Advertisement
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನೇ ಯೇಸು, ನಾನೇ ಬಸವೇಶ್ವರ, ನಾನೇ ರಾಮಾನುಜಾಚಾರ್ಯ, ಶಂಕರಾಚಾರ್ಯ’ ಎಂದು ಬೊಗಳೆ ಬಿಡುವ ರಮೇಶ್‌ಕುಮಾರ್, ಪ್ರಧಾನಿ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಸರ್ಕಾರ ಸುಮ್ಮನೆ ಕೂರದೆ ಪ್ರಕರಣ ದಾಖಲಿಸಿ, ಅವರನ್ನು ಜೈಲಿಗೆ ಹಾಕಬೇಕು. ಸಂವಿಧಾನಬಾಹಿರವಾಗಿ ಮಾತನಾಡುವ ಎಲ್ಲರ ಮೇಲೂ ಪಕ್ಷಾತೀತವಾಗಿ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು.
ಎಚ್.ಡಿ.ಕುಮಾರಸ್ವಾಮಿ ಮಗನ ಮದುವೆ ಹೆಸರಲ್ಲಿ ರಾಮನಗರ, ಚನ್ನಪಟ್ಟಣದ ಜನತೆಗೆ ಸೀರೆ, ಪಂಚೆ ಕೊಟ್ಟು ಊಟ ಹಾಕಿಸಿ, ಋಣ ತೀರಿಸುವುದಲ್ಲ. ಜನಪರ ಕಾರ್ಯಕ್ರಮ ಕೊಟ್ಟು ಆ ಜನರ ಋಣ ತೀರಿಸಬೇಕೆಂದು ಸಲಹೆ ನೀಡಿದರು. ಸಚಿವ ಶ್ರೀರಾಮುಲು ಕೂಡ ಬಳ್ಳಾರಿಯಲ್ಲಿ 500, ಸಾವಿರ ಜನರ ಸಾಮೂಹಿಕ ವಿವಾಹ ಮಾಡುವವರು. ಆದರೆ, ತಮ್ಮ ಮಗಳನ್ನು ಬೆಂಗಳೂರಿಗೆ ಕರೆ ತಂದು ಅದ್ಧೂರಿಯಾಗಿ ಮದುವೆ ಮಾಡಿಕೊಡುತ್ತಾರೆ. ಇವರಿಗೆ ಏನು ಹೇಳುವುದು ಎಂದು ಮೂದಲಿಸಿದರು. ನಾನು, ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ಆಂಜನೇಯ ಅವರು ನಮ್ಮ ಮಕ್ಕಳಿಗೆ ಸರಳ ವಿವಾಹ ಏರ್ಪಡಿಸಿ ಆದರ್ಶ ಮೆರೆದಿದ್ದೇವೆ ಎಂದು ಸ್ಮರಿಸಿದರು.