ಬೆಂಗಳೂರು: ಅಪರಾಧ ಪತ್ತೆ, ಕಾನೂನು ಸುವ್ಯವಸ್ಥೆಪಾಲನೆ, ಬಂದೋಬಸ್ತ್, ಆರೋಪಿಗಳ ಹುಡುಕಾಟ,ಸಾರ್ವಜನಿಕರ ರಕ್ಷಣೆ ಹೀಗೆ ಒಂದಿಲ್ಲೊಂದು ಕೆಲಸದಲ್ಲಿ ಸದಾ ಕಾರ್ಯದೊತ್ತಡದಲ್ಲಿರುವ ಪೊಲೀಸರು,ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವರ ದೇಹದಾಡ್ಯìತೆ ಬಗ್ಗೆಇಲಾಖೆ ಗಮನಹರಿಸಿದೆ.
ಚೆನ್ನಮ್ಮನಕೆರೆಅಚ್ಚುಕಟ್ಟು ಠಾಣೆಅಧಿಕಾರಿ-ಸಿಬ್ಬಂದಿತಮ್ಮಕೆಲಸದೊತ್ತಡದ ನಡುವೆಯೂಪ್ರತಿನಿತ್ಯಒಂದುಗಂಟೆಗಳಕಾಲ ತಮ್ಮ ದೇಹದ ಫಿಟ್‌ನೆಸ್ ಬಗ್ಗೆಕಾಳಜಿವಹಿಸುತ್ತಿದ್ದಾರೆ. ನುರಿತ ರಾಷ್ಟ್ರೀಯ,ಅಂತಾರಾಷ್ಟ್ರೀಯದೇಹದಾಡ್ಯì ತರಬೇತುದಾರರಿಂದ ತರಬೇತಿ ಪಡೆಯುತ್ತಿದ್ದಾರೆ. ಈ ಮೂಲಕ ಕರ್ತವ್ಯ ಪಾಲನೆ ಜತೆಗೆಆರೋಗ್ಯದ ಬಗ್ಗೆಯೂ ಎಚ್ಚರಿಕೆ ವಹಿಸಿದ್ದಾರೆ.
ಅದಕ್ಕೆಲ್ಲ ಕಾರಣವಾಗಿದ್ದು ಠಾಣೆಯ ಇನ್‌ಸ್ಪೆಕ್ಟರ್‌ಪಿ.ಆರ್.ಜನಾರ್ಧನ್. ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಜನಾರ್ಧನ್, ಗರಡಿ ಮನೆಯಲ್ಲಿಪಳಗಿದ್ದು, ರಾಜ್ಯ ಮಟ್ಟದ ಯೋಗಪಟು. ಜತೆಗೆ ಸೈಕಲಿಂಗ್, ಈಜುಪಟು ಕೂಡ. ಎರಡನೇ ಬಾರಿಯಲಾಕ್‌ಡೌನ್ ಸಂದರ್ಭದಲ್ಲಿ ಕರ್ತವ್ಯಮುಗಿಸಿ ಠಾಣೆಗೆಬರುತ್ತಿದ್ದ ಕಿರಿಯ ಅಧಿಕಾರಿ-ಸಿಬ್ಬಂದಿಗೆ ಜನಾರ್ಧನ್‌ಅವರೇ, 15 ನಿಮಿಷಗಳ ಕಾಲ ವ್ಯಾಯಾಮ ಮಾಡಿಸುತ್ತಿದ್ದರು.ಅದನ್ನು ಗಮನಿಸಿದ ರಾಷ್ಟ್ರೀಯ ದೇಹದಾಡ್ಯìತರಬೇತುದಾರ ಆರ್ಯನ್ ಎಂಬವರು ಖುದ್ದುಠಾಣಾಧಿಕಾರಿ ಜನಾರ್ಧನ್ ಅವರನ್ನು ಭೇಟಿಯಾಗಿಪ್ರತಿನಿತ್ಯ ತಾವೇ ತರಬೇತಿ ಕೊಡುವುದಾಗಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಿತ್ಯ ರಾತ್ರಿ 8.30ರಿಂದ9.30ರವರೆಗೆ ಒಂದು ಗಂಟೆಗಳ ಠಾಣೆಯ ಎಲ್ಲ ಅಧಿಕಾರಿ-ಸಿಬ್ಬಂದಿಗೆಠಾಣೆ ಮುಂಭಾಗವೇ ದೇಹದಾಡ್ಯì ತರಬೇತಿ ಕೊಡಲಾಗುತ್ತಿದೆ.
ಮೋಹನ್ ಭದ್ರಾವತಿ