ಗಂಗಾವತಿ: ಅಂಜನಾದ್ರಿ ಬೆಟ್ಟ ಕೇವಲ ಹಿಂದು ಧರ್ಮದ ಸ್ವತ್ತು ಮುಸ್ಲಿಂ ಹಾಗೂ ಕ್ರೈಸ್ತರ ಸ್ವತ್ತಲ್ಲ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯುವಂತೆ ಬಿಜೆಪಿ ಹಿರಿಯ ಮುಖಂಡ ಎಚ್ ಆರ್ ಚನ್ನಕೇಶವ ಆಗ್ರಹಿಸಿದ್ದಾರೆ.
ಶ್ರೀ ರಾಮನ ಬಂಟ ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟ ಕೇವಲ ಹಿಂದು ಧರ್ಮದ ಸ್ವತ್ತಾಗಿದೆ. ಇದರಲ್ಲಿ ಅನ್ಯ ಮತೀಯರಿಗೆ ಯಾವುದೇ ಹಕ್ಕು ಇರಲ್ಲ. ಕೇವಲ ಅವರು ಆಂಜನೇಯನ ಭಕ್ತರಾಗಿ ದರ್ಶನ ಪಡೆಯಬೇಕು. ಅಂಜನಾದ್ರಿ ಬೆಟ್ಟ ಮುಸ್ಲಿಂಮರ ಸತ್ತು ಕ್ರೈಸ್ತರ ಸ್ವತ್ತು ಎಂದು ಮಾಜಿ ಸಚಿವ ಅನ್ಸಾರಿ ಹೇಳಿಕೆ ಖಂಡನೀಯವಾಗಿದೆ ಎಂದರು.
ಗಂಗಾವತಿ ಕ್ಷೇತ್ರದಲ್ಲಿ ಮುಸ್ಲಿಂರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಲಿದೆ ಎಂಬ ವಿಡಿಯೋ ವೈರಲ್ ನಿಂದಾಗಿ ಕಾಂಗ್ರೆಸ್ ನಲ್ಲಿ ಗೊಂದಲ ಮೂಡಿತು ಅದನ್ನು ಮರೆಮಾಚಲು ಅಂಜನಾದ್ರಿ ಎಲ್ಲರಿಗೆ ಸೇರಿದ್ದು ಎಂದು ಹನುಮ ಮಾಲೆ ಯ ವೇಷ ಹಾಕಿ ಕೊಳ್ಳುವುದು ಸರಿಯಲ್ಲ . ಐತಿಹಾಸಿಕ ಅಂಜನಾದ್ರಿ ಬೆಟ್ಟ ಹಿಂದು ಧರ್ಮದ ಆರಾಧ್ಯ ದೈವ ಪ್ರಭು ಶ್ರೀರಾಮಚಂದ್ರನ ಬಂಟ ಹನುಮಂತನ ಜನ್ಮಸ್ಥಳವಾಗಿದೆ. ಈ ಅಂಜನಾದ್ರಿ ಬೆಟ್ಟವನ್ನು ಭಾರತೀಯ ಜನತಾ ಪಕ್ಷದ ರಾಜ್ಯ ಸರಕಾರ ಅಭಿವೃದ್ಧಿ ಮಾಡಲು ಮುಂದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ರೂ.100 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಮತ್ತು ಸರಕಾರ ಸರ್ವ ಭಕ್ತರಿಗೆ ಅನುಕೂಲವಾಗುವ ರೀತಿಯ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಮತ್ತು ಅಂಜನಾದ್ರಿ ಬೆಟ್ಟ ರಾಜ್ಯ ಸರಕಾರದ ಹಿಂದು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದೆ ಎಂಬುದು ಇಕ್ಬಾಲ್ ಅನ್ಸಾರಿ ಅರಿತುಕೊಳ್ಳಬೇಕು. ಅಂಜನೇಯ ಸಮಸ್ಥ ಹಿಂದುಗಳ ಆರಾಧ್ಯ ದೈವವಾಗಿದ್ದಾನೆ. ಪ್ರತಿಯೊಂದು ಗ್ರಾಮದಲ್ಲಿ ಹನುಮಂತನ ಸ್ಮರಣೆ ನಿತ್ಯ ನಡೆಯುತ್ತದೆ. ಇತ್ತೀಚಿಗೆ ಅಂಜನಾದ್ರಿಗೆ ನಿತ್ಯ ಸಾವಿರಾರು ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಅಂಜನಾದ್ರಿ ಬೆಟ್ಟ ಅಧಿಕೃತವಾಗಿ ಹಿಂದು ಧರ್ಮದ ಸ್ವತ್ತಾಗಿದೆ. ಇದು ಯಾವತ್ತು ಅನ್ಯ ಧರ್ಮೀಯರ ಸ್ವತ್ತಾಗಲು ಸಾಧ್ಯವಿಲ್ಲ. ಅನ್ಯ ಧರ್ಮಿಯರು ದರ್ಶನ ಪಡೆದು, ತಮಗೆ ಇಷ್ಟವಾದ ಪೂಜೆ, ಪುನಸ್ಕಾರಗಳನ್ನು ಕೈಗೊಳ್ಳಬಹುದೇ ಹೊರತು ಅಂಜನಾದ್ರಿಯಲ್ಲಿ ಯಾವುದೇ ಅಧಿಕಾರ ಮತ್ತು ಹಕ್ಕು ಇರುವುದಿಲ್ಲ ಎಂದು ಚನ್ನಕೇಶವ ಸಲಹೆ ನೀಡಿದ್ದಾರೆ.
ಇಕ್ಬಾಲ್ ಅನ್ಸಾರಿ ತಮ್ಮ ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯದಲ್ಲಿ ಅಂಜನಾದ್ರಿಯನ್ನು ಎಳೆದು ತರಬಾರದು. ಈಗಾಗಲೇ ರಾಜ್ಯದಲ್ಲಿ ದೇವಸ್ಥಾನ, ಪೂಜೆ ಮತ್ತು ಹಿಂದು ಧಾರ್ಮಿಕ ಕ್ಷೇತ್ರಗಳಲ್ಲಿ ಅನ್ಯ ಧರ್ಮಿಯರಿಗೆ ಯಾವುದೇ ಅವಕಾಶ ನೀಡಬಾರದು ಎಂದು ವಾದ ಜೋರಾಗಿದೆ. ಇಂತಹ ಸಂದರ್ಭದಲ್ಲಿ ಸರ್ವ ಧರ್ಮಗಳ ನಡುವೆ ಸಾಮರಸ್ಯ ಮೂಡಿಸುವ ಕೆಲಸ ಎಲ್ಲರು ಸೇರಿ ಮಾಡಬೇಕು. ಆದರೆ ಅನ್ಸಾರಿ ಅವರು ಅಂಜನಾದ್ರಿ ಬೆಟ್ಟ ಮುಸ್ಲಿಂರ ಸ್ವತ್ತು ಎಂದು ಹೇಳಿಕೆ ನೀಡಿ ಕ್ಷೇತ್ರದ ಸಮಸ್ಥ ಹಿಂದುಗಳ ಭಾಗವನೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ಅಂಜನಾದ್ರಿ ಬೆಟ್ಟ ಎಲ್ಲರ ಎಲ್ಲರ ಸ್ವತ್ತು ಎಂದು ಹೇಳುವ ಇಕ್ಬಾಲ್ ಅನ್ಸಾರಿ ಅವರು ಮುಸ್ಲಿಂ ಧರ್ಮಗಳ ಪ್ರಾಥನಾ ಮಂದಿರಗಳು ಕೂಡಾ ಹಿಂದುಗಳ ಸ್ವತ್ತಾಗಿವೆ ಎಂದು ಒಪ್ಪಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿರುವ ಹೆಚ್.ಆರ್.ಚನ್ನಕೇಶವ ಅವರು ರಾಜಕಾರಣ ಮಾಡುವ ಸಂದರ್ಭದಲ್ಲಿ ಅನವಶ್ಯಕವಾಗಿ ಮಸೀದಿ, ಮಂದಿರ ಸೇರಿದಂತೆ ಯಾವುದೇ ಧರ್ಮದ ಭಾವನೆಗೆ ಮುಜುಗರ ಮೂಡಿಸುವುದು ಮತ್ತು ಧಕ್ಕೆ ತರುವಂತಹ ಹೇಳಿಕೆ ನೀಡಬಾರದು. ಅನ್ಸಾರಿ ಅವರ ಹೇಳಿಕೆ ಗಂಗಾವತಿ ಕ್ಷೇತ್ರದಲ್ಲಷ್ಟೆ ಅಲ್ಲ ರಾಜ್ಯದಲ್ಲಿ ಗಮನ ಸೇಳೆಯುವಂತಾಗಿದೆ. ತಕ್ಷಣ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು. ತಮ್ಮ ಕಾಂಗ್ರೆಸ್ ಪಕ್ಷದ ರಾಜಕೀಯ ತಿಕ್ಕಾಟವನ್ನು ಹಿಂದುಗಳ ಭಾವನೆಗೆ ಬಳಸಿಕೊಳ್ಳಲು ಮುಂದಾಗಿರುವುದು ಖಂಡನೀಯವಾಗಿದೆ ಎಂದು ಅನ್ಸಾರಿ ವಿರುದ್ಧ ಬಿಜೆಪಿ ಮುಖಂಡ ಚನ್ನಕೇಶವ ಟೀಕಿಸಿದ್ದಾರೆ .