Advertisement

ಹ್ಯಾಕೋವರ್‌ ಪ್ರೋ 1.0: ರಾಷ್ಟ್ರ ಮಟ್ಟದ ಹ್ಯಾಕಥಾನ್‌ ಸ್ಪರ್ಧೆಯಲ್ಲಿ ನಿಟ್ಟೆ ತಂಡ ಪ್ರಥಮ

10:00 PM Mar 25, 2023 | Team Udayavani |

ಕಾರ್ಕಳ: ಇತ್ತೀಚೆಗೆ ಮುಂಬಯಿಯ ಪಿ.ಎಚ್‌.ಸಿ.ಇ.ಟಿ ಕಾಲೇಜಿನಲ್ಲಿ ನಡೆದ ಹ್ಯಾಕೋವರ್‌ ಪ್ರೋ 1.0 ಎಂಬ 3 ದಿನಗಳ ರಾಷ್ಟ್ರಮಟ್ಟದ ಹ್ಯಾಕಥಾನ್‌ ಸ್ಪರ್ಧೆಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಟಿ 3 ಟ್ರೈಬ್‌ ಎಂಬ ತಂಡವು ಪ್ರಥಮ ಬಹುಮಾನ ತನ್ನದಾಗಿಸಿಕೊಂಡಿದೆ.

Advertisement

ಈ ‘ಟಿ 3 ಟ್ರೈಬ್‌’ ತಂಡವನ್ನು ಕಾಲೇಜಿನ ವಿದ್ಯಾರ್ಥಿಗಳಾದ ಸ್ವಸ್ತಿಕ್‌ ಶೆಟ್ಟಿ, ನಾಗರಾಜ್‌ ಪಂಡಿತ್‌ ಮತ್ತು ತನಿಶಾ ರಾವ್‌ ಪ್ರತಿನಿಧಿಸಿದ್ದರು. ಈ ತಂಡಕ್ಕೆ ಪ್ರಶಸ್ತಿಯೊಂದಿಗೆ 30ಸಾವಿರ ನಗದು ಬಹುಮಾನ ಲಭಿಸಿದೆ. ದೇಶದ ವಿವಿಧ ರಾಜ್ಯಗಳಿಂದ ಭಾಗವಹಿಸಿದ್ದ 66 ತಂಡಗಳ ಪೈಕಿ 22 ತಂಡಗಳನ್ನು ಕೊನೆಯ ಸುತ್ತಿನ ಪ್ರಸೆಂಟೇಶನ್‌ ಗೆ ಆಯ್ಕೆ ಮಾಡಲಾಗಿತ್ತು. ಕೊನೆಯ ಸುತ್ತಿಗೆ ಆಯ್ಕೆಯಾಗಿದ್ದ ತಂಡಗಳ ಪೈಕಿ ನಿಟ್ಟೆ ತಾಂತ್ರಿಕ ಕಾಲೇಜಿನದ್ದೇ 3 ತಂಡಗಳು ಇದ್ದವು. ಈ ತಂಡಗಳು ಕಾಲೇಜಿನ ಫೈನೈಟ್‌ ಲೂಪ್‌ ಕ್ಲಬ್‌ ನ ಮಾರ್ಗದರ್ಶನದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next