Advertisement

ಕನ್ನಡ ಧ್ವಜಾರೋಹಣ ನಿಷೇಧಕ್ಕೆ ಎಚ್.ಕೆ.ಪಾಟೀಲ ಆಕ್ರೋಶ

08:12 AM Nov 02, 2019 | Team Udayavani |

ಗದಗ: ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಧ್ವಜಾರೋಹಣ ನಿಷೇಧಿಸಿರುವ ರಾಜ್ಯ ಸರ್ಕಾರ ಆದೇಶ ಅಪ್ರಬುದ್ಧತೆಯಿಂದ ಕೂಡಿದೆ. ಸರಕಾರದ ಈ ನಡೆ ನಾಡಿನ ಸಮಸ್ತ ಕನ್ನಡ ಅಭಿಮಾನಿಗಳ ಮನಸ್ಸು ಘಾಸಿಪಡಿಸಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಶಾಸಕ ಎಚ್.ಕೆ.ಪಾಟೀಲ ಕಿಡಿ ಕಾರಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಏಕೀಕರಣದ ಬಳಿಕ ಪ್ರತೀ ವರ್ಷ ಕನ್ನಡ ಬಾವುಟ ಹಾರಿಸಲಾಗುತ್ತದೆ. ಆದರೆ, ಈ ಬಾರಿ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಧ್ವಜರೋಹಣ ಮಾಡಬಾರದು ಎಂಬ ರಾಜ್ಯ ಸರಕಾರದ ಆದೇಶ ಅಪಹಾಸ್ಯಕ್ಕೀಡು ಮಾಡಿದೆ. ರಾಜ್ಯ ಸರಕಾರ ಪೂರ್ವ ಪರ ಚಿಂತಿಸದೇ, ರಾತ್ರೋರಾತ್ರಿ ಈ ನಿರ್ಣಯ ಕೈಗೊಂಡಿದೆ. ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ನೆನಪಿಸಿ, ಅಭಿಮಾನ ಪಡುವ ಈ ದಿನದಂದು ಪ್ರಜಾಪ್ರಭುತ್ವ ಪದ್ಧತಿಯನ್ನು ಗಾಳಿಗೆ ತೂರಿರುವುದು ಖಂಡನೀಯ.

ನಾಡಿನ ಜನರ ಭಾವನಾತ್ಮಕ ವಿಚಾರಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸರ್ವಪಕ್ಷ ಸಭೆ ಕರೆದು ಚರ್ಚೆ ನಡೆಸಬೇಕಿತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಕ್ಷಣವೇ ಈ ನಿರ್ಧಾರ ಹಿಂಪಡೆಯಬೇಕು. ಇಲ್ಲವೇ ಮುಂದಿನ ದಿನಗಳಲ್ಲಿ ಜನರು ತಕ್ಕಪಾಠ ಕಲಿಸುತ್ತಾರೆ ಎಂದು ಎಚ್.ಕೆ ಪಾಟೀಲ್ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜಿ.ಪಂ. ಅಧ್ಯಕ್ಷ ಸಿದ್ದು ಪಾಟೀಲ, ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ಕೆ.ಬಿ.ತಳಗೇರಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next