Advertisement

ಸಮಾನತೆಯ ಸಂದೇಶಗಳು ಭಾಷಣಕ್ಕೆ ಸೀಮಿತವಾಗಬಾರದು: ಮಾಜಿ ಶಾಸಕ ಎಚ್.ಸಿ.ಬಸವರಾಜು

10:16 PM May 03, 2022 | Team Udayavani |

ಪಿರಿಯಾಪಟ್ಟಣ : ಸಮಾನತೆಯ ಸಂದೇಶಗಳು ಕೇವಲ ಭಾಷಣಕ್ಕೆ ಸೀಮಿತವಾಗದೆ ಜೀವನದಲ್ಲಿ ಅಳವಡಿಕೆಯಾಗಬೇಕು ವಿದ್ಯಾವಂತರಲ್ಲೆ ಜಾತಿಯತೆ ಹೆಚ್ಚಾಗುತ್ತಿರುವುದು ವಿಷಾದನೀಯ ಎಂದು ಮಾಜಿ ಶಾಸಕ ಎಚ್.ಸಿ.ಬಸವರಾಜು ತಿಳಿಸಿದರು.

Advertisement

ಪಟ್ಟಣದ ತಾಲೂಕು ಆಡಳಿತದ ಭವನದಲ್ಲಿ ನಡೆದ ಬಸವಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲಾ ಪ್ರಾಣಿಗಳಿಗಿಂತ ಮನುಷ್ಯನಿಗೆ ದೇವರು ವಿಶೇಷವಾದ ವಿವೇಚನಾ ಶಕ್ತಿಯನ್ನು ಕೊಟ್ಟಿದ್ಧಾನೆ. ಆದರೆ ಮನುಷ್ಯಮಾತ್ರ ಪ್ರಾಣಿಗಳಿಗಿಂತ ಕೀಳಾಗಿ ವರ್ತಿಸುತ್ತಿದ್ದಾನೆ. ವಿದ್ಯಾರ್ಥಿ ಜೀವನದಿಂದಲು ಸಮಾನತೆಯ ಬಗ್ಗೆ ಕೇಳುತ್ತಲೆ ಬಂದಿದ್ದೇನೆ ಆದರೆ ಸಮಾಜದಲ್ಲಿ ಇದು ನಡವಳಿಕೆಯಾಗಿ ಆಚರಿಸುತ್ತಿಲ್ಲ. ಸುಶಿಕ್ಷಿತರು ವಿದ್ಯಾವಂತರೇ ಜಾತಿಯತೆ ಮಾಡುತ್ತಿದ್ದಾರೆ. ರಾಜಕಾರಣಿಗಳೀಗೆ ಇದೇ ಮಾನದಂಡವಾಗುತ್ತಿದೆ ಇಂತಹ ಸಂದರ್ಭದಲ್ಲಿ ಬಸವಣ್ಣನವರ ತತ್ವ ಅದರ್ಶಗಳು ಅನುಕರಣೀಯವಾದವು, ಜಾತಿಯತೆ ದೂರವಾಗಿ ಎಲ್ಲರೂ ಮನಷ್ಯರು ಎಂಬ ಮನೋಭಾವನೆ ಪ್ರತಿಯೊಬ್ಬರಲ್ಲಿಯೂ ಮೂಡಬೇಕು ಎಂದು ತಿಳಿಸಿದರು.

ಮುಖ್ಯಭಾಷಣ ಮಾಡಿದ ಬಿಇಒ ಎಚ್.ಕೆ.ತಿಮ್ಮೇಗೌಡ ಮಾತನಾಡಿ ಸರಳವಾದ ಕನ್ನಡದ ಮೂಲಕ ತತ್ವಗಳನ್ನು ತಿಳಿಸಿಕೊಟ್ಟ ವಚನಕಾರ ಬಸವಣ್ಣ, 12ನೇ ಶತಮಾನದಲ್ಲಿ ಸಮಾನತೆಯ ತತ್ವಸಾರಿ, ಸಮಾಜದ ಮೂಡನಂಬಿಕೆಗಳ ವಿರುದ್ಧ ಜನರಲ್ಲಿಜಾಗೃತಿ ಮೂಡಿಸಿದರು. ಇವರ ವಚನಗಳನ್ನು ಬಾಳಿನಲ್ಲಿ ಅನುಸರಿಸಿದಾಗ ಮಾತ್ರ ನಾವು ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಮೈಮೂಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿ ಬಸವಣ್ಣನವರ ಕಾಯಕತತ್ವಗಳು ಇಂದು ಭಾರತವನ್ನು ಮುನ್ನಡೆಸುವ ಶಕ್ತಿಯಾಗಿದೆ. ದೇಶಧ ಯುವಕರು ಬಸವಣ್ಣನವರ ತತ್ವಾದರ್ಶಗಳನ್ನು ಪಾಲಿಸಬೇಕು ಈ ಆಧಾರದ ಮೇಲೆ ಅಂಬೇಢ್ಕರ್ಸಂವಿಧಾನ ರಚಿಸಿದ್ದಾರೆ, ಮೋದಿಯವರು ಬಸವತತ್ವಗಳ ಮೇಲೆ ನಂಬಿಕೆ ಇರಿಸಿದ್ಧಾರೆ. ಸರಳ ಜೀವನ ಉದಾತ್ತ ಧೇಯ ನಮ್ಮ ಬದುಕಿನ ಆದರ್ಶವಾಗಬೇಕು ಎಂದು ತಿಳಿಸಿದರು.

ಬೆಟ್ಟದಪುರ ಮತ್ತು ಕನ್ನಡ ಮಠದ ಚನ್ನಬಸವದೇಶಿಕೇಂದ್ರ ಸ್ವಾಮೀಜಿ ಮಾತನಾಡಿ ಬಸವಣ್ಣ ಕನ್ನಡದಲ್ಲಿ ತಮ್ಮ ತತ್ವ ಆದರ್ಶಗಳನ್ನು ವಚನಗಳ ಮೂಲಕ ಜಗತ್ತಿಗೆ ಸಾರಿಸಿದರು. ಇದೇ ನಿಟ್ಟಿನಲ್ಲಿ ಇಂದಿಗೂ ಕೊಡಗಿನ ಕನ್ನಡ ಮಠ ಆವರ ಆದರ್ಶಗಳನ್ನು ಪಾಲಿಸುತ್ತಿದೆ. ಬಸವಾದಿ ಶರಣರ ಜೀವನವೇ ನಮಗೆ ಒಂದು ಆದರ್ಶಪ್ರಯಾವಾದುದ್ದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಕೆ.ಎಂ.ಚಂದ್ರಮೌಳಿ, ವೀರಶೈವ ಮಹಾಸಭಾದ ಅಧ್ಯಕ್ಷ ಕೆ.ಪಿ.ಚಂದ್ರಶೇಖರ್ ಮಾತನಾಡಿದರು.

Advertisement

ಕಾರ್ಯಕ್ರಮದಲ್ಲಿ ಮೈಮೂಲ್ನಿರ್ದೇಶಕ ಎಚ್.ಡಿ.ರಾಜೇಂದ್ರ, ಇಒ ಸಿ.ಆರ್.ಕೃಷ್ಣಕುಮಾರ್, ಪುರಸಭೆ ಅಧ್ಯಕ್ಷ ಕೆ.ಮಹೇಶ್, ಉಪತಹಸೀಲ್ದಾರ್ ಟ್ರೀಜಾ, ಪುರಸಭಾ ಸದಸ್ಯರಾದ ಮಂಜುನಾಥ್, ನಿರಂಜನ್, ಪಿಎಲ್ಡಿಬ್ಯಾಂಕ ಮಾಜಿ ಅಧ್ಯಕ್ಷ ಪರಮೇಶ್, ಕಸಾಪ ಅಧ್ಯಕ್ಷ ನವೀನ್ಕುಮಾರ್, ಯುವವೇದಿಕೆ ಅಧ್ಯಕ್ಷ ಮಂಜು, ನಿರ್ದೇಶಕ ಆನಂದ್, ಶಿಕ್ಷಕ ಕಾಂತರಾಜು, ಮುಖಂಡಾದ ವಿದ್ಯಾಶಂಕರ್, ಪೆಪ್ಸಿಕುಮಾರ್, ಶಿವಕುಮಾರಸ್ವಾಮಿ, ಕೆ.ಎಲ್. ಸುರೇಶ್,ಕೆಂಪಣ್ಣ, ಉಲ್ಲಾಸ್, ವಿಜೇತಕುಮಾರ್, ಸೇರಿದಂತೆ ಮತ್ತತಿರರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next