Advertisement
ಸೋಮವಾರ ಸಂಜೆ ತಾಲೂಕು ಕಚೇರಿ ಸಭಾಂಗಣದಲ್ಲಿ ಮಳೆ-ಬಿರುಗಾಳಿ ಹಾನಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳ ಸಭೆಯಲ್ಲಿ ಮಾತನಾಡಿ ಎಲ್ಲೆಡೆ ಮಳೆ ಹಾನಿ ಸಾಕಷ್ಟಿದ್ದರೂ ಸರಕಾರ ಎಚ್ಚೆತ್ತುಕೊಂಡಿಲ್ಲಾ, ಸರಕಾರದ ಬಗ್ಗೆ ಜನರಲ್ಲಿ ಭ್ರಮನಿರಸನವಾಗಿದೆ. ಕಳೆದ ಎರಡು ವರ್ಷಗಳ ಮಳೆ ಹಾನಿಗೆ ಸಂಬಂಧಿಸಿದಂತೆ ಇನ್ನು ಕೆಲವರಿಗೆ ಮನೆಗಳ ಪರಿಹಾರದ ಹಣ ಫಲಾನುಭವಿಗಳಿಗೆ ತಲುಪಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಲ್ಲಿ ನಿತ್ಯ ಬಿರುಗಾಳಿ ಮಳೆಯ ಉಪಟಳವಿದ್ದದ್ದೇ, ಆದರೆ, ಕೆಲ ಗ್ರಾಮಲೆಕ್ಕಿಗರು, ಪಿಡಿಓಗಳು ಸ್ಪಂದಿಸುತ್ತಿಲ್ಲವೆಂಬ ದೂರುಗಳಿವೆ. ಹಾನಿ ಸಂಭವಿಸಿದ ತಕ್ಷಣವೇ ಸ್ಪಂದಿಸಿ ಮಾನವೀಯತೆ ಮೆರೆಯಿರೆಂದು ಹುರಿದುಂಬಿಸಿದರು. ಹಾನಿ ಅಂದಾಜನ್ನು ಜಿ.ಪಂ.ಇಂಜಿನಿಯರಿಂಗ್ ವಿಭಾಗದವರು ಸಹ ತಕ್ಷಣವೇ ವರದಿ ನೀಡುವುದರಿಂದ ಬೇಗ ಪರಿಹಾರ ದೊರೆಯಲಿದೆ ಎಂದು ಸೂಚಿಸಿದರು. ತಾಲೂಕಲ್ಲಿ ಚೆಸ್ಕಾಂ, ಕಂದಾಯ, ನಗರಸಭೆ, ಗ್ರಾಮೀಣಾಭಿವೃದ್ದಿ ಇಲಾಖೆ ಸೇರಿದಂತೆ ಎಲ್ಲ ಇಲಾಖೆಯವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ಶ್ಲಾಘಿಸಿ, ಹನಗೋಡು ಉಪ-ತಹಶೀಲ್ದಾರ್ ಚೆಲುವರಾಜು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಿರೆಂದು ಸಭೆಯಲ್ಲೇ ತರಾಟೆಗೊಳಪಡಿಸಿ, ಬದ್ದತೆಯಿಂದ ಕೆಲಸ ಮಾಡಿರೆಂದು ಎಚ್ಚರಿಸಿದರು. ಸಭೆಯಲ್ಲಿ ತಹಶೀಲ್ದಾರ್ ಡಾ.ಅಶೋಕ್, ಇಓ ಗಿರೀಶ್ ಹಾಜರಿದ್ದರು.