Advertisement

ವಾಟ್ಸ್‌ಆ್ಯಪ್‌ಗೆ ಹ್ಯಾಕರ್‌ಗಳ ಕಾಟ!

02:51 AM May 15, 2019 | sudhir |

ಸ್ಯಾನ್‌ಫ್ರಾನ್ಸಿಸ್ಕೋ: ಇಸ್ರೇಲ್‌ ಮೂಲದ ಎನ್‌ಎಸ್‌ಒ ಗ್ರೂಪ್‌ ಎಂಬ ಕಳ್ಳಜಾಲಕ್ಕೆ ಸೇರಿದ ಹ್ಯಾಕರ್‌ಗಳು ವಾಟ್ಸ್‌ ಆ್ಯಪ್‌ ಇರುವ ಮೊಬೈಲ್‌ಗ‌ಳಿಗೆ ಲಗ್ಗೆ ಹಾಕಿದ್ದು, ಆ ಮೊಬೈಲ್‌ಗ‌ಳಲ್ಲಿದ್ದ ಖಾಸಗಿ ಮಾಹಿತಿ ಕಳವು ಮಾಡಿರುವ ಆತಂಕಕಾರಿ ವಿಚಾರ ಬಹಿರಂಗವಾಗಿದೆ.

Advertisement

ಇದರ ನಿಗ್ರಹಕ್ಕಾಗಿ ಈಗ ವಾಟ್ಸ್‌ ಆ್ಯಪ್‌ ಅಪ್‌ ಡೇಟ್‌ ಅನ್ನು ಗೂಗಲ್‌ ಸ್ಟೋರ್‌ನಲ್ಲಿ ಬಿಡುಗಡೆ ಮಾಡಿದ್ದು, ವಾಟ್ಸ್‌ ಆ್ಯಪ್‌ ಬಳಕೆದಾರರು ಇದನ್ನು ತತ್‌ಕ್ಷಣವೇ ಡೌನ್‌ಲೋಡ್‌ ಮಾಡಿಕೊಳ್ಳಬೇಕೆಂದು ಸೂಚಿಸಿದೆ.

ವಾಟ್ಸ್‌ಆ್ಯಪ್‌, ತನ್ಮೂಲಕ ಸಂವಹನಗೊಳ್ಳುವ ಮಾಹಿತಿಯನ್ನು “ಎನ್‌ಕ್ರಿಪ್ಶನ್‌’ ಮಾದರಿಯಡಿ ಸಂರಕ್ಷಿಸುತ್ತದೆ. ಆದರೆ, ಈ ವ್ಯವಸ್ಥೆಯಲ್ಲಿ ಇರಬಹುದಾದ ಸಣ್ಣಪುಟ್ಟ ಲೋಪಗಳನ್ನೇ ಪತ್ತೆ ಹಚ್ಚಿರುವ ಅತ್ಯಾಧುನಿಕ ಸಾಫ್ಟ್ವೇರ್‌ ಹ್ಯಾಕರ್‌ಗಳು, ಹೊಸ ಕಂಪ್ಯೂಟರ್‌ ಪ್ರೋಗ್ರಾಂ ಸೃಷ್ಟಿಸಿದ್ದಾರೆ. ಗ್ರಾಹಕರಿಗೆ ಒಂದು ಫೋನ್‌ ಕರೆ ಮಾಡಿ ಆ ಪ್ರೋಗ್ರಾಮನ್ನು ಮೊಬೈಲ್‌ಗ‌ಳಲ್ಲಿ ಗುಟ್ಟಾಗಿ ಅಳವಡಿಸಿ, ಅದರಲ್ಲಿರುವ ಗ್ರಾಹಕರ ಮೇಲ್‌ ವಿವರ, ಫೋಟೋ ಸೇರಿ ಹಲವಾರು ಮಾಹಿತಿಗಳನ್ನು ಕದಿಯುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next