ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಜ್ಞಾನವಾಪಿ ಮಸೀದಿ- ಶೃಂಗಾರ ಗೌರಿ ಪ್ರಕರಣ ವಿಚಾರಣೆ ನಡೆಸುತ್ತಿರುವ ಸ್ಥಳೀಯ ಕೋರ್ಟ್ ತೀರ್ಪನ್ನು ಸೆ.12ರ ವರೆಗೆ ಕಾಯ್ದಿರಿಸಿದೆ.
ಹಿಂದೂ ಮತ್ತು ಮುಸ್ಲಿಂ ಸಮುದಾಯದ ಮುಖಂಡರನ್ನು ಪ್ರತಿನಿಧಿಸುವ ವಕೀಲರು ಬುಧವಾರ ತಮ್ಮ ಅಂತಿಮ ಹಂತದ ವಾದ ಮಂಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಹಿಂದೂ ಅರ್ಜಿದಾರರ ಪರ ವಕೀಲ ಮದನ್ ಮೋಹನ್ ಯಾದವ್ ಎರಡೂ ಪಕ್ಷಗಳ ವಾದವನ್ನು ನ್ಯಾಯಾಧೀಶ ಎ.ಕೆ. ಯಾದವ್ ಆಲಿಸಿದ್ದಾರೆ ಮತ್ತು ಸೆ.12ರ ವರೆಗೆ ತೀರ್ಪು ಕಾಯ್ದಿರಿಸಿದ್ದಾರೆ ಎಂದರು.
ಮುಸ್ಲಿಂ ಸಮುದಾಯದ ಪರ ವಕೀಲ ಶಮೀಮ್ ಅಹ್ಮದ್ ಮಾತನಾಡಿ ಮಸೀದಿ ವಕ್ಫ್ ಮಂಡಳಿಗೆ ಸೇರಿದ ಆಸ್ತಿ. ಕೋರ್ಟ್‌ಗೆ ಈ ಬಗ್ಗೆ ವಿಚಾರಣೆ ನಡೆಸುವ ಹಕ್ಕು ಇಲ್ಲವೆಂದರು.
ಮಸೀದಿಯಲ್ಲಿ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕು ಎಂದು ಐವರು ಮಹಿಳೆಯರು ಸ್ಥಳೀಯ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಅರಿಕೆ ಮಾಡಿಕೊಂಡಿದ್ದರು.