Advertisement

H. D. Kumaraswamy ಆ ಮಹಾನುಭಾವರು 1980ರಲ್ಲೇ ಸಿ.ಡಿ. ಫ್ಯಾಕ್ಟರಿ ಓಪನ್‌ ಮಾಡಿದ್ದಾರೆ

11:51 PM May 22, 2024 | Team Udayavani |

ಮೈಸೂರು: ಆ ಮಹಾನುಭಾವರು 1980ರಲ್ಲೇ ಸಿಡಿ ಫ್ಯಾಕ್ಟರಿ ಓಪನ್‌ ಮಾಡಿದ್ದು, ಸಿಡಿ ಶಿವು ಆಗಿದ್ದಾರೆ. ಅವರೊಂದಿಗೆ ಯಾರ್ಯಾರು ಸೇರಿದ್ದಾರೆ ಎಂಬುದರ ಬಗ್ಗೆ ತನಿಖೆ ಆಗಬೇಕು ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಒತ್ತಾಯಿಸಿದರು.

Advertisement

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪೆನ್‌ಡ್ರೈವ್‌ ಹಂಚಿಕೆ ಪ್ರಕರಣದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌, ಚಾಲಕ ನವೀನ್‌ಗೌಡ ಸೇರಿ ಪ್ರಮುಖ ಪಾತ್ರಧಾರಿಗಳನ್ನು ಎಸ್‌ಐಟಿ ವಿಚಾರಣೆಗೊಳಪಡಿಸಬೇಕು. ನವೀನ್‌ ಗೌಡನನ್ನು ಎಸ್‌ಐಟಿ ಅಥವಾ ಡಿಕೆಶಿ ತಂಡ ರಕ್ಷಣೆ ಮಾಡುತ್ತಿದೆಯೇ ಎನ್ನುವುದನ್ನು ಮೊದಲು ಪತ್ತೆ ಮಾಡಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದರು.

ಅಧಿಕಾರ ಯಾರ ಅಪ್ಪನ ಆಸ್ತಿಯಲ್ಲ. ರಾಜಕೀಯದಲ್ಲಿ ಏಳು ಬೀಳು ಸಹಜ. ಅದು ಭಗವಂತನ ಇಚ್ಛೆ. ಇದರಲ್ಲಿ ಅಸೂಯೆ ಏಕೆ. ಪ್ರಧಾನಿ ಸ್ಥಾನವನ್ನೇ ಅತ್ಯಂತ ಸುಲಭವಾಗಿ ತೆರವು ಮಾಡಿದ ವಂಶ ನಮ್ಮದು. ಎಲ್ಲ ಅಧಿಕಾರವನ್ನು ನಾವು ನೋಡಿ ಆಗಿದೆ. ನಮಗೆ ಅಧಿಕಾರ ಬೇಡ ಅಂದರೂ ಬಂದಿದೆ. ನಾವು ಅಧಿಕಾರ ಹುಡುಕಿಕೊಂಡು ಹೋಗಿಲ್ಲ. ನಿಮಗೆ ಇದು ಗೊತ್ತಿರಲಿ ಎಂದು ಡಿಕೆ ಶಿಗೆ ತಿರುಗೇಟು ನೀಡಿದರು.

ಫೋನ್‌ ಟ್ಯಾಪ್‌ ಮಾಡೋಕೆ ಅವರೇನು ಭಯೋತ್ಪಾದಕರಾ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಬಳಿ ಇರೋರೆಲ್ಲ ಭಯೋ ತ್ಪಾದಕರು. ಅವರ ಸುತ್ತ ಟೆರರಿಸ್ಟ್‌ಗಳು ಇದ್ದಾರೆ. ಪೆನ್‌ಡ್ರೈವ್‌ ಪ್ರಕರಣ ಸರಕಾರದ ಬುಡಕ್ಕೆ ಬರುತ್ತಿರುವುದರಿಂದ ಮುಖ್ಯ ಮಂತ್ರಿಗಳು ಪೆನ್‌ಡ್ರೈವ್‌ ಪ್ರಕರಣದ ಬಗ್ಗೆ ಯಾರೂ ಮಾತಾಡಬೇಡಿ ಎಂದಿದ್ದಾರೆ ಎಂದು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next