Advertisement

ದೇಶಕ್ಕಾಗಿ ಹೋರಾಟ ಮಾಡಿರುವವರ ಬಗ್ಗೆ  ಗೌರವದಿಂದ ಮಾತನಾಡಬೇಕು : ಎಚ್ ಡಿ ಕೆ

02:25 PM Aug 16, 2021 | Team Udayavani |

ರಾಮನಗರ:  ಸಿ.ಟಿ.ರವಿ ಮತ್ತು ಪ್ರಿಯಾಂಕ ಖರ್ಗೆ ಹೇಳಿಕೆಯನ್ನು ಗಮನಿಸಿದ್ದೇನೆ ದೇಶಕ್ಕಾಗಿ ಹೋರಾಟ ಮಾಡಿರುವವರ ಬಗ್ಗೆ  ಗೌರವದಿಂದ ಮಾತನಾಡಬೇಕು ಎಂದು  ನೆಹರು ವಿಚಾರವಾಗಿ  ಹೇಳಿಕೆ ನೀಡಿದ ಸಿ.ಟಿ.ರವಿ ಹಾಗೂ ವಾಜಪೇಯಿ ಬಗ್ಗೆ ಹೇಳಿಕೆ ನೀಡಿದೆ ಪ್ರಿಯಾಂಕ ಖರ್ಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕೆ. ಟಾಂಗ್ ನೀಡಿದ್ದಾರೆ.

Advertisement

ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಅವರವರ ವೈಯಕ್ತಿಕ ವಿಚಾರಗಳೇ ಬೇರೆ, ನೆಹರು ಅವರು, ಇಂದಿರಾ ಗಾಂಧಿಯವರು, ವಾಜಪೇಯಿ ರವರ ಬಗ್ಗೆ ಲಘುವಾಗಿ ಮಾತನಾಡಬಾರದು. ನೆಹರುರವರು ಈ ದೇಶಕ್ಕೆ ಅವರದ್ದೆ ಆದ  ಕೊಡುಗೆ ಕೊಟ್ಟಿದ್ದಾರೆ. ನಮ್ಮ ದೇಶದ ಸ್ವಾತಂತ್ರ್ಯ ವಿಚಾರದಲ್ಲಿ ಅತಿಹೆಚ್ಚು ಜೈಲುವಾಸವನ್ನು ನೆಹರು ಅನುಭವಿಸಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ :  ಅಡಕೆ ಕೊಳೆಯಿಂದ ಬೇಸತ್ತ ಬೆಳೆಗಾರರು : ಹೊಸ ಸಂಶೋಧನೆಗಳಿಗೆ ತೀವ್ರ ಒತ್ತಾಯ

ಸ್ವಾತಂತ್ರ್ಯ ಬಂದ ನಂತರವೂ ಹಲವು ಸವಾಲುಗಳಿತ್ತು. ಪ್ರಧಾನಮಂತ್ರಿಯಾಗಿದ್ದ ವೇಳೆ ಹಲವು ಸವಾಲುಗಳನ್ನ ಎದುರಿಸಿದ್ದಾರೆ. ಪಾಕಿಸ್ತಾನದಿಂದ ಬಂದ ನಿರಾಶ್ರಿತರ ವಿಚಾರದಲ್ಲಿ ನೆಹರುರವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಕೃಷಿ ವಲಯ, ಕೈಗಾರಿಕಾ ವಲಯದಲ್ಲಿ ಅವರ ಕೊಡುಗೆ ದೊಡ್ಡದು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ದೇಶದ ನಾಯಕರ ಬಗ್ಗೆ ಲಘುವಾಗಿ ಮಾತನಾಡಬೇಡಿ. ಇದರಿಂದ ನಮ್ಮ ದೇಶಕ್ಕೆ ಅಪಮಾನ ಮಾಡಬೇಡಿ ಎಂದು ವಾಗ್ದಾಳಿ ಮಾಡಿದ್ದಾರೆ.

Advertisement

ಇದನ್ನೂ ಓದಿ :   ಕೊಟ್ಟ ಮಾತಿನಂತೆ ಪಿವಿ ಸಿಂಧು ಜೊತೆ ಐಸ್ ಕ್ರಿಮ್ ಸವಿದ ಪ್ರಧಾನಿ ಮೋದಿ

Advertisement

Udayavani is now on Telegram. Click here to join our channel and stay updated with the latest news.

Next