Advertisement
ಮಸೀದಿ ಒಳಗಡೆ ಶಿವಲಿಂಗ ಪತ್ತೆಯಾಗಿದೆ ಎಂಬ ವಕೀಲರ ಹೇಳಿಕೆ ದೇಶಾದ್ಯತ ಸಂಚಲನಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಮಸೀದಿಯ ಆಡಳಿತ ಮಂಡಳಿ, ಹಿಂದೂ ಅರ್ಜಿದಾರರ ಪರ ವಕೀಲರ ವಾದವನ್ನು ತಳ್ಳಿಹಾಕಿದ್ದಾರೆ. ಕೊಳದಲ್ಲಿ ಶಿವಲಿಂಗ ಪತ್ತೆಯಾಗಿಲ್ಲ. ಅಲ್ಲಿರುವುದು ಫೌಂಟನ್. ಇದನ್ನೇ ಅವರು ಶಿವಲಿಂಗ ಎಂದು ಅಂದುಕೊಂಡಿದ್ದಾರೆ ಎಂದಿದ್ದಾರೆ. ಹಾಗೆಯೇ, ಕೊಳಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ್ದನ್ನು ವಿರೋಧಿಸಿದ್ದಾರೆ.
Related Articles
Advertisement
ವಿವಾದದ ಸ್ಥಳ ಯಾವುದು?
ಕಾಶಿ ವಿಶ್ವನಾಥ ದೇಗುಲದ ಬಳಿಯಲ್ಲೇ ಈ ಜ್ಞಾನವಾಪಿ ಮಸೀದಿ-ಶೃಂಗಾರ ಗೌರಿ ಸಂಕೀರ್ಣ ಇದೆ. ಮಸೀದಿ ಹಿಂಭಾಗದಲ್ಲಿ ಹಿಂದೂ ದೇವತೆಗಳಿವೆ, ಇಲ್ಲಿ ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂಬುದು ಐವರು ಮಹಿಳೆಯರ ಗುಂಪೊಂದರ ವಾದ. ಅಲ್ಲದೆ, ಕಾಣಿಸುವ ಅಥವಾ ಕಾಣಿಸದೇ ಇರುವ ಮೂರ್ತಿಗಳೂ ಇರಬೇಕು ಎಂದು ಅವರು ಅನುಮಾನಿಸಿದ್ದರು. ಇವರು ವರ್ಷಕ್ಕೂ ಹಿಂದೆಯೇ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಮಸೀದಿಯೊಳಗೆ ವಿಡಿಯೋಗ್ರಫಿ ಮಾಡಬೇಕು ಎಂದು ಮನವಿ ಮಾಡಿದ್ದರು.