Advertisement

ಕೋವಿಡ್‌-19 ಪ್ರಕರಣ ಹೆಚ್ಚಳ; ಅಸಮಾಧಾನ

04:00 PM Sep 26, 2020 | Suhan S |

ಹೊಳೆನರಸೀಪುರ: ತಾಲೂಕಿನಲ್ಲಿ ಕೋವಿಡ್‌ ಪ್ರಕರಣ ಹೆಚ್ಚಾಗಿದ್ದು, ಜನರು ಹೆಚ್ಚಿನ ಮುಂಜಾಗ್ರತೆ ವಹಿಸಬೇಕೆಂದು ಮಾಜಿ ಸಚಿವ, ಕ್ಷೇತ್ರದ ಶಾಸಕ ಎಚ್‌.ಡಿ.ರೇವಣ್ಣ ಸಲಹೆ ನೀಡಿದರು.

Advertisement

ತಾಲೂಕು ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕೊರೊನೊ ಸೋಂಕಿನ ಜತೆಗೆ ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ. ಆರೋಗ್ಯ ಇಲಾಖೆ ಈ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಸಭೆಯಲ್ಲಿ ಹಾಜರಿದ್ದ ತಾಲೂಕು ವೈದ್ಯಾಧಿಕಾರಿ ಎಚ್‌.ಎನ್‌.ರಾಜೇಶ್‌ಗೆ ಸೂಚಿಸಿದರು. ಪಟ್ಟಣದ ಕೋವಿಡ್‌ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ, ಅವಶ್ಯಕತೆ ಬಿದ್ದಲ್ಲಿ ಜಿಲ್ಲೆ ಕೇಂದ್ರ ಅಥವಾ ಇತರೆ ಪ್ರಮುಖ ಆಸ್ಪತ್ರೆಗಳಿಗೆ ಕಳುಹಿಸಿ, ಇದರಿಂದ ಸಾವಿನ ಪ್ರಮಾಣ  ತಡೆಯಬಹುದು. ಒಂದು ವೇಳೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೆಚ್ಚಿನ ಹಣ ಖರ್ಚಾದರೆ ಸಿಎಂ ಪರಿಹಾರ ನಿಧಿನಿಂದ ಕೊಡಿಸುವುದಾಗಿ ಹೇಳಿದರು.

ವಿಶೇಷ ಅವಕಾಶ: ಪಟ್ಟಣದ ಮಹಿಳಾ ಪಾಲಿಟೆಕ್ನಿಕ್‌ ಕಾಲೇಜಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಬದಲಾಗಿ ನೇರವಾಗಿ ಪ್ರಾಂಶುಪಾಲರನ್ನು ಭೇಟಿ ಮಾಡಿ ಸೇರ್ಪಡೆ ಆಗಲು ವಿಶೇಷ ಅವಕಾಶ ನೀಡಲಾಗಿದೆ. ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರಿಗೆ ವಸತಿ ಸೌಕರ್ಯ ನೀಡಲಾಗುತ್ತಿದೆ. ಜಿಲ್ಲೆಯಿಂದ ಹೊರಗಿನವರಿಗೂ ಸೇರ್ಪಡೆಗೆ ಅವಕಾಶವಿದೆ. ಪ್ರಸ್ತುತ ವಸತಿ ನಿಲಯದಕಟ್ಟಡಕಾಮಗಾರಿ ಪೂರ್ಣಗೊಂಡಿದ್ದು, ಇನ್ನೂ15 ದಿನಗಳಲ್ಲಿ ಆರಂಭಿಸಲಾಗುತ್ತಿದೆ ಎಂದು ಹೇಳಿದರು. ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರ ವ್ಯಾಸಂಗಕ್ಕೆ ಅವಶ್ಯಕವಿರುವ ಎಲ್ಲಾ ಸೌಲಭ್ಯಗಳು ದೊರೆಯಲಿದೆ. ಜತೆಗೆ ಈ ವಸತಿ ನಿಲಯ, ಕಾಲೇಜು ಎರಡು ಒಂದು ಪ್ರಾಂಗಣದಲ್ಲಿ ಇರುವುದರಿಂದ ಹೆಣ್ಣು ಮಕ್ಕಳಿಗೆ ಯಾವುದೇ ಭಯ ಇರುವುದಿಲ್ಲ. ವ್ಯಾಸಂಗ ಮಾಡಲು ಅವಕಾಶ ಒದಗಿಸಲಾಗುತ್ತಿದೆ ಎಂದು ಹೇಳಿದರು.

ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ಪ್ರಸ್ತುತ ಪಟ್ಟಣದಲ್ಲಿರುವ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಗೃಹ ವಿಜ್ಞಾನ ಕಾಲೇಜು ಉತ್ತಮ ಫ‌ಲಿತಾಂಶ ತರುತ್ತಿದ್ದು, ಈ ಕಾಲೇಜಲ್ಲಿ ಓದಲು ಹಲವು ವಿಷಯಗಳು ಇವೆ. ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಹೊಳೆನರಸೀಪುರ ಪಟ್ಟಣದಲ್ಲಿ ಇರುವ ಗುಣಮಟ್ಟದ ಕಾಲೇಜುಗಳಲ್ಲಿ ಸೇರ್ಪಡೆ ಹೊಂದಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಹಾಜರಿದ್ದ ತೋಟಗಾರಿಕೆ, ಕೃಷಿ ಇಲಾಖೆ, ಪಶು ಇಲಾಖೆ ಅಧಿಕಾರಿಗಳಿಗೆ ಸೂಚಿಸಿ, ಸರ್ಕಾರದಿಂದ ಬರುವ ಸೌಲಭ್ಯಗಳನ್ನು ವಿತರಣೆ ಮಾಡುವಲ್ಲಿ ತಾವುಗಳು ಯಾವುದೇ ಒತ್ತಡಗಳಿಗೆ ಒಳಗಾಗದೆ, ನೈಜ ಫಲಾನುಭವಿಗಳಿಗೆ ದೊರಕಬೇಕು. ಈ ವಿಚಾರದಲ್ಲಿ ತಮಗೆ ಯಾವುದೇ ದೂರು ಬಾರದಂತೆ ಕ್ರಮಕೈಗೊಳ್ಳಿ ಎಂದು ಹೇಳಿದರು.

ಪಟ್ಟಣದಲ್ಲಿನ ಬ್ಯಾಂಕುಗಳಲ್ಲಿ ಪಶು ಸಾಲದ ಪತ್ರಗಳು ಬಹಳಷ್ಟು ಸಿದ್ಧವಾಗಿದ್ದರೂ ಪಶು ವೈದ್ಯಕೀಯ ಇಲಾಖೆ ಸಹಕಾರ ನೀಡುತ್ತಿಲ್ಲ ಎಂಬ ಆರೋಪ ಇದೆ. ಫಲಾನುಭವಿಗಳಿಗೆ ಸಾಲದ ಪತ್ರ ನೀಡಲು ಅವಶ್ಯವಾದ ಸಹಕಾರ ನೀಡುವಂತೆ ಸೂಚಿಸಿದರು. ತಾಲೂಕಿನ ಗ್ರಾಮೀಣಪ್ರದೇಶಗಳಲ್ಲಿಅಕ್ರಮಮದ್ಯಮಾರಾಟ ನಡೆಯುತ್ತಿದ್ದು, ತಡೆಗಟ್ಟುವಲ್ಲಿ ಅಬಕಾರಿ ಇಲಾಖೆ ವಿಫ‌ಲವಾಗಿದೆ. ಗ್ರಾಮೀಣ ಜನತೆ ಮದ್ಯದ ಚಟಕ್ಕೆ ದಾಸರಾಗುತ್ತಿದ್ದಾರೆ. ಈ ಬಗ್ಗೆ ಅಬಕಾರಿ ಇಲಾಖೆ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಲು ಮುಂದಾಗಬೇಕೆಂದರು.

Advertisement

ಸಭೆಯಲ್ಲಿ ತಾಪಂ ಇಒ ಕೆ.ಯೋಗೇಶ್‌, ತೋಟಗಾರಿಕೆ ಇಲಾಖೆಯ ಅಧಿಕಾರಿ ಭವ್ಯಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸ್ವಪ್ನಾ, ಪಶುವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ, ಅಬಕಾರಿ ಇಲಾಖೆಯ ಇನ್ಸ್‌ಪೆಕ್ಟರ್‌ ಶಂಕರಪ್ಪ, ರೇಷ್ಮೆ ಅಧಿಕಾರಿ ನಟರಾಜ್‌, ಕಾರ್ಮಿಕಅಧಿಕಾರಿಮಂಗಳಗೌರಿ,ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next