ಅಸ್ಸಾಂ: ಅಂಬ್ಯುಲೆನ್ಸ್ ನಲ್ಲಿಟ್ಟುಕೊಂಡು ಸಾಗಿಸುತ್ತಿದ್ದ 14 ಕೋಟಿ.ರೂ ಮೌಲ್ಯದ ಡ್ರಗ್ಸನ್ನು ಗುವಾಹಟಿ ಪೊಲೀಸರು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿರುವ ಘಟನೆ ಮಂಗಳವಾರ (ಡಿ.13 ರಂದು) ರಾತ್ರಿ ನಡೆದಿದೆ.
ಗುಪ್ತ ಮಾಹಿತಿಯನ್ನು ಆಧಾರಿಸಿ ಗುವಾಹಟಿ ನಗರ ಪೊಲೀಸ್ ಜಂಟಿ ಆಯುಕ್ತ ಪಾರ್ಥ ಸಾರಥಿ ಮಹಾಂತ ಮತ್ತು ಎಡಿಸಿಪಿ ಕಲ್ಯಾಣ್ ಪಾಠಕ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ, 50,000 ನಿಷೇಧಿತ ಮಾತ್ರೆ, 200 ಗ್ರಾಂ ಹೆರಾಯಿನ್ ಗಳನ್ನು ವಶಕ್ಕೆ ಪಡೆದು, ಅಂಬ್ಯುಲೆನ್ಸ್ ಚಾಲಕ ಮಿರಾಜೌಲ್ ಇಸ್ಲಾಂ ಎಂಬಾತನನ್ನು ಬಂಧಿಸಿದೆ.
ಇದನ್ನೂ ಓದಿ:ತಾಯಿಯ ಅಂತ್ಯಕ್ರಿಯೆಗೆ ಹಣವಿಲ್ಲದ ಕಾರಣ ಮನೆಯಲ್ಲೇ ದೇಹವನ್ನು ಅಡಗಿಸಿಟ್ಟ ಮಗ.!
ಎಂಎನ್-03ಸಿ-0037 ನೋಂದಣಿ ಸಂಖ್ಯೆಯ ಆಂಬ್ಯುಲೆನ್ಸ್ ಮಣಿಪುರದಿಂದ ಬರುತ್ತಿತ್ತು. ನಾವು 50,000 ನಿಷೇಧಿತ ಮಾತ್ರೆ, 200 ಗ್ರಾಂ ಹೆರಾಯಿನ್ ಗಳನ್ನು ವಶಕ್ಕೆ ಪಡೆದು, ಅಂಬ್ಯುಲೆನ್ಸ್ ಚಾಲಕ ಮಿರಾಜೌಲ್ ಇಸ್ಲಾಂ ಎಂಬಾತನನ್ನು ಬಂಧಿಸಿದ್ದೇವೆ. ಇದರ ಒಟ್ಟು ಮೌಲ್ಯ 14.10 ಕೋಟಿ ರೂ. ಆಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಪಾರ್ಥ ಸಾರಥಿ ಮಹಾಂತ ಹೇಳಿದ್ದಾರೆ.