Advertisement

ಎಚ್‌1ಬಿ ವೀಸಾ ವಿವಾದ ಇತ್ಯರ್ಥ

11:22 PM May 04, 2021 | Team Udayavani |

ವಾಷಿಂಗ್ಟನ್‌: ಅಮೆರಿಕದ ಏಳು ಉದ್ಯಮಗಳು ಸೇರಿ ಅಮೆರಿಕದ ಪೌರತ್ವ ಮತ್ತು ವಲಸೆ ಸೇವಾ ಸಂಸ್ಥೆ ವಿರುದ್ಧ ಮಸಾಚುಸೆಟ್ಸ್‌ ಜಿಲ್ಲಾ ನ್ಯಾಯಾಲಯದಲ್ಲಿ ಹೂಡಿದ್ದ ಮೊಕದ್ದಮೆಯನ್ನು ಕೈಬಿಟ್ಟಿವೆ.

Advertisement

ಯುಎಸ್‌ಸಿಐಎಸ್‌, ವಿದೇಶಗಳ ಕೆಲಸಗಾರರಿಗೆ ಈ ಹಿಂದೆ ಇದ್ದಂತೆಯೇ ವಿದೇಶಿ ಕೆಲಸದ ವೀಸಾ ನೀಡಲು ಒಪ್ಪಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಇದರಿಂದ ಅಲ್ಲಿನ ಕಂಪೆನಿಗಳಲ್ಲಿ  ಕೆಲಸ ಮಾಡಲು ಬಯಸುವ ವಿದೇಶಿ ಉದ್ಯೋಗಿಗಳು ನಿಟ್ಟುಸಿರುಬಿಟ್ಟಿದ್ದಾರೆ.

ಅಕ್ಟೋಬರ್‌ 1ರ ಅನಂತರ ಎಚ್‌-1ಬಿ ವೀಸಾಗಳಿಗೆ ಸಲ್ಲಿಸಿದ್ದ ಅರ್ಜಿಗಳನ್ನು ಯುಎಸ್‌ಸಿಐಎಸ್‌ ಬೇಕಾಬಿಟ್ಟಿಯಾಗಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಈ ವರ್ಷ ಮಾರ್ಚ್‌ನಲ್ಲಿ ಅಮೆರಿಕದ 7 ಉದ್ಯಮಗಳ ಪರವಾಗಿ, ವಲಸೆ ಮಂಡಳಿ ಅರ್ಜಿ ಸಲ್ಲಿಸಿತ್ತು. ಇದೇ ವೇಳೆ,  ವಿದ್ಯಾರ್ಥಿ ವೀಸಾದೊಂದಿಗೆ ಅಮೆರಿಕಕ್ಕೆ ತೆರಳಲು ಬಯಸಿರುವ ಭಾರತೀಯ ವಿದ್ಯಾರ್ಥಿಗಳಿಗೆ, ಅಮೆರಿಕ ಸರಕಾರ‌ ಷರತ್ತುಬದ್ಧ ಅನುಮತಿ ನೀಡಿದೆ. ಅಲ್ಲಿನ  ಶಿಕ್ಷಣಸಂಸ್ಥೆಗಳಲ್ಲಿ ಓದಲು ಬಯಸುವ ಭಾರತೀಯರ ತರಗತಿಗಳು ಆ.1 ಅಥವಾ ಅನಂತರ ಶುರುವಾಗುವುದಾದರೆ ವೀಸಾ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next