Advertisement
ನಗರದ ಸಕ್ರ್ಯೂಟ್ ಹೌಸ್‍ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದೂ ದೇವಾಲಯಗಳಲ್ಲಿ ಪ್ರತಿದಿನ ಸುಪ್ರಬಾತ ಹಾಕಲಾಗುತ್ತದೆ. ಮಸೀದಿಗಳಲ್ಲಿ ಆಜಾನ್ ಕೂಗಲಾಗುತ್ತದೆ. ಆದ್ರೆ ಈಗ ಗಲಾಟೆ ಆಗುತ್ತಿದೆ ಅಂದ್ರೆ ಯಾಕೆ? ನಾನು ಇದಕ್ಕೆ ಹೆಚ್ಚಿನ ಮಹತ್ವ ಕೊಡುವುದಿಲ್ಲ. ರಾಜಕೀಯವಾಗಿ ಬಳಸಿಕೊಳ್ಳಲು ಇಂತಹ ವಾತಾವರಣ ಸೃಷ್ಟಿಸಿ, ಜನರನ್ನು ವಿಭಜಿಸುವ ಹುನ್ನಾರಕ್ಕೆ ರಾಷ್ಟ್ರೀಯ ಪಕ್ಷಗಳು ಕೈ ಹಾಕಿದಂತಾಗಿದೆ. ದೇಶದಲ್ಲಿ ಶಾಂತಿ ಇರಬೇಕಾದರೆ, ರಾಷ್ಟ್ರೀಯ ಪಕ್ಷಗಳ ಜವಾಬ್ದಾರಿ ಮುಖ್ಯವಾಗುತ್ತದೆ. ಆದರೆ, ಅವರು ತಮ್ಮ ಶಕ್ತಿ ಬಲಪಡಿಸಿಕೊಳ್ಳಲು ಪ್ರಯತ್ನಿಸಿದ್ರೆ, ಮುಂದಿನ ಪರಿಣಾಮ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
Related Articles
Advertisement
ಹಿಡಿಯಲು ಆಗಲ್ಲ:
ಪಕ್ಷಾಂತರ ಪರ್ವದ ವಿಚಾರದ ಬಗ್ಗೆ ಕೇಳಿದಾಗ, ಹೋಗುವಂಥವವರನ್ನು ಹಿಡಿದುಕೊಳ್ಳಲು ಆಗಲ್ಲ. ಜೆಟಿಡಿ ಹೋಗ್ತಾರೆ ಅಂದ್ರು. ಅವರು ಹೋದ್ರಾ? ಜೆಡಿಎಸ್‍ನಲ್ಲೇ ಇದ್ದಾರೆ ಎಂದರು.
ಪಿಎಸ್‍ಐ ನೇಮಕಾತಿ ಹಗರಣದ ಬಗ್ಗೆ ಕೇಳಿದಾಗ ಆ ಬಗ್ಗೆ ಗೊತ್ತಿಲ್ಲ. ಹೀಗಾಗಿ, ಮಾತನಾಡಲು ಹೋಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ಜೆಡಿಎಸ್ ಶಾಸಕರಾದ ವೆಂಕಟರಾವ್ ನಾಡಗೌಡ, ರಾಜಾ ವೆಂಕಟಪ್ಪ ನಾಯಕ ಸೇರಿದಂತೆ ಜೆಡಿಎಸ್ ಮುಖಂಡರು ಇದ್ದರು.