Advertisement

ಎಚ್‌1-ಬಿ ವೀಸಾ ಶುಲ್ಕ ದುಪ್ಪಟ್ಟು? ಭಾರತೀಯ ಐಟಿ ವೃತ್ತಿಪರರಿಗೆ ಕಹಿಸುದ್ದಿ

07:19 PM Jan 05, 2023 | Team Udayavani |

ವಾಷಿಂಗ್ಟನ್‌: ಭಾರತೀಯ ಟೆಕ್‌ ವೃತ್ತಿಪರರಿಗೆ ಅಮೆರಿಕದ ಜೋ ಬೈಡೆನ್‌ ಸರ್ಕಾರ ಕಹಿಸುದ್ದಿ ನೀಡಿದೆ. ಭಾರತೀಯರಿಂದ ಅತಿ ಹೆಚ್ಚು ಬೇಡಿಕೆಯಿರುವಂಥ ಎಚ್‌-1ಬಿ ವೀಸಾ ಸೇರಿದಂತೆ ಹಲವು ವೀಸಾಗಳಿಗೆ ಹೇರಲಾಗುವ ವಲಸೆ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲು ಬೈಡೆನ್‌ ಆಡಳಿತ ಮುಂದಾಗಿದೆ.

Advertisement

ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳು ಪ್ರಕಟಿಸಿರುವಂಥ ಪ್ರಸ್ತಾವಿತ ನಿಯಮದ ಪ್ರಕಾರ, ಎಚ್‌-1ಬಿ ವೀಸಾ ಅರ್ಜಿಗೆ 37,933 ರೂ.(460 ಡಾಲರ್‌) ಆಗಿರುವ ಶುಲ್ಕವು ಸದ್ಯದಲ್ಲೇ 64,322 ರೂ. (780 ಡಾಲರ್‌)ಗೆ ಏರಿಕೆಯಾಗಲಿದೆ.

ಅದೇ ರೀತಿ, ಎಲ್‌-1 ವೀಸಾ ಅರ್ಜಿಗೆ ಈಗಿರುವ 37,933 ರೂ.(460 ಡಾಲರ್‌)ನಿಂದ 1.14 ಲಕ್ಷ ರೂ. (1,385 ಡಾಲರ್‌)ಗೆ, ಒ-1 ವೀಸಾಗಳಿಗೆ 37,933 ರೂ.(460 ಡಾಲರ್‌)ನಿಂದ 87,000 ರೂ.(1,055 ಡಾಲರ್‌)ಗೆ ಶುಲ್ಕ ಹೆಚ್ಚಳವಾಗಲಿದೆ.

ಕೌಶಲ್ಯಯುತ ಹಾಗೂ ತಾಂತ್ರಿಕ ಪರಿಣತಿಯ ಕೆಲಸಗಳಿಗೆ ವಿದೇಶಿ ನೌಕರರನ್ನು ನೇಮಕ ಮಾಡಿಕೊಳ್ಳಲು ಅಮೆರಿಕದ ಕಂಪನಿಗಳು ಎಚ್‌-1ಬಿ ವೀಸಾವನ್ನು ಬಳಸಿಕೊಳ್ಳುತ್ತವೆ.

ಅಮೆರಿಕದ ತಂತ್ರಜ್ಞಾನ ಕಂಪನಿಗಳು ಪ್ರತಿ ವರ್ಷ ಭಾರತ ಮತ್ತು ಚೀನದಿಂದ ಸಾವಿರಾರು ಉದ್ಯೋಗಿಗಳನ್ನು ಇದೇ ವೀಸಾ ಮೂಲಕ ನೇಮಕ ಮಾಡಿಕೊಳ್ಳುತ್ತವೆ.

Advertisement

ಸರ್ಕಾರವು ಇಂಥ ವೀಸಾಗಳ ಶುಲ್ಕವನ್ನು ಹೆಚ್ಚಳ ಮಾಡುವುದರಿಂದ ಅಮೆರಿಕಕ್ಕೆ ಕಾನೂನಾತ್ಮಕವಾಗಿ ಹೆಚ್ಚು ಹೆಚ್ಚು ಉದ್ಯೋಗಿಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕೆಂಬ ಅಲ್ಲಿನ ನೀತಿನಿರೂಪಕರ ಆಕಾಂಕ್ಷೆಗೆ ಅಡ್ಡಿಯಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next