Advertisement

ಜ್ಞಾನವಾಪಿಯಲ್ಲಿ “ವಝೂ’ಸೌಲಭ್ಯ ಕಲ್ಪಿಸಿ: Supreme Court

08:59 PM Apr 17, 2023 | Team Udayavani |

ನವದೆಹಲಿ:ವಿವಾದಿತ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಮುಸ್ಲಿಮರಿಗೆ ವಝೂ(ಶುದ್ಧೀಕರಣ ಪ್ರಕ್ರಿಯೆ) ನಿರ್ವಹಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವ ಕುರಿತು ಸಭೆ ನಡೆಸುವಂತೆ ವಾರಾಣಸಿ ಜಿಲ್ಲಾಧಿಕಾರಿಗೆ ಸುಪ್ರೀಂ ಕೋರ್ಟ್‌ ಸೋಮವಾರ ನಿರ್ದೇಶನ ನೀಡಿದೆ.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಉತ್ತರಪ್ರದೇಶ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, “ಮಂಗಳವಾರವೇ ಸಭೆ ನಡೆಸಲಾಗುವುದು ಮತ್ತು ವಝೂಗೆ ಅವಕಾಶ ಕಲ್ಪಿಸುವ ನಿರ್ಧಾರವನ್ನು ಅನುಷ್ಠಾನ ಮಾಡಲಾಗುವುದು’ ಎಂದು ಅರಿಕೆ ಮಾಡಿದರು.

ರಂಜಾನ್‌ ಮಾಸದಲ್ಲಿ ಮಸೀದಿಯಲ್ಲಿ ವಝೂ ನಿರ್ವಹಿಸಲು ಅನುಮತಿ ನೀಡುವಂತೆ ಕೋರಿ ಅಂಜುಮಾನ್‌ ಇಂತೆಜಾಮಿಯಾ ಮಸೀದಿ ಕಮಿಟಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಇದರ ವಿಚಾರಣೆ ನಡೆಸಿದ ಸಿಜೆಐ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ, ಮಸೀದಿಯೊಳಗೆ ವಝೂ ನಿರ್ವಹಿಸಲು ಮತ್ತು ಪ್ರಾರ್ಥನೆಗೆಂದು ಬರುವವರಿಗೆ ಶೌಚಾಲಯದ ವ್ಯವಸ್ಥೆ ಕಲ್ಪಿಸುವಂತೆ ಕಳೆದ ವರ್ಷದ ಮೇ 20ರಂದೇ ಆದೇಶ ಹೊರಡಿಸಿದ್ದೆವು. ಈ ಕೂಡಲೇ ಇದರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿತು.

Advertisement

Udayavani is now on Telegram. Click here to join our channel and stay updated with the latest news.

Next