ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ಇನ್ ಸ್ಟಾಗ್ರಾಂ ಅಪ್ಲಿಕೇಶನ್ ನಲ್ಲಿ ದೋಷವೊಂದು ಕಂಡುಬಂದಿದ್ದು, ಕೇವಲ ಒಂದು ಇಮೇಜ್ ನಿಂದ ನಿಮ್ಮ ಸಂಪೂರ್ಣ ಅಕೌಂಟ್ ನ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಈ ವರ್ಷಾರಂಭದಲ್ಲೇ ದೋಷ ಕಂಡುಬಂದಿದ್ದು, ಫೇಸ್ ಬುಕ್ ಸಮಸ್ಯೆಯನ್ನು ಸರಿಪಡಿಸಿಕೊಂಡಿತ್ತು. ಆದರೇ ಇನ್ ಸ್ಟಾಗ್ರಾಂ ನಲ್ಲಿ ಈ ಭದ್ರತಾ ವೈಫಲ್ಯ ಮುಂದುವರೆದಿದ್ದು ಬಳಕೆದಾರರ ಮಾಹಿತಿಗಳು ಹ್ಯಾಕರ್ ಗಳ ಪಾಲಾಗುವ ಸಾಧ್ಯತೆ ದಟ್ಟವಾಗಿದೆ.
ಈ ದೋಷವನ್ನು ಚೆಕ್ ಪಾಯಿಂಟ್ ಸಂಶೋಧಕರು ಕಂಡುಹಿಡಿದಿದ್ದು, ಈ ದೋಷ ಬಳಕೆದಾರರ ಸಂಪೂರ್ಣ ಅಕೌಂಟ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದೆ. ಮಾತ್ರವಲ್ಲದೆ ಬಳಕೆದಾರರ ಮೆಸೇಜ್ ಮತ್ತು ಫೋಟೋಗಳು ಹ್ಯಾಕ್ ಮಾಡಲು ಕೂಡ ಅನುವು ಮಾಡಿಕೊಡುತ್ತದೆ. ಒಂದು ವೇಳೆ ಈ ದೋಷವನ್ನು ಸರಿಪಡಿಸದಿದ್ದರೇ ಬಳಕೆದಾರರ ಪೋನ್ ಕಾಂಟ್ಯಾಕ್ಟ್, ಕ್ಯಾಮಾರ ಹಾಗೂ ಲೋಕೇಶನ್ ಡೇಟಾ ಗಳ ಮೇಲೂ ನಿಯಂತ್ರಣ ಸಾಧಿಸಬಹುದು. ಜನರ ಡಿವೈಸ್ ನಿಂದ ಅಚಾನಕ್ಕಾಗಿ ಅನುಮತಿ ಪಡೆದುಕೊಂಡು ಹ್ಯಾಕರ್ ಗಳು ಮೈಕ್ರೋಫೋನ್, ಕ್ಯಾಮರಾ, ಮುಂತಾದವುಗಳ ಮೇಲೆ ನಿಯಂತ್ರಣ ಸಾಧಿಸುತ್ತಾರೆ ಎಂದು ಚೆಕ್ ಪಾಯಿಂಟ್ ತಿಳಿಸಿದೆ.
remote code execution (RCE) ಮೂಲಕ ಹ್ಯಾಕರ್ ಗಳು ಇನ್ ಸ್ಟಾಗ್ರಾಂ ಬಳಕೆದಾರರ ಅಕೌಂಟ್ ಗಳಿಗೆ ಲಗ್ಗೆಯಿಡುತ್ತಾರೆ. ಬಳಿಕ ಆ ಡಿವೈಸ್ ಅನ್ನು ಬೇಹುಗಾರಿಕೆಯ ಸಾಧನವಾಗಿ ಬಳಸಿಕೊಳ್ಳುತ್ತಾರೆ. ಚೆಕ್ ಪಾಯಿಂಟ್ ಪ್ರಕಾರ, Mozjpeg ಇಮೇಜ್ ಡಿಕೋಡರ್ ಅನ್ನು ನಿಮ್ಮ ಚಾಟ್ ಬಾಕ್ಸ್ ಗೆ ಸೆಂಡ್ ಮಾಡಲಾಗುವುದು.ಆ ಬಳಿಕ ಈ ಇಮೇಜ್ ಮೊಬೈಲ್ ನಲ್ಲಿ ಸೇವ್ ಆದ ತಕ್ಷಣ ಡಿಕೋಡರ್ ಆಗಿ ಕಾರ್ಯನಿರ್ವಹಿಸಲು ಆರಂಭಿಸುತ್ತದೆ.ಕೂಡಲೇ ಇನ್ ಸ್ಟಾಗ್ರಾಂ ಹ್ಯಾಕರ್ ಗಳ ನಿಯಂತ್ರಣಕ್ಕೆ ಹೋಗುವುದು. ಮಾತ್ರವಲ್ಲದೆ ಈ ಅಪ್ಲಿಕೇಶನ್ ಮತ್ತೆ ಕಾರ್ಯನಿರ್ವಹಿಸದತಯೇ ಇರಬಹುದು. ಆ್ಯಪ್ ಡಿಲೀಟ್ ಮಾಡಿ ರೀ-ಇನ್ ಸ್ಟಾಲ್ ಮಾಡುವ ಅನಿವಾರ್ಯತೆ ಎದುರಾಗುತ್ತದೆ ಎಮದು ವರದಿಯಲ್ಲಿ ತಿಳಿಸಲಾಗಿದೆ.
ಆದ್ದರಿಂದ ಬಳಕೆದಾರರು ಅನಾಮಧೇಯ ವ್ಯಕ್ತಿಗಳಿಂದ ಬರುವ ಯಾವುದೇ ಇಮೇಜ್ ಗಳನ್ನು ಡೌನ್ ಲೋಡ್ ಮಾಡದಿರುವುದೇ ಒಳಿತು.