Advertisement

ಸರ್ಕಾರ ನಡೆಸುವ ಮಂದಿ ಹೆಣದ ಮೇಲೆ ದುಡ್ಡು ಎತ್ತಲು ಹೋಗಬೇಡಿ : ಹೆಚ್.ವಿಶ್ವನಾಥ್ ವಾಗ್ದಾಳಿ

11:09 AM May 19, 2021 | Team Udayavani |

ಮೈಸೂರು: ಮೈಸೂರಿನಲ್ಲಿ  ಡಿಸಿಗೆ, ಜಿಲ್ಲಾ ಮಂತ್ರಿಗೆ ಹತ್ತು ಪೈಸೆ ಖರ್ಚು ಮಾಡುವ ಹಕ್ಕಿಲ್ಲ. ಖರ್ಚು ಮಾಡುವ ಪವರ್ ಇದ್ರೆ ಅದು  ವಿಜೇಂದ್ರನಿಗೆ ಮಾತ್ರ‌. ಬಿಲ್ ಪಡೆಯಬೇಕು ಅಂದರೆ ಬೆಂಗಳೂರಿಗೆ ಹೋಗಬೇಕು. ಇಲ್ಲಿ ಅಧಿಕಾರ ಕೇಂದ್ರಿಕರಣ ಆಗಿದೆ ಎಂದು ಪರಿಷತ್ ಸದಸ್ಯ ಹೆಚ್.ವಿಶ್ವನಾಥ್  ಗುಡುಗಿದರು.

Advertisement

ಮೈಸೂರುನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾನಾಡಿದ ಅವರು,ಹಳ್ಳಿಗಳಲ್ಲಿ ಕೊವೀಡ್ ಗೆ ಒಂದು ಮಾತ್ರೆ ಸಿಗ್ತಾ ಇಲ್ಲ. ಮಾತ್ರೆಗಳು ಬೇಕು ಅಂದ್ರೆ ಬೆಂಗಳೂರಿಗೆ ಹೋಗಬೇಕು. ಒಬ್ಬರೇ ಅಧಿಕಾರವನ್ನು ಹಿಡಿದಿಟ್ಟುಕೊಂಡಿದ್ದಾರೆ. ನಾನು ತುಂಬಾ ನೋವಿನಿಂದ ಹೇಳುತ್ತಿದ್ದೇನೆ. ಸರ್ಕಾರ ನಡೆಸುವ ಮಂದಿ ಹೆಣದ ಮೇಲೆ ದುಡ್ಡು ಎತ್ತಲು ಹೋಗಬೇಡಿ. ಪ್ರತಿ ಜಿಲ್ಲಾಧಿಕಾರಿಗೂ ಅವರಿಗೆ ಇರುವ ಅಧಿಕಾರವನ್ನು ಬಳಸಲು ಅವಕಾಶ ಕೊಡಿ. ಜಿಲ್ಲಾಧಿಕಾರಿಕರಗಳ ಮೇಲಿನ ಸ್ಥಾನಕ್ಕೆ ಪ್ರಿನ್ಸಿಪಲ್ ಸೆಕ್ರೆಟರಿ ಕ್ಯಾಟಗರಿ ಅಧಿಕಾರಿ ನೇಮಕ ಮಾಡಿ ಅವರಿಗೆ ಫುಲ್ ಪವರ್ ಕೊಟ್ಟು ಹಣ ಕೊಡಿ ಎಂದರು.

ಇದನ್ನೂ ಓದಿ : ಕೋವಿಡ್ ಗೆ ಬಲಿಯಾದ ವಾರಿಯರ್ಸ್ : ಬ್ಲ್ಯಾಕ್ ಫಂಗಸ್ ಶಂಕೆ ?

ಮೈಸೂರಿನಲ್ಲಿ‌ ಡಿಸಿ ಇರಲಿ, ಆದರೆ ಅವರ ಮೇಲೆ ಸರ್ಕಾರದ ಕಾರ್ಯದರ್ಶಿಗಳಿರಲಿ. ಅವರಿಗೆ ಈಗ ಬೇರೆ ಕೆಲಸ ಇಲ್ಲ. ಅವರು ಬಂದು ಇಲ್ಲಿ ಕೂತರೇ ಕೆಲಸ ಆಗುತ್ತದೆ. ಅವರಿಗೆ ವಿಶೇಷವಾದ ಅಧಿಕಾರ ಇರುತ್ತದೆ . ಆಸ್ಪತ್ರೆಯಲ್ಲಿ ಸೂಪರಿಂಟೆಂಡೆಂಟ್ ಸುಮ್ಮನ್ನೆ ಕೂತಿದ್ದಾರೆ.ಅವರಿಗೆ ಹಣವಿಲ್ಲ, ಸರಿಯಾದ ವ್ಯವಸ್ಥೆ ಇಲ್ಲ.ಮೊದಲು ಅಲ್ಲಿ ಸರಿಯಾದ ವ್ಯವಸ್ಥೆ ಮಾಡಿ. ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾತಾನಾಡಿದ ಅವರು, ಹಳ್ಳಿಗಳಲ್ಲಿ ಸಾಯುತ್ತಿರೋದು ಅಹಿಂದದವರು. ಅಂದರೆ ಬಡ ವರ್ಗದವರು’ ಸುಮ್ಮನ್ನೆ ಮಾತಾಡೋದಲ್ಲ.ಈಗ ಬಂದು ಅವರ ಕಷ್ಟ ನೋಡಿ,ಹಳ್ಳಿಗಳಲ್ಲಿ ಬೆಡ್, ಆಕ್ಸಿಜನ್ ಸಿಗದೆ ಜನ ನರಳುತ್ತ ಸಾಯುತ್ತಿದ್ದಾರೆ. ಈಗಾಗಲೇ ಹಳ್ಳಿಯಲ್ಲಿ ಕೋವಿಡ್  ಹೆಚ್ಚಾಗುತ್ತಿದೆ. ಮೊದಲು ಇಲ್ಲಿನ ಜನರಿಗೆ ಕರೊನಾದಿಂದ ಮುಕ್ತಗೊಳಿಸಿ ಎಂದು ಸರ್ಕಾರದ ಜತೆಗೆ ಸಿದ್ದರಾಮಯ್ಯರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

Advertisement

ಲಾಕ್ ಡೌನ್ ವಿಸ್ತರಣೆ ಕುರಿತು ಮಾತಾನಾಡಿದ ಅವರು, ಡಿಸಿ ಬೆಳಗ್ಗೆ 6 ರಿಂದ 8 ರವರೆಗೆ ವ್ಯಾಪಾರಕ್ಕೆ ಅವಕಾಶ ಕೊಡ್ತಿನಿ ಅಂತಾರೆ.ದಿನವು ಏಕೆ ಅಂಗಡಿ ತೆಗಿಯಬೇಕು.ಮಾಂಸದ ಅಂಗಡಿ ಬಳಿ ಜನ ಜಂಗುಳಿ ಸೇರುತ್ತಿದೆ. ಒಂದು ತಿಂಗಳು ಮಾಂಸ ತಿನ್ನಲಿಲ್ಲ ಅಂದರೆ ಸತ್ತು ಹೋಗುತ್ತಾರ.?ಕಾಮನ್ ಸೆನ್ಸ್ ಇಲ್ಲದೆ ಏನೇನೋ ತೀರ್ಮಾನ ಮಾಡಬಾರದು. ವಾರಕ್ಕೆ ಒಂದು ದಿನ ಮಾತ್ರ ಅವಕಾಶ ಕೊಟ್ಟು ಲಾಕ್‌ಡೌನ್ ಮಾಡಿ. ಎಲ್ಲವನ್ನೂ ಕೊಟ್ಟು ಮತ್ತೆ 15 ದಿನ ಲಾಕ್‌ಡೌನ್ ಮಾಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next