ಉಡುಪಿಯಲ್ಲಿ ಹೆಚ್ಚು
ಕಳೆದ ಜನವರಿಯಿಂದ ಈವರೆಗೆ ಉಡುಪಿ ಜಿಲ್ಲೆಯ 3 ತಾಲೂಕುಗಳ ಪೈಕಿ ಉಡುಪಿ ತಾಲೂಕಿನಲ್ಲಿಯೇ ಡೆಂಗ್ಯೂ ಹಾಗೂ ಎಚ್1 ಎನ್ 1 ಪ್ರಕರಣಗಳ ಸಂಖ್ಯೆ ಹೆಚ್ಚು ಕಾಣಿಸಿಕೊಂಡಿದೆ. ಉಡುಪಿಯಲ್ಲಿ ಎಚ್1 ಎನ್1 – 197 ಪ್ರಕರಣ ಅದರಲ್ಲಿ 4 ಸಾವು, ಡೆಂಗ್ಯೂ 189- ಪ್ರಕರಣ (ನಗರ- 139, ಗ್ರಾಮೀಣ- 50) ಕಾಣಿಸಿಕೊಂಡಿದೆ. ಕುಂದಾಪುರದಲ್ಲಿ ಎಚ್1 ಎನ್1 – 27 ಪ್ರಕರಣ ಅದರಲ್ಲಿ 2 ಸಾವು, ಡೆಂಗ್ಯೂ – 20 ಪ್ರಕರಣ, ಹಾಗೂ ಕಾರ್ಕಳದಲ್ಲಿ ಎಚ್1 ಎನ್ 1 – 27 ಪ್ರಕರಣ, ಡೆಂಗ್ಯೂ- 9 ಪ್ರಕರಣ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದಲ್ಲಿ ಯಾವುದೇ ಸಾವು ಪ್ರಕರಣ ದಾಖಲಾಗಿಲ್ಲ. ಇನ್ನುಳಿದಂತೆ ಮಲೇರಿಯಾ ಕೂಡ ನಿಯಂತ್ರಣದಲ್ಲಿದ್ದು, ಯಾವುದೇ ಚಿಕೂನ್ ಗುನ್ಯಾ ಪ್ರಕರಣ ಸಹ ಕಾಣಿಸಿಕೊಂಡಿಲ್ಲ.
Advertisement
ಇತ್ತೀಚಿಗೆ ಉಡುಪಿಯ ಉಪ್ಪೂರು ಕೆ.ಜಿ. ರೋಡ್‌ನ ಮಹಿಳೆಯೋರ್ವರು ಮೃತಪಟ್ಟಿದ್ದು, ಬಹುತೇಕ ಎಚ್1 ಎನ್1ನಿಂದಲೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ವಲಸೆ ಕಾರ್ಮಿಕರು, ಜನನಿಬಿಡ ಪ್ರದೇಶವಾಗಿರುವುದರಿಂದ ಉಡುಪಿ ತಾಲೂಕಿನ ನಗರಭಾಗದಲ್ಲಿಯೇ ಹೆಚ್ಚಿನ ಪ್ರಕರಣಗಳು ಕಾಣಿಸಿಕೊಳ್ಳುತ್ತಿದೆ. ಮಳೆಗಾಲವಾಗಿದ್ದು, ಈಗ ಸಾಂಕ್ರಾಮಿಕ ರೋಗಗಳ ಕುರಿತು ಹೆಚ್ಚಿನ ಜಾಗರೂಕತೆ ವಹಿಸಬೇಕಾದ ಅಗತ್ಯವಿದೆ. ಮಲೇರಿಯಾ, ಡೆಂಗ್ಯೂ, ಎಚ್ 1ಎನ್ 1, ಚಿಕೂನ್ ಗುನ್ಯಾದಂತಹ ಸಾಂಕ್ರಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳ ಜತೆಗೆ ಜನರೂ ಜಾಗೃತಿ ವಹಿಸುವುದು ಅತ್ಯಗತ್ಯ.
ಎಚ್1 ಎನ್ 1 ಉಸಿರಾಟದ ಮೂಲಕ ಹರಡುವ ರೋಗವಾಗಿರುವುದರಿಂದ ಈ ರೋಗ ಪೀಡಿತರು ಸೂಕ್ತ ಚಿಕಿತ್ಸೆ ಪಡೆಯಿರಿ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಲ್ಲ ರೀತಿಯ ಚಿಕಿತ್ಸೆ ಲಭ್ಯವಿದೆ. ಶ್ವಾಸಕೋಶ ಸಂಬಂಧಿ ಕಾಯಿಲೆಯಾಗಿರುವುದರಿಂದ ಶೀಘ್ರ ಗುಣಪಡಿಸುವುದು ಕಷ್ಟ. ಕೆಮ್ಮುವಾಗ ಕೈ ಅಡ್ಡ ಇಟ್ಟು ಅಥವಾ ಮಾಸ್ಕ್ ಧರಿಸಿ. ಕಚೇರಿ ಕೆಲಸಕ್ಕೆ ಹೋಗುವವರಿದ್ದರೆ, ಬೇರೆಯವರಿಗೂ ಹರಡುವ ಸಾಧ್ಯತೆಯಿಂದ ರಜೆ ಹಾಕುವುದು ಒಳ್ಳೆಯದು. ನಗರ ಪ್ರದೇಶದಲ್ಲಿ ಜನನಿಬಿಡ ಪ್ರದೇಶವಾಗಿರುವುದರಿಂದ ಹೆಚ್ಚಿನ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ವಾಸುದೇವ ಹೇಳಿದರು. ‘ನಿಯಂತ್ರಣಕ್ಕೆ ತುರ್ತು ಕ್ರಮ’
ಮಳೆಗಾಲದಲ್ಲಿ ಸೊಳ್ಳೆಗಳಿಂದ ಸಾಂಕ್ರಾಮಿಕ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಜ್ವರ, ಶೀತ, ಕೆಮ್ಮು ಕಾಣಿಸಿಕೊಂಡರೆ ಮನೆಯಲ್ಲಿಯೇ ಔಷಧಿ ಮಾಡುವು ದಕ್ಕಿಂತ ತತ್‌ಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆಯಿರಿ. ಮಲೇರಿಯಾ, ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಸಕಾರಾತ್ಮಕ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುತ್ತಿದ್ದು, ಸದ್ಯ ನಿಯಂತ್ರಣದಲ್ಲಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಪ್ರೇಮಾನಂದ ತಿಳಿಸಿದ್ದಾರೆ.
Related Articles
ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸಾಂಕ್ರಾಮಿಕ ರೋಗಗಳಿಗೆ ಔಷಧಿ ಲಭ್ಯವಿದ್ದು, ಚಿಕಿತ್ಸೆ ಪಡೆಯಿರಿ. ಯಾವುದೇ ಜ್ವರವಿರಲಿ, ಗಂಭೀರವಾಗಿದ್ದರೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ.
Advertisement
ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಿ, ಚರಂಡಿಗಳಲ್ಲಿ ಕಸ, ಕಡ್ಡಿಗಳನ್ನು ಎಸೆಯಬೇಡಿ. ನೀರು ಹರಿದು ಹೋಗುವಂತೆ ನೋಡಿಕೊಳ್ಳಿ.
ಮನೆಯ ನೀರು ಸಂಗ್ರಹಣಾ ಸಾಮಗ್ರಿಗಳನ್ನು ಮುಚ್ಚಿಡಿ, ದೊಡ್ಡ ತೊಟ್ಟಿ, ಟ್ಯಾಂಕ್‌ಗಳನ್ನು ವಾರಕ್ಕೊಮ್ಮೆ ತೊಳೆದರೆ ಉತ್ತಮ.
ಸಂಜೆ ವೇಳೆ ಮನೆಯ ಕಿಟಕಿ ಬಾಗಿಲುಗಳನ್ನು ಹಾಕಿ, ಕೀಟ ತಡೆಗಟ್ಟುವ ಜಾಲರಿ ಅಳವಡಿಸಿದರೆ ಒಳ್ಳೆಯದು.
ಮಳೆಗಾಲದಲ್ಲಿ ಆದಷ್ಟು ಬಿಸಿನೀರನ್ನೇ ಹೆಚ್ಚು ಕುಡಿಯಿರಿ.
ಬಾವಿ ನೀರು, ಕಾರಂಜಿಗಳು, ಕಟ್ಟಡ ನಿರ್ಮಾಣಕ್ಕಾಗಿ ಸಂಗ್ರಹಿಸಿದ ನೀರು, ಕೆರೆ, ಹೊಂಡ, ತೋಟದ ಬಾವಿ, ಗದ್ದೆಗಳಲ್ಲಿ ಸೊಳ್ಳೆ ಮರಿಗಳನ್ನು ತಿನ್ನುವ ಗ್ಯಾಂಬುಸಿಯ ಹಾಗೂ ಗಪ್ಪಿ ಮೀನುಗಳನ್ನು ಬಿಟ್ಟರೆ ಸೊಳ್ಳೆ ಉತ್ತತ್ತಿಯನ್ನು ನಿಯಂತ್ರಿಸಬಹುದು.
– ಪ್ರಶಾಂತ್ ಪಾದೆ