Advertisement
ಜೀವನ್ ಭೀಮಾನಗರದ ಪೊಲೀಸರ ಮುಂದೆ ಭಾನುವಾರ ದಿಢೀರ್ ಹಾಜರಾಗಿರುವ ಶ್ರೀಕಿ, ಹಾಜರಾತಿಗೆ ಸಹಿ ಹಾಕಿದ್ದಾನೆ. ಅಲ್ಲದೆ, ಮುಂದಿನ ದಿನಗಳಲ್ಲಿ ಸರಿಯಾದ ಸಮಯಕ್ಕೆ ಠಾಣೆಗೆ ಬಂದು ಹಾಜರಾಗಿ ಸಹಿ ಹಾಕುವುದಾಗಿ ತಿಳಿಸಿದ್ದಾನೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ವಿಚಾ ರಣೆಗೆ ಹಾಜರಾಗಿದ್ದರಿಂದ ಪೊಲೀಸ್ ಠಾಣೆಗೆ ಹಾಜ ರಾಗಿ ಸಹಿ ಹಾಕಲಾಗಿರಲಿಲ್ಲ ಎಂದೂ ಸಮಜಾಯಿಷಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
Advertisement
ಇದನ್ನೂ ಓದಿ:- ಉಡುಪಿ: ಸಂತೆಕಟ್ಟೆಯ ಬಳಿ ಕಂಬಕ್ಕೆ ಢಿಕ್ಕಿ ಹೊಡೆದ ಮೀನಿನ ಲಾರಿ; ಚಾಲಕ ಸಾವು
ಹೀಗಾಗಿ ಆತನಿಗೆ ನೀಡಲಾಗಿದ್ದ ಜಾಮೀನ ರದ್ದುಪಡಿಸುವಂತೆ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದರು. ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಆಲಿಯಾಸ್ ಶ್ರೀಕಿಗೆ ಪೊಲೀಸರು ಮುಂದಿನ ದಿನಗಳಲ್ಲಿ ಪ್ರತಿ ತಿಂಗಳ ನಾಲ್ಕನೇ ಶನಿವಾರದಂದು ಠಾಣೆಗೆ ಹಾಜರಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜತೆಗೆ ಶ್ರೀಕಿ ವಾಸವಿರುವ ವಿಳಾಸವನ್ನು ಪಡೆದುಕೊಳ್ಳಲಾಗಿದ್ದು, ಆತನ ಮೇಲೆ ನಿಗಾ ಇಡಲಾಗಿದೆ ಎಂದು ಜೀವನ್ ಭೀಮಾನನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
ಜಾರಿ ನಿರ್ದೇಶನಾಲಯದ ತನಿಖೆ
ಬಿಟ್ ಕಾಯಿನ್ ಹಾಗೂ ವೆಬ್‌ಹ್ಯಾಕ್ ಮಾಡಿರುವ ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿ ಕೊಂಡಿರುವ ಜಾರಿ ನಿರ್ದೇಶನಾಲಯ, ವಿಚಾರಣೆಗೆ ಹಾಜರಾಗುವಂತೆ ಶ್ರೀಕಿಗೆ ನೋಟಿಸ್ ನೀಡಿತ್ತು. ಆ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗಿದ್ದೇನೆ ಎಂದು ಶ್ರೀಕಿ ಹೇಳಿದ್ದು, ಹೀಗಾಗಿ ಇಡಿ ಅಧಿಕಾರಿಗಳು ಬಿಟ್ ಕಾಯಿನ್ ಬಗ್ಗೆ ಈತನಿಂದ ಪೂರಕ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳು, ಹೇಗೆ ಹ್ಯಾಕ್ ಮಾಡಲಾ ಗುತ್ತಿತ್ತು. ಎಲ್ಲೆಲ್ಲಿ ಹ್ಯಾಕ್ ಮಾಡಲಾಗಿದೆ. ಬಿಟ್‌ಕಾಯಿನ್ ಪ್ರಕರಣದಲ್ಲಿ ಯಾರಿಗೆ ಎಷ್ಟು ವರ್ಗಾ ವಣೆ ಮಾಡಿ ದ್ದಾನೆ ಎಂಬುದರ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.