Advertisement

ಮುಲುಂಡ್‌ ಬಂಟ್ಸ್‌ನ ನೂತನ ಅಧ್ಯಕ್ಷರಾಗಿ ಎಚ್‌. ಪ್ರಕಾಶ್ಚಂದ್ರ ಶೆಟ್ಟಿ

02:54 PM Aug 03, 2017 | |

ಮುಂಬಯಿ: ಮುಲುಂಡ್‌ ಬಂಟ್ಸ್‌ ಇಂದು ಮುಂಬಯಿಯಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿರುತ್ತದೆ. ಇದಕ್ಕೆ ಎಲ್ಲಾ ಸದಸ್ಯರ ಪರಿಶ್ರಮವೇ ಕಾರಣವಾಗಿದೆ. ಎಲ್ಲರೂಒಟ್ಟಾಗಿ ಸಂಘಟನೆಯಲ್ಲಿ ಶ್ರಮಿಸಬೇಕು. ಸಂಘಟನೆಯ ಮೂಲಕ ಸಮಾಜಪರ ಕಾರ್ಯಕ್ರಮಗಳು ನಿರಂತರ ಜರಗತ್ತಿರಬೇಕು. ಈ ಬಗ್ಗೆ ಮುಂದೆ ಬರುವ ನೂತನ ಆಡಳಿತ ಸಮಿತಿಯು ಮುಂದಾಗಬೇಕು ಎಂದು ಮುಲುಂಡ್‌ ಬಂಟ್ಸ್‌ನ ಅಧ್ಯಕ್ಷ ಎಸ್‌. ಬಿ. ಶೆಟ್ಟಿ ಅವರು ನುಡಿದರು.

Advertisement

ಜು. 30ರಂದು ಮುಲುಂಡ್‌ ಪೂರ್ವದ ಬಾನ್ಸೂರಿ ಹೊಟೇಲ್‌ ಸಭಾಗೃಹದಲ್ಲಿ ಜರಗಿದ ಮುಲುಂಡ್‌ ಬಂಟ್ಸ್‌ನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಹನ್ನೊಂದು ವರ್ಷಗಳಿಂದ ಮುಲುಂಡ್‌ ಪರಿಸರದಲ್ಲಿ ಸಮಾಜದ ಹಿತದೃಷ್ಟಿಯಿಂದ ಅನೇಕ ಕಾರ್ಯಚಟುವಟಿಕೆಗಳನ್ನು ಮುಲುಂಡ್‌ ಬಂಟ್ಸ್‌ ನಡೆಸಿಕೊಂಡು ಬಂದಿದೆ. ಇದಕ್ಕೆ ಸಮಾಜದ ದಾನಿಗಳ ಪ್ರೋತ್ಸಾಹವು ದೊರೆತಿರುವುದು ಅಭಿಮಾನದ ಸಂಗತಿ. ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಸಂಘಟನೆಯ ಬೆಳವಣಿಗೆಗೆ ಉತ್ತಮ ಕೊಡುಗೆ ನೀಡಿದ್ದಾರೆ. ನನ್ನ ಕಾರ್ಯಾವಧಿಯಲ್ಲಿ ನನ್ನೊಂದಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಿಸಲಾಯಿತು. ನೂತನ ಅಧ್ಯಕ್ಷ ರಾಗಿ ಆಯ್ಕೆಯಾದ ಎಚ್‌. ಪ್ರಕಾಶ್ಚಂದ್ರ ಶೆಟ್ಟಿ ಅವರನ್ನು ನಿರ್ಗಮನ‌ ಅಧ್ಯಕ್ಷ ಎಸ್‌. ಬಿ. ಶೆಟ್ಟಿ ಅವರು ಪುಷ್ಪಗುತ್ಛವನ್ನಿತ್ತು ಅಭಿನಂದಿಸಿದರು. ಸಭೆಯಲ್ಲಿ ಇತರ ಪದಾಧಿಕಾರಿಗಳ ಹೆಸರನ್ನು  ಘೋಷಿಸಿ ಸ್ವಾಗತಿಸಲಾಯಿತು.

ಪ್ರಾರಂಭದಲ್ಲಿ ಕಾರ್ಯದರ್ಶಿ ಅನಂತ್‌ ಅಡ್ಯಂತಾಯ ಅವರು  ಕಳೆದ ಸಾಲಿನ ವಾರ್ಷಿಕ ಮಹಾಸಭೆಯ ವರದಿ ಮಂಡಿಸಿದರು. ಕೋಶಾಧಿಕಾರಿ ಉದಯ ಎನ್‌. ಶೆಟ್ಟಿ ಅವರು ಸ್ವಾಗತಿಸಿದರು. ಮಾಜಿ ಅಧ್ಯಕ್ಷರಾದ ಎನ್‌. ವಿವೇಕ್‌ ಶೆಟ್ಟಿ ಮತ್ತು ಡಾ| ಸತ್ಯಪ್ರಕಾಶ್‌ ಶೆಟ್ಟಿ ಅವರು ಸಂಘಟನೆಯ ಬೆಳವಣಿಗೆಯನ್ನು ವಿವರಿಸಿ, ಎಸ್‌. ಬಿ. ಶೆಟ್ಟಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಅಧ್ಯಕ್ಷ ಎಸ್‌. ಬಿ. ಶೆಟ್ಟಿ ಅವರನ್ನು ಗೌರವಿಸಲಾಯಿತು. ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಉಪಸ್ಥಿತರಿದ್ದ ಸದಸ್ಯರು, ಪದಾಧಿಕಾರಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಎಚ್‌. ಪಿ. ಶೆಟ್ಟಿ, ಅನಂತ ಅಡ್ಯಂತಾಯ, ಉದಯ ಎನ್‌. ಶೆಟ್ಟಿ, ಶಂಕರ ಎ. ಶೆಟ್ಟಿ, ರತ್ನಾಕರ ಶೆಟ್ಟಿ, ಕರುಣಾಕರ ಬಿ. ಶೆಟ್ಟಿ, ಮಮತಾ ಎಂ. ಶೆಟ್ಟಿ, ಅಲೋಕ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸದಸ್ಯ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ನೂತನ ಉಪಾಧ್ಯಕ್ಷ ವಸಂತ್‌ ಪಿ. ಶೆಟ್ಟಿ, ಕಾರ್ಯದರ್ಶಿ ಉದಯ ಎನ್‌. ಶೆಟ್ಟಿ, ಕೋಶಾಧಿಕಾರಿ ಹರ್ಷವರ್ಧನ್‌ ಎ. ಶೆಟ್ಟಿ, ಜತೆ ಕಾರ್ಯದರ್ಶಿಗಳಾದ  ಹರಿ ಪ್ರಸಾದ್‌ ಎನ್‌. ಶೆಟ್ಟಿ ಮತ್ತು  ಸುಧಾಕರ ಶೆಟ್ಟಿ ಮತ್ತು ಜತೆ ಕೋಶಾಧಿಕಾರಿ ಪ್ರಸಾದ್‌ ಪಿ. ಶೆಟ್ಟಿ,  ಸಾಮಾಜಿಕ ಸಮಿತಿಯ ರತ್ನಾಕರ ಶೆಟ್ಟಿ, ಕಾರ್ಯಾಧ್ಯಕ್ಷ ವಿಜಯಕುಮಾರ್‌ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ವೇಣುಗೋಪಾಲ್‌ ಶೆಟ್ಟಿ, ಕ್ರೀಡಾ ಸಮಿತಿಯ ಹೇಮಂತ್‌ ವಿ. ಶೆಟ್ಟಿ, ಕ್ಯಾಟರಿಂಗ್‌ ಸಮಿತಿಯ ವಿಟuಲ್‌ ಶೆಟ್ಟಿ, ಲೀಗಲ್‌ ಸಮಿತಿಯ ನ್ಯಾಯವಾದಿ ಜಯಂತ್‌ ಶೆಟ್ಟಿ, ವಿವಾಹ ಸಮಿತಿಯ ಶಶಿಕಾಂತ್‌ ಶೆಟ್ಟಿ, ಕಾರ್ಯಕ್ರಮ ಸಮಿತಿಯ ಜಯ ಸೂಡ, ಕಟ್ಟಡ ಸಮಿತಿಯ ಸದಾನಂದ ಶೆಟ್ಟಿ, ಪ್ರಚಾರ ಸಮಿತಿಯ ಟಿ. ಆರ್‌. ಶೆಟ್ಟಿ, ಮಹಿಳಾ ವಿಭಾಗದ ವಿನುತಾ ಎಸ್‌. ಶೆಟ್ಟಿ, ಯುವ ವಿಭಾಗದ ಮೋಹಿತ್‌ ಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next