Advertisement

ಸೋಂಕಿತರು, ವೈದ್ಯರು ಮನೋಸ್ಥೈರ್ಯ ಕಳೆದುಕೊಳ್ಳದಂತೆ ಕುಮಾರಸ್ವಾಮಿ ಮನವಿ

07:53 PM Apr 30, 2021 | Team Udayavani |

ಬೆಂಗಳೂರು: ಕೋವಿಡ್‌ ಸೋಂಕಿತರು ಯಾವುದೇ ರೀತಿಯ ಭಯ ಭೀತಿಕ್ಕೆ ಒಳಗಾಗದೆ ಸಮರ್ಥವಾಗಿ ಎದುರಿಸುವ ಮೂಲಕ ಕೊರೊನಾ ವಿರುದ್ಧ ಗೆಲ್ಲುವ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳುವ ಮೂಲಕ ಸೋಂಕಿತರ ಆತ್ಮವಿಶ್ವಾಸ ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ.

Advertisement

ಕೋವಿಡ್‌ ಸೋಂಕಿನ ಅನಾಹುತದಿಂದ ಹಲವು ರೀತಿಯ ಭಯ, ಆತಂಕಕ್ಕೆ ಒಳಗಾಗಿರುವ ಸೋಂಕಿತರಲ್ಲಿ ನನ್ನದೊಂದು ಮನವಿ. ಯಾರೂ ಅಧೈರ್ಯಗೊಳ್ಳಬೇಡಿ. ನಾನು ಮಾತ್ರವಲ್ಲದೆ, ನಮ್ಮ ಕುಟುಂಬದಲ್ಲಿ ತಂದೆ, ತಾಯಿ, ಪುತ್ರನಿಗೂ ಕೋವಿಡ್‌ ಪಾಸಿಟಿವ್‌ ಕಾಣಿಸಿಕೊಂಡು ಗುಣಮುಖರಾಗಿ ಧೈರ್ಯವಾಗಿ ಹೊರಗೆ ಬಂದಿದ್ದೇವೆ. ಹಾಗಾಗಿ ಯಾರೂ ಹೆದರದೆ ಮಾಸಿಕವಾಗಿ ಎದುರಿಸುವ ಮೂಲಕ ಸೋಂಕಿನ ವಿರುದ್ಧ ಗೆಲುವು ಸಾಧಿಸುವ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆ ಭಾರೀ ಅನಾಹುತ ಸೃಷ್ಟಿಸಿದ್ದು, ದೊಡ್ಡ ಮಟ್ಟದಲ್ಲಿ ಸಾವು- ನೋವು ಸಂಭವಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಕೋವಿಡ್‌ ಸೋಂಕಿತರು ಹಾಗೂ ಸೋಂಕು ತಗುಲಿರುವ ಲಕ್ಷಣವಿರುವವರು ಮಾನಸಿಕವಾಗಿ ಧೈರ್ಯದಿಂದಿರುವ ಮನಸ್ಥಿತಿ ರೂಪಿಸಿಕೊಳ್ಳಬೇಕು. ಗಟ್ಟಿತನ ಬೆಳೆಸಿಕೊಳ್ಳಬೇಕು ಎಂದು ಕೋರಿದ್ದಾರೆ.

ಇದನ್ನೂ ಓದಿ :ಸಕ್ಕರೆ ನಾಡಿಗೆ ಕೊರೊನಾಘಾತ: 1348 ಮಂದಿಗೆ ಸೋಂಕು, 5 ಮಂದಿ ಸಾವು, 814 ಮಂದಿ ಗುಣಮುಖ

ಕೋವಿಡ್‌ ಹಾವಳಿ ತೀವ್ರವಾಗಿರುವ ಸಂದರ್ಭದಲ್ಲಿ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿನ ವೈದ್ಯಾಧಿಕಾರಿಗಳು, ನರ್ಸ್‌ಗಳು ಸೇರಿದಂತೆ ಇತರೆ ಸಿಬ್ಬಂದಿ ಜೀವದ ಹಂಗು ತೊರೆದು ಅತ್ಯಂತ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಿದ್ದರೂ ಕೆಲವೊಮ್ಮೆ ಅವರಿಗೂ ಇರುಸು- ಮುರುಸು ಉಂಟು ಮಾಡುವ ಪರಿಸ್ಥಿತಿಯನ್ನು ಗಮನಿಸಿದ್ದೇನೆ. ರಾಜ್ಯದ ಕೆಲ ಭಾಗಗಳಲ್ಲಿ ಕೆಲ ಜನಪ್ರತಿನಿಧಿಗಳು ವೈದ್ಯರು, ಸಿಬ್ಬಂದಿ ಮೇಲೆ ದಬ್ಟಾಳಿಕೆ, ದೌರ್ಜನ್ಯ ನಡೆಸುವುದು, ಅವರ ಪ್ರಾಮಾಣಿಕ ಸೇವೆಯಲ್ಲಿ ಹಲವು ಲೋಪಗಳನ್ನು ಎತ್ತಿ ಹಿಡೆಯುವ ಮೂಲಕ ವೈದ್ಯ ಸಮೂಹದಲ್ಲೂ ದೊಡ್ಡ ಮಟ್ಟದಲ್ಲಿ ಆತಂಕ ಮೂಡಿಸುವ ಘಟನೆಗಳು ಸಂಭವಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಖಾಸಗಿ- ಸರ್ಕಾರಿ ವೈದ್ಯರಿರಬಹುದು ಇಂತಹ ಸಂದರ್ಭದಲ್ಲಿ ಶೇ. 80, ಶೇ. 90ರಷ್ಟು ಮಂದಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವುದು ನನ್ನ ಗಮನದಲ್ಲಿದೆ. ಆದರೆ ಯಾರೋ ಕೆಲವರ ಸಣ್ಣಪುಟ್ಟ ಲೋಪಗಳಿಗೆ ಇಡೀ ವೈದ್ಯ ಸಮೂಹ, ಇಡೀ ಖಾಸಗಿ ಆಸ್ಪತ್ರೆಗಳನ್ನೇ ಹೊಣೆ ಮಾಡುವುದು ಸೂಕ್ತವಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವೆಲ್ಲಾ ಜೊತೆಗೂಡಿ ಕಾರ್ಯ ನಿರ್ವಹಿಸಬೇಕಿದೆ. ಕೊರೊನಾ ವಾರಿಯರ್ಗಳಾದ ಪೊಲೀಸ್‌, ಆರೋಗ್ಯ ಸೇರಿದಂತೆ ಸರ್ಕಾರದ ನಾನಾ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಕೋವಿಡ್‌ ಸೋಂಕಿತರಿಗೆ ನೆರವಾಗುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಮನೋಸ್ಥೈರ್ಯ ಕಳೆದುಕೊಳ್ಳದೆ ಧೈರ್ಯವಾಗಿ ಕೆಲಸ ಮುಂದುವರಿಸಬೇಕು. ಸೋಂಕಿತರ ರಕ್ಷಣೆಗಾಗಿ ಕೊರೊನಾ ವಾರಿಯರ್ಗಳೆಲ್ಲಾ ಒಟ್ಟಾಗಿ ಹೋರಾಟ ಮುಂದುವರಿಸುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next