Advertisement
ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಜನದ್ರೋಹಿ, ರೈತ ವಿರೋಧಿ ಸರ್ಕಾರವಾಗಿದೆ. ಉತ್ತರ ಪ್ರದೇಶದಲ್ಲಿ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಗೃಹ ಸಚಿವರ ಮಗ ಕಾರು ಚಲಾಯಿಸಿ ಹತ್ಯೆ ಮಾಡಿದರೂ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಿಲ್ಲ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೋರಾಟಕ್ಕೆ ಧ್ವನಿಗೂಡಿಸಲು ಹೋದರೆ ಅವರನ್ನು ಬಂಧಿಸುತ್ತಾರೆ. ದೇಶದಲ್ಲಿ ಅಜಾರಕತೆ ಸೃಷ್ಟಿಯಾಗಿದೆ ಎಂದು ವಾಗ್ಧಾಳಿ ನಡೆಸಿದರು.
Related Articles
Advertisement
ಮಾಜಿ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ದೇಶದಲ್ಲಿ ಬೆಲೆ ಏರಿಕೆ ದುಷ್ಪರಿಣಾಮಗಳನ್ನು ಜನರು ಎದುರಿಸುತ್ತಿದ್ದಾರೆ. ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಬಡವರು ಗಳಿಸೋದು ನೂರು ರೂ. ಆದರೆ, ಪೆಟ್ರೋಲ್ ಗೇ 110 ರೂ. ಆದರೆ ಏನು ಮಾಡಬೇಕು. ಹೊಟ್ಟೆಗೆ ಏನು ತಿನ್ನಬೇಕು. ಆದ್ದರಿಂದ ಜನರು ಬಿಜೆಪಿಯ ಜನವಿರೋಧಿ ನೀತಿ ಬಗ್ಗೆ ಆಕ್ರೋಶಗೊಂಡಿದ್ದಾರೆ ಎಂದರು.
ಶ್ರೀನಿವಾಸ ಮಾನೆ ಅವರು ಯುವ ನಾಯಕರಾಗಿದ್ದು, ಶಾಸನ ಸಭೆಯಲ್ಲಿ ಕೆಲಸ ಮಾಡಿದ ಅನುಭವವಿದೆ. ಅವರು ಹಾನಗಲ್ಲಿಗೆ ವಲಸೆ ಬಂದಿಲ್ಲ. ಮೂರು ವರ್ಷಗಳಿಂದ ಇಲ್ಲಿಯೇ ನಿರಂತರ ಕೆಲಸ ಮಾಡಿದ್ದಾರೆ. ಈ ಉಪಚುನಾವಣೆಯಲ್ಲಿ ಪಕÒ ಗೆಲುವು ಸಾ ಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೆಪಿಸಿಸಿ ಕಾರ್ಯಾಧ್ಯಕÒ ಸಲೀಂ ಅಹ್ಮದ್ ಮಾತನಾಡಿ, ಈ ಬಾರಿ ಕಾಂಗ್ರೆಸ್‌ಗೆ ಎಲ್ಲ ವರ್ಗದ ಜನರ ಆಶೀರ್ವಾದವಿದೆ. ಕಳೆದ ಚುನಾವಣೆಯಲ್ಲಿ ಶ್ರೀನಿವಾಸ ಮಾನೆ ಅವರು ಕಡಿಮೆ ಅಂತರದಲ್ಲಿ ಸೋತಿದ್ದರು. ಈ ಉಪಚುನಾವಣೆಯಲ್ಲಿ ನಮ್ಮ ಸರ್ವೆ ಮಾಹಿತಿ ಪ್ರಕಾರ ಪಕÒದ ಅಭ್ಯರ್ಥಿ ಸುಮಾರು 20 ಸಾವಿರಕ್ಕೂ ಅ ಧಿಕ ಮತಗಳ ಅಂತರದಿಂದ ಗೆಲುವು ಸಾ ಧಿಸುವ ವಿಶ್ವಾಸವಿದೆ ಎಂದರು. ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ಮಾಜಿ ಶಾಸಕ ಡಿ.ಆರ್.ಪಾಟೀಲ, ಎಸ್.ಆರ್ .ಪಾಟೀಲ ಇತರರು ಇದ್ದರು.