Advertisement
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾವೇನು ರಾಮನ ಭಕ್ತರಲ್ವಾ, ಏನು ಇವರೊಬ್ಬರೇ ಗುತ್ತಿಗೆ ಪಡೆದಿದ್ದಾರಾ. ರಾಮ ಈ ರೀತಿ ಕೆಲಸ ಮಾಡಿ ಅಂತಾ ಹೇಳಿದ್ದನೆ? ಪ್ರಚೋದನಕಾರಿ ಹೇಳಿಕೆ ಕೊಡುವವರನ್ನು ಮೊದಲು ಜೈಲಿಗೆ ಹಾಕಬೇಕು. ಆಗ ಸಮಾಜ ನೆಮ್ಮದಿಯಿಂದ ಇರುತ್ತದೆ ಎಂದರು.
Related Articles
Advertisement
ರಾಜ್ಯದಲ್ಲಿ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬಿಜೆಪಿಯವರು ಬೆಂಕಿ ಹಚ್ಚುತ್ತಿದ್ದಾರೆ. ಕಾಂಗ್ರೆಸ್ ನವರು ಅದಕ್ಕೆ ಪೆಟ್ರೋಲ್ ಸುರಿಯುತ್ತಿದ್ದಾರೆ. ಇದಕ್ಕೆ ನಾಡಿನ ಜನತೆ ಅವಕಾಶ ಕೊಡದೇ ಎಚ್ಚೆತ್ತುಕೊಳ್ಳಬೇಕು. ಈ ವಿಷಯದಲ್ಲಿ ಏನು ಸತ್ಯಾಂಶವನ್ನು ಸರಕಾರ ಪ್ರಾಮಾಣಿಕವಾಗಿ ಜನತೆ ಮುಂದೆ ಇಡಬೇಕು ಎಂದರು.
ರಾಜ್ಯದಲ್ಲಿ ಪ್ರತಿನಿತ್ಯ ಕಾಣದ ಕೈಗಳ ಚಿತಾವಣೆ ನಡೆದುಕೊಂಡು ಹೋದರೆ ಮುಂದೆ ನಮ್ಮ ರಾಜ್ಯದ ಗತಿ ಏನು? ಡಿ.ಜೆ.ಹಳ್ಳಿ ಪ್ರಕರಣಕ್ಕೆ ಯಾರು ಕಾರಣಕರ್ತರು. ಪ್ರಮುಖವಾದ ವ್ಯಕ್ತಿಗಳಿಗೆ ಅಂತಿಮವಾದ ಶಿಕ್ಷೆ ಏನಾದರೂ ಕೊಟ್ಟಿದ್ದೀರಾ. ಆರಾಮವಾಗಿ ಓಡಾಡಿಕೊಂಡು, ಒಂದು ಪಕ್ಷದ ಅಧ್ಯಕ್ಷರ ಜೊತೆ ಓಡಾಡಿಕೊಂಡಿದ್ದಾರೆ. ಅಮಾಯಕರನ್ನು ತೆಗೆದುಕೊಂಡು ಹೋಗಿ ಜೈಲಿಗೆ ಹಾಕಿದ್ದಾರೆ. ಘಟನೆಯಲ್ಲಿ ಸರಕಾರದ ವೈಫಲ್ಯವಿದೆ. ಹಿಜಾಬ್ ಘಟನೆ ಆರಂಭವಾದ ದಿನದಿಂದ ಇಂದಿನವರೆಗೆ ಸರಕಾರದಲ್ಲೂ ಕಾಣದ ಕೈ ಆದೇಶದ ಮೇರೆಗೆ ಕೆಲಸ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.
ಪರ್ಸಂಟೆಜ್ ಕುರಿತು ಕೇಜ್ರಿವಾಲ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆ ವೇದಿಕೆಯಲ್ಲಿ ಕ್ರೇಜಿವಾಲ್ ಅಕ್ಕಪಕ್ಕ ನಿಲ್ಲಿಸಿಕೊಂಡಿದ್ದವರನ್ನುಕಟ್ಟಿಕೊಂಡು ರಾಜ್ಯದಲ್ಲಿ ಜೀರೋ ಪರ್ಸಂಟ್ ಸರಕಾರ ತರಲು ಸಾಧ್ಯವೇ? ರಾಜ್ಯದಲ್ಲಿ ಆಮ್ ಆದ್ಮಿ ಬಂದು ಏನು ಮಾಡುತ್ತದೆ. ಹಲವು ಕೆಲಸ ಕೊಟ್ಟ ನಮ್ಮ ಕೈಯಲ್ಲಿ ಏನು ಮಾಡಲಾಗಲಿಲ್ಲ. ಇನ್ನು ದೆಹಲಿಯಿಂದ ಬಂದು ಏನು ಮಾಡಲಾಗುತ್ತದೆ. ದೆಹಲಿಯ ರಾಜಕೀಯವೆ ಬೇರೆ, ರಾಜ್ಯದ ರಾಜಕೀಯವೆ ಬೇರೆ ಎಂದರು.
ಈ ಸರಕಾರ ಬಂದ ಮೇಲೆ 100 ಕ್ಕೆ 65 ರೂಪಾಯಿ ಮಧ್ಯವರ್ತಿಗಳಿಗೆ ಹೋಗ್ತಿದೆ. ಕೇವಲ 40 ಪರ್ಸೆಂಟ್ ಅಲ್ಲ 65 ಪರ್ಸೆಂಟ್ ಹೋಗುತ್ತೆ. 35 ಪರ್ಸೆಂಟ್ ಕೆಲಸ ಅಗಬಹುದು. ಇದು ಎಲ್ಲವನಿಗೂ ಗೊತ್ತಿರುವ ವಿಷಯ. ಗುತ್ತಿಗೆದಾರರು ಒಂದು ವರ್ಷ ಕೆಲಸ ನಿಲ್ಲಿಸಿದರೆ ಸರಿ ಹೋಗುತ್ತದೆ ಎಂದರು.