Advertisement

H. Vishwanath: ವಿಧಾನಸೌಧವೂ ಮಾಲ್‌ ಆಗಿ ಪರಿವರ್ತನೆ

10:01 PM May 25, 2024 | Team Udayavani |

ಮೈಸೂರು: ವಿಧಾನಸೌಧವೂ ಮಾಲ್‌ ಆಗಿ ಪರಿವರ್ತನೆಯಾಗಿ ಬಿಟ್ಟಿದೆ. ಅಲ್ಲಿ ಏನು ಬೇಕಾದರೂ ಕೊಳ್ಳಬಹುದು, ಏನನ್ನಾದರೂ ಮಾರಬಹುದು ಎಂದು ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್‌.ವಿಶ್ವನಾಥ್‌ ವಿಷಾದ ವ್ಯಕ್ತಪಡಿಸಿದರು.

Advertisement

ಮೈಸೂರಿನ ಕನ್ನಡ ಚಳವಳಿ ಕೇಂದ್ರ ಸಮಿತಿ ಹಾಗೂ ಕರ್ನಾಟಕ ಸೇನಾ ಪಡೆಯ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ 7 ಕೋಟಿ ಜನರ ಪ್ರಾಧಿಕಾರವಾಗಿರುವ ವಿಧಾನಸೌಧದಲ್ಲಿ  ಈ ಹಿಂದೆ ಎಂತಹ ನಾಯಕರು, ಮುತ್ಸದ್ಧಿಗಳು ಆಡಳಿತ ನಡೆಸಿದ್ದರು. ಅಂಥವರು ಓಡಾಡಿದ ಜಾಗದಲ್ಲಿ ಈಗ ನನ್ನನೂ ಸೇರಿಸಿಕೊಂಡಂತೆ ಎಲ್ಲ ಪಕ್ಷಗಳ ರಾಜಕೀಯ ನಾಯಕರ ಧೋರಣೆಯಿಂದಾಗಿ ಕೊಡು-ಕೊಳ್ಳುವ ವ್ಯವಸ್ಥೆ ಬಂದುಬಿಟ್ಟಿದೆ. ಕನ್ನಡವನ್ನೂ ಮಾರಬಹುದು, ಸಂಸ್ಕೃತಿಯನ್ನೂ ಮಾರಬಹುದು ಎಂದು ವಿಶ್ವನಾಥ್‌ ಪ್ರಸ್ತುತ ಸ್ಥಿತಿ ಬಗ್ಗೆ ವಿಷಾದದಿಂದ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next