Advertisement

ದೇವೇಗೌಡ್ರು ಏನೂಂತ ಗೊತ್ತಾ.. ಪಿಎಂ ಆಗಿದ್ದಾಗ ಗುಜರಾತ್ ಸರ್ಕಾರವನ್ನೇ ವಜಾ ಮಾಡಿದ್ದೆ!

04:24 PM Jan 04, 2021 | Team Udayavani |

ಚಿಕ್ಕಮಗಳೂರು: ದೇವೇಗೌಡ್ರು ಅಂದರೆ ಏನು ಎಂದು ಗೊತ್ತಿದೆಯಾ? ನಾನು ಪ್ರಧಾನ ಮಂತ್ರಿಯಾಗಿದ್ದಾಗ ಗುಜರಾತ್ ಸರ್ಕಾರವನ್ನೇ ವಜಾ ಮಾಡಿದ್ದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದರು.

Advertisement

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೀರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಜೊತೆ ಯಾವುದೇ ಹೊಂದಾಣಿಕೆ ಇಲ್ಲ, ಮುಂದೆಯೂ ಹೊಂದಾಣಿಕೆ ಇರಲ್ಲ ಎಂಬ ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದರು.

ಇದನ್ನೂ ಓದಿ:ಯಾವದೇ ಪಕ್ಷದೊಂದಿಗೆ ವಿಲೀನವಿಲ್ಲ, 2023ರಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ: ಎಚ್ ಡಿಕೆ

ಇತ್ತೀಚಿಗೆ ನಿಧನರಾದ ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಶ್ರದ್ಧಾಂಜಲಿ ಸಭೆಯಲ್ಲಿ ಭಾಗಿಯಾಗಲು ದೇವೇಗೌಡರು ಬೀರೂರಿಗೆ ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next