Advertisement

ಸಚಿವರುಗಳ ಸಹಾನುಭೂತಿ ಬೇಕಿಲ್ಲ: ಮಿತ್ರಮಂಡಳಿಗೆ ವಿಶ್ವನಾಥ್ ಟಾಂಗ್

09:41 AM Jan 28, 2021 | Team Udayavani |

ಹುಣಸೂರು: ತಮ್ಮ ಬಗ್ಗೆ ಸಚಿವರುಗಳ ಬಾಯಿಮಾತಿನ ಸಹಾನುಭೂತಿ ಬೇಕಿಲ್ಲ, ಬದಲಾಗಿ ನಮ್ಮ 17 ಮಂದಿಯ ಟೀಂ ನನ್ನ ಬಗ್ಗೆ ಸಿಎಂ ಬಳಿ ಮಾತನಾಡಬೇಕಿತ್ತು ಎಂದು ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಟಾಂಗ್ ನೀಡಿದರು.

Advertisement

ಹುಣಸೂರು ತಾಲೂಕಿನ ನಾಗಾಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಎಸ್.ಟಿ.ಸೋಮಶೇಖರ್, ಬಿ.ಸಿ. ಪಾಟೀಲ್ ಮತ್ತಿತರರು ವಿಶ್ವನಾಥರೊಂದಿಗೆ ಇದ್ದೇವೆ ಎಂದು ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳಲ್ಲಿ ನನ್ನ ಬಗ್ಗೆ ಬಾಯಿ ಮಾತಿನ ಸಹಾನುಭೂತಿ ಬೇಕಿಲ್ಲ, ಆದರೂ ಒಬ್ಬಂಟಿಯಲ್ಲವೆಂದು ಹೇಳಿದ್ದಕ್ಕೆ ಅಭಿನಂದಿಸುವೆ ಎಂದರು.

ಇದನ್ನೂ ಓದಿ:ದೇವೇಗೌಡರ ಮೂರ್ತಿ ಪ್ರತಿಷ್ಠಾಪಿಸಿ ವಚನ ಪಾಲಿಸಿದ್ದ ಸಿಂದಗಿಯ ಮನಗೂಳಿ ಮುತ್ಯಾ!

ಸಚಿವ ಎಂಟಿಬಿ ನಾಗರಾಜ್ ಅವರು ವಿಶ್ವನಾಥ್ ನಮ್ಮ ಜೊತೆಯಲ್ಲೇ ಇದ್ದಾರೆಂದು ಹೇಳಿದ್ದಾರೆಂಬ ಪ್ರಶ್ನೆಗೆ ನಾವೆಲ್ಲರೂ ಜೊತೆಯಲ್ಲೇ ಇದ್ದೇವೆ, ಆದರೆ ಅವರು ಮಂತ್ರಿಯಾಗಿದ್ದಾರೆ. ಎಲ್ಲವೂ ಪವರ್ ಪಾಲಿಟಿಕ್ಸ್ ಬಿಡಿ ಎಂದು ವ್ಯಂಗ್ಯವಾಡಿದರು.

Advertisement

ಉಪ ಸಭಾಪತಿ ಪಟ್ಟ ಬೇಕಿಲ್ಲ: ವಿಧಾನ ಪರಿಷತ್ ಉಪಸಭಾಪತಿ ಹುದ್ದೆ ಕೊಟ್ಟರೆ ಒಪ್ಪುವಿರಾ ಎಂಬ ಪ್ರಶ್ನೆಗೆ ನಾನು ಕ್ಯಾಬಿನೆಟ್‌ ದರ್ಜೆ ಸಚಿವನಾಗಿದ್ದವನು, ಉಪ ಸಭಾಪತಿ ಹುದ್ದೆಗೆ ಒಪ್ಪಲಾರೆ. ಆದರೆ ಪಕ್ಷ, ಸಿಎಂ ವಿಶ್ವಾಸವಿಟ್ಟು ಸಭಾಪತಿ ಹುದ್ದೆ ನೀಡಿದರೆ ನೋಡೋಣ ಎಂದರು.

ಇದನ್ನೂ ಓದಿ: ಇನ್ನೂ ಅಧಿಕಾರ ಸ್ವೀಕರಿಸದ ಸಚಿವ ಆನಂದ್‌ ಸಿಂಗ್‌

ಸಿಗಬೇಕಾದ್ದು ಸಿಕ್ಕರೆ ಸುಮ್ಮನಾಗ್ತಾರೆ: ಸಚಿವ ಸಂಪುಟ ವಿಸ್ತರಣೆಯ ಅಸಮಾಧಾನದಿಂದ ಸಚಿವ ಮಾಧುಸ್ವಾಮಿಯವರು ರಾಜೀನಾಮೆ ನೀಡುತ್ತೇನೆಂದು ಹೇಳಿದ್ದರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಂಪುಟ ವಿಸ್ತರಣೆ ವೇಳೆ ಇವೆಲ್ಲ ಸಹಜ. ಅವರಿಗೆ ಸಿಗಬೇಕಾದ್ದು ಸಿಕ್ಕನಂತರ ಎಲ್ಲರೂ ಸುಮ್ಮನಾಗುತ್ತಾರೆ. ಈಗ ಎಲ್ಲವೂ ಸರಿಯಾಗಿದೆ. ಮುಖ್ಯಮಂತ್ರಿಗಳು ಬುದ್ದಿವಂತರಿದ್ದಾರೆ. ಅವರೆಲ್ಲಾ ನೋಡಿಕೊಳ್ಳುತ್ತಾರೆಂದು ಮಾರ್ಮಿಕವಾಗಿ ನುಡಿದರು.

ರೈತರ ದಂಗೆ ಅಕ್ಷಮ್ಯ ಅಪರಾಧ: ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪುಕೋಟೆ ಮೇಲೆ ಹಾರಿಸಿದ್ದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿ, ಬೇರೆ ಧ್ವಜ ಹಾರಿಸಿರುವುದು ರಾಷ್ಟ್ರ ದ್ರೋಹದ ಕೆಲಸ, ಅಕ್ಷಮ್ಯ ಅಪರಾಧವಾಗಿದೆ. ರೈತರು ನಮ್ಮದೇ ನಡೆಯಬೇಕೆಂಬ ಹಠಮಾರಿತನ ಬಿಟ್ಟು ಸರಕಾರಕ್ಕೆ ಕೆಲದಿನಗಳ ಕಾಲ ಅವಕಾಶ ಕೊಡಬಹುದಿತ್ತು. ರಾಜಕಾರಣಕ್ಕಾಗಿ ಇಂತಹವುಗಳನ್ನು ಸಹಿಸಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next