಮನಾಳ, ಅಶೋಕ ನಾವಿ, ರಾವತು ಸವನಳ್ಳಿ, ಬಸವರಾಜ ಬಿಸನಾಳ,ರಮೇಶ ಇಳಕಲ್‌, ಸಿದ್ದಪ್ಪ ಹಡಪದ, ಚಂದ್ರಕಾಂತ ಹಡಪದ, ಸೋಮನಗೌಡ ಕಲ್ಲೂರ, ಭೀಮರಾವ್‌ ಜಿಗಜಿಣಿಗಿ, ಅಡಿವೆಪ್ಪ ಸಾಲಗಲ್‌, ಮಂಜುಳಾ ಸಾಲಗಲ್‌, ನಾಗರತ್ನ, ಫಯಾಜ್‌ ಕಲಾದಗಿ, ಗಿರೀಶ ಕುಲಕರ್ಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next